ಪೋಷಕರ ಅನುಮತಿಯಿಲ್ಲದೆ ಮಕ್ಕಳಿಗೆ ಸಾಂಟಾ ಕ್ಲಾಸ್ ವೇಷ ತೊಡಿಸಬಾರದು; ಶಿಕ್ಷಣ ಇಲಾಖೆ ಆದೇಶ

ಕ್ರಿಸ್‌ಮಸ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಾಂಟಾ ಕ್ಲಾಸ್ ವೇಷಭೂಷಣ ಧರಿಸುವ ಮೊದಲು ಖಾಸಗಿ ಶಾಲೆಗಳು ಪೋಷಕರಿಂದ ಲಿಖಿತ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯು ಎಲ್ಲಾ ಸರ್ಕಾರೇತರ ಶಿಕ್ಷಣ ಸಂಸ್ಥೆಗಳಿಗೆ ಪತ್ರವನ್ನು ನೀಡಿದೆ.

ಪೋಷಕರ ಅನುಮತಿಯಿಲ್ಲದೆ ಮಕ್ಕಳಿಗೆ ಸಾಂಟಾ ಕ್ಲಾಸ್ ವೇಷ ತೊಡಿಸಬಾರದು; ಶಿಕ್ಷಣ ಇಲಾಖೆ ಆದೇಶ
Christmas Day 2023Image Credit source: Pinterest
Follow us
|

Updated on: Dec 23, 2023 | 5:17 PM

ಭೂಪಾಲ್: ಡಿಸೆಂಬರ್ 25 ರಂದು ಕ್ರಿಸ್‌ಮಸ್ ಹಬ್ಬಕ್ಕೆ ಮುಂಚಿತವಾಗಿ ಶಾಲೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅನೇಕ ಶಾಲೆಗಳು ಕ್ರಿಶ್ಚಿಯನ್ ಹಬ್ಬಗಳ ಸಂದರ್ಭದಲ್ಲಿ ಸಾಂಟಾ ಕ್ಲಾಸ್ ವೇಷಭೂಷಣವನ್ನು ಮಕ್ಕಳಿಗೆ ತೊಡಿಸಿ,ಕಾರ್ಯಕ್ರಮವನ್ನು ಆಯೋಜಿಸುವುದುಂಟು. ಆದರೆ, ಖಾಸಗಿ ಶಾಲೆಗಳು ಈ ಉಡುಗೆ ತೊಡಿಸುವ ಮುನ್ನ ಪೋಷಕರಿಂದ ಲಿಖಿತ ಅನುಮತಿ ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕುಟುಂಬದವರ ಅನುಮತಿ ಪಡೆಯದೆ ಮಕ್ಕಳು ಇಂತಹ ಉಡುಗೆ ತೊಟ್ಟರೆ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಶಾಲೆಯ ಕ್ರಿಸ್ಮಸ್ ಈವೆಂಟ್‌ಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಸಾಂಟಾ ಕ್ಲಾಸ್‌ನಂತೆ ವೇಷ ಧರಿಸುತ್ತಾರೆ. ಆದರೆ, ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಇದರ ಪ್ರಕಾರ ಕ್ರಿಸ್ ಮಸ್ ಹಬ್ಬದಂದು ಸಾಂತಾಕ್ಲಾಸ್ ವೇಷಭೂಷಣ ಧರಿಸುವ ಮುನ್ನ ಪೋಷಕರ ಲಿಖಿತ ಅನುಮತಿ ಪಡೆಯಬೇಕು ಎಂದು ಖಾಸಗಿ ಶಾಲೆಗಳು ಎಲ್ಲಾ ಸರ್ಕಾರೇತರ ಸಂಸ್ಥೆಗಳಿಗೆ ಪತ್ರ ನೀಡಿವೆ.

ಇದನ್ನೂ ಓದಿ: ಪತ್ನಿಯ ಮೇಲಿನ ಕೋಪಕ್ಕೆ ರಸ್ತೆಬದಿ ನಿಲ್ಲಿಸಿದ್ದ 20 ಕಾರುಗಳ ಗಾಜು ಹೊಡೆದು ಕೋಪ ತೀರಿಸಿಕೊಂಡ ಪತಿರಾಯ

ಜಿಲ್ಲಾ ಶಿಕ್ಷಣಾಧಿಕಾರಿ ವಿವೇಕ್ ದುಬೆ ಅವರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಪೋಷಕರ ಅನುಮತಿಯಿಲ್ಲದೆ ಯಾವುದೇ ಶಾಲಾ ಆಡಳಿತ ಮಂಡಳಿಯು ಸಾಂತಾಕ್ಲಾಸ್ ವೇಷಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ . ಪೋಷಕರ ಅನುಮತಿ ಇಲ್ಲದೆ ಮಕ್ಕಳಿಗೆ ವೇಷ ತೊಡಿಸುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಶಾಲೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಣ ಇಲಾಖೆಯ ಈ ಪತ್ರವನ್ನು ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳಿಗೂ ನೀಡಲಾಗಿದೆ. ಈವೆಂಟ್‌ಗಾಗಿ ವಿಶೇಷ ಹಬ್ಬದ ಉಡುಪನ್ನು ಧರಿಸಲು ಮಕ್ಕಳನ್ನು ಒತ್ತಾಯಿಸಲಾಗುತ್ತದೆ. ಇದು ಅಹಿತಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹಾಗಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ವಿಶ್ವ ಹಿಂದೂ ಪರಿಷತ್ ಕೂಡ ಈ ಕುರಿತು ಶಾಲೆಗಳಿಗೆ ಪತ್ರ ಬರೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ