ಕಳೆದ ಕೆಲವು ವರ್ಷಗಳಲ್ಲಿ, ಜನರ ಜೀವನಶೈಲಿ ಹಲವಾರು ರೀತಿಯಲ್ಲಿ ಬದಲಾಗಿದೆ. ಹಾಗಾಗಿ ಆಹಾರ ಪದ್ಧತಿಯೂ ಹದಗೆಡುತ್ತಿದೆ. ಈ ಕಾರಣದಿಂದಾಗಿ, ಅನೇಕ ರೋಗಗಳ ವ್ಯಾಪ್ತಿ ಹೆಚ್ಚುತ್ತಾ ಬರುತ್ತಿದೆ. ಈ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕೂಡ ಒಂದು. ಈ ಕೆಟ್ಟ ಕೊಲೆಸ್ಟ್ರಾಲ್ ಪ್ರತಿವರ್ಷ ಹೆಚ್ಚುತ್ತಿವೆ. ಚಿಕ್ಕ ವಯಸ್ಸಿನಲ್ಲಿಯೇ ಜನರು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಸಹ ಏರಿಕೆಯಾಗುತ್ತಿವೆ. ಹೆಚ್ಚುತ್ತಿರುವ ಕೊಲೆಸ್ಟ್ರಾಲ್ನ ಅನೇಕ ಲಕ್ಷಣಗಳು ನಿಮಗೆ ಗೋಚರಿಸುತ್ತವೆ, ಆದರೆ ಅದರ ಜೊತೆಗೆ ಈಗ ಶ್ರವಣ ನಷ್ಟವೂ ಕೂಡ ಒಂದು ಲಕ್ಷಣವಾಗಿರಬಹುದು ಎಂದು ತಿಳಿದು ಬಂದಿದೆ. ದೀರ್ಘಕಾಲದವರೆಗೆ ಕೊಲೆಸ್ಟ್ರಾಲ್ ಹೆಚ್ಚಾದರೆ, ಅದು ಕಿವುಡುತನಕ್ಕೂ ಕಾರಣವಾಗಬಹುದು ಎಂದು ಸಂಶೋಧನಗೆಗಳು ತಿಳಿಸಿವೆ.
ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ, ಅಪಧಮನಿಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಇದರ ಜತೆಗೆ ಶ್ರವಣ ನಷ್ಟಕ್ಕೂ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ನ ಆರೋಗ್ಯ ತಜ್ಞ ಪೀಟರ್ ಬೈರೋಮ್ ಪ್ರಕಾರ, ವ್ಯಕ್ತಿಯ ಶ್ರವಣ ನಷ್ಟವು ಹೆಚ್ಚಿನ ಕೊಲೆಸ್ಟ್ರಾಲ್ನ ಲಕ್ಷಣವಾಗಿರಬಹುದು.
ಕೊಲೆಸ್ಟ್ರಾಲ್ ಅಪಧಮನಿಗಳನ್ನು ಕಿರಿದಾಗಿಸುತ್ತದೆ, ಇದರಿಂದಾಗಿ ರಕ್ತದ ಹರಿವು ಸರಿಯಾಗಿ ನಡೆಯುವುದಿಲ್ಲ ಎಂದು ಪೀಟರ್ ಬೈರೋಮ್ ಹೇಳಿದರು. ಕಿವಿಗಳು ಉತ್ತಮ ರಕ್ತ ಪರಿಚಲನೆಯ ಮೇಲೆ ಅವಲಂಬಿತವಾಗಿರುವುದರಿಂದ, ಅಪಧಮನಿಗಳಲ್ಲಿ ಯಾವುದೇ ಅಡೆ ತಡೆ ಇದ್ದರೂ ಅದು ಕೇಳುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಅಧಿಕ ಕೊಲೆಸ್ಟ್ರಾಲ್ನಿಂದ ಬಳಲುತ್ತಿರುವವರು ದೊಡ್ಡ ಶಬ್ದಗಳನ್ನು ಕೇಳಲು ಮತ್ತು ಗದ್ದಲದ ವಾತಾವರಣದಲ್ಲಿ ಸಂಭಾಷಣೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ಕ್ರಮೇಣ ಕೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿ: ಅಧಿಕ ಕೊಲೆಸ್ಟ್ರಾಲ್ನಿಂದಾಗಿ ದೇಹದಲ್ಲಿ ಈ ಲಕ್ಷಣಗಳು ಕಂಡುಬರಬಹುದು
ಸಫ್ದರ್ಜಂಗ್ ಆಸ್ಪತ್ರೆಯ ಔಷಧ ವಿಭಾಗದ ಪ್ರೊಫೆಸರ್ ಎಚ್ಒಡಿ ಡಾ. ಜುಗಲ್ ಕಿಶೋರ್ ಅವರು ಹೇಳುವ ಪ್ರಕಾರ ಕೊಲೆಸ್ಟ್ರಾಲ್ ಹೆಚ್ಚಳದಿಂದ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ಕೆಲವು ಸಂದರ್ಭಗಳಲ್ಲಿ, ಇದು ಕಿವಿಗಳಿಗೆ ಹಾನಿಕಾರಕವಾಗಬಹುದು. ಇದರ ಪರಿಣಾಮ ಎರಡೂ ಕಿವಿಗಳು ಶ್ರವಣ ನಷ್ಟ ಅನುಭವಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಕೊಲೆಸ್ಟ್ರಾಲ್ ಅನ್ನು ಒಮ್ಮೆ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಏಕೆಂದರೆ ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ ಅದನ್ನು ತಕ್ಷಣ ನಿಯಂತ್ರಿಸಬೇಕು.
ಅಧಿಕ ರಕ್ತದೊತ್ತಡ
ದಣಿವು
ವಾಕರಿಕೆ
ಕೈ ಮತ್ತು ಕಾಲುಗಳ ಮರಗಟ್ಟುವಿಕೆ
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಹೇಗೆ?
ಹೆಚ್ಚು ಕೊಬ್ಬು ಗಳಿರುವ ಆಹಾರವನ್ನು ಸೇವಿಸಬೇಡಿ.
ಕರಿದ ಆಹಾರವನ್ನು ತಿನ್ನಬೇಡಿ.
ಪ್ರತಿದಿನ ವ್ಯಾಯಾಮ ಮಾಡಿ.
ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ.
ಧೂಮಪಾನ ಮಾಡಬೇಡಿ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:00 pm, Tue, 8 August 23