ಲಿಫೋರ್ನಿಯಾದ ಹಿಂದೂ ದೇವಸ್ಥಾನ ಧ್ವಂಸ: ತನಿಖೆ ಹೊಣೆ ಹೊತ್ತ ಅಮೆರಿಕಾ
ಅಮೆರಿಕಾದ ಕ್ಯಾಲಿಫೋರ್ನಿಯಾದ ಹಿಂದೂ ದೇವಸ್ಥಾನದ ಮೇಲೆ ಖಲಿಸ್ತಾನ ಬೆಂಬಲಿಗರು ದಾಳಿ ಮಾಡಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದು ಹಾನಿ ಮಾಡಲಾಗಿದೆ. ಸದ್ಯ ಈ ಘಟನೆ ಬಗ್ಗೆ ಅಮೆರಿಕಾ ಖಂಡಿಸಿದ್ದು, ತನಿಖೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಕ್ಯಾಲಿಫೋರ್ನಿಯಾ, ಡಿಸೆಂಬರ್ 23: ಅಮೆರಿಕಾದ ಕ್ಯಾಲಿಫೋರ್ನಿಯಾದ ಹಿಂದೂ ದೇವಸ್ಥಾನ (Hindu temple) ದ ಮೇಲೆ ಖಲಿಸ್ತಾನ ಬೆಂಬಲಿಗರು ದಾಳಿ ಮಾಡಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದು ಹಾನಿ ಮಾಡಲಾಗಿದೆ. ಸದ್ಯ ಈ ಘಟನೆ ಬಗ್ಗೆ ಅಮೆರಿಕಾ ಖಂಡಿಸಿದ್ದು, ಇದು ದ್ವೇಷದ ಅಪರಾಧವಾಗಿದ್ದು, ಸಂಪೂರ್ಣ ತನಿಖೆ ನಡೆಸುವ ಭರವಸೆಯನ್ನು ನೀಡಿದೆ.
ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ ಹಿಂದೂ ದೇವಾಲಯದ ಗೋಡೆ ಮೇಲೆ ಭಾರತ ವಿರೋಧಿ ಬರವಣಿಗಳು ಕಂಡುಬಂದಿವೆ.
ಇದನ್ನೂ ಓದಿ: 303 ಭಾರತೀಯರಿದ್ದ ವಿಮಾನ ಫ್ರಾನ್ಸ್ನಲ್ಲಿ ಲ್ಯಾಂಡ್: ಮಾನವ ಕಳ್ಳಸಾಗಣೆ ಶಂಕೆ
‘ಕ್ಯಾಲಿಫೋರ್ನಿಯಾದ ಶ್ರೀ ಸ್ವಾಮಿನಾರಾಯಣ ಹಿಂದೂ ದೇವಾಲಯದ ಧ್ವಂಸವನ್ನು ನಾವು ಖಂಡಿಸುತ್ತೇವೆ. ಕೃತ್ಯವೆಸಗಿದವರನ್ನು ಹೊಣೆಗಾರರನ್ನಾಗಿ ಮಾಡಲು ನೆವಾರ್ಕ್ ಪೊಲೀಸ್ ಇಲಾಖೆಯ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ದಕ್ಷಿಣ ಮತ್ತು ಮಧ್ಯ ಏಷ್ಯಾದ ವ್ಯವಹಾರಗಳ ಘಟಕ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
PTI ಪ್ರಕಾರ ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಸಿಟಿ ಆಫ್ ನೆವಾರ್ಕ್ ಪೊಲೀಸ್ ಇಲಾಖೆಯು ಶುಕ್ರವಾರದಂದು ಸುಮಾರು 8:35 am ಕ್ಕೆ, ನೆವಾರ್ಕ್ ಪೊಲೀಸರು ಶ್ರೀ ಸ್ವಾಮಿನಾರಾಯಣ ಮಂದಿರ ಹಿಂದೂ ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳ ಬರವಣಿಗೆ ಘಟನೆಯನ್ನು ದಾಖಲಿಸಿಕೊಂಡಿದೆ.
ಇದನ್ನೂ ಓದಿ: 2023ರ ವಿಶ್ವದ ಅತ್ಯುತ್ತಮ ಮತ್ತು ಕಳಪೆ ಸೇವೆ ನೀಡಿದ ವಿಮಾನ ನಿಲ್ದಾಣಗಳು: ಭಾರತಕ್ಕೆ ಯಾವ ಸ್ಥಾನ?
ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ದೇವಾಲಯದ ಮುಖಂಡರನ್ನು ಭೇಟಿ ಮಾಡಿದ್ದಾರೆ. ಅವರು ಬೆದರಿಕೆ ಹಾಕುವ ಉದ್ದೇಶದಿಂದ ಈ ವಿಧ್ವಂಸಕ ಕೃತ್ಯವನ್ನು ಮಾಡಿರುವುದಾಗಿ ಹೇಳಿದ್ದಾರೆ.
ಗೋಡೆಬರಹದ ವಿಷಯದ ಆಧಾರದ ಮೇಲೆ ವಿರೂಪಗೊಳಿಸುವಿಕೆಯು ಉದ್ದೇಶಿತ ಕೃತ್ಯ ಎಂದು ನಂಬಲಾಗಿದೆ ಮತ್ತು ವಿಧ್ವಂಸಕತೆಯನ್ನು ಸಂಭವನೀಯ ದ್ವೇಷದ ಅಪರಾಧವೆಂದು ತನಿಖೆ ಮಾಡಲಾಗುತ್ತಿದೆ” ಎಂದು ಹೇಳಿಕೆ ತಿಳಿಸಿದೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ದೇವಾಲಯದ ವಿರೂಪಗೊಳಿಸುವಿಕೆಯನ್ನು ಬಲವಾಗಿ ಖಂಡಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.