Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನ ಎಣ್ಣೆ ಕುಡಿದರೆ ಏನಾಗುತ್ತೆ ನೋಡಿ

ತೆಂಗಿನ ಎಣ್ಣೆ ಸೇವನೆ ಮಾಡುವವನಿಗೆ ಕಾಯಿಲೆ ಇಲ್ಲ ಎನ್ನು ಮಾತಿನಂತೆ ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ರೀತಿಯಲ್ಲಿ ಅಮೃತವಾಗಿದೆ. ಹಾಗಾಗಿ ಹಿಂದಿನ ಕಾಲದಿಂದಲೂ ಇದನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಜೊತೆಗೆ ಇದನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಲಾಗುತ್ತದೆ. ಇದು ಕೆಲವರಿಗೆ ಅಚ್ಚರಿ ಎನಿಸಬಹುದು. ಆದರೆ ಈ ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಂಡಲ್ಲಿ ಅನೇಕ ಕಾಯಿಲೆಗಳು ಬರದಂತೆ ನೋಡಿಕೊಳ್ಳಬಹುದು. ಹಾಗಾದರೆ ಇದರಿಂದ ಸಿಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನ ಎಣ್ಣೆ ಕುಡಿದರೆ ಏನಾಗುತ್ತೆ ನೋಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 30, 2025 | 3:44 PM

ಆಯುರ್ವೇದದಲ್ಲಿ, ತೆಂಗಿನ ಎಣ್ಣೆಯನ್ನು ಅಮೃತಕ್ಕೆ ಹೋಲಿಸಲಾಗುತ್ತದೆ. ಏಕೆಂದರೆ ಇದರಲ್ಲಿರುವಷ್ಟು ಆರೋಗ್ಯ ಪ್ರಯೋಜನಗಳು ಬೇರೆ ಯಾವುದರಲ್ಲಿಯೂ ಇಲ್ಲ. ಇದು ಸಂಶೋಧನೆಗಳಿಂದಲೂ ಸಾಬೀತಾಗಿದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ಕೂದಲಿನ ಆರೋಗ್ಯದಿಂದ ಹಿಡಿದು ದೇಹದ ಪ್ರತಿಯೊಂದು ಭಾಗವನ್ನು ಚೆನ್ನಾಗಿ ಇಟ್ಟುಕೊಳ್ಳಲು ಇದು ಸಹಕಾರಿಯಾಗಿದೆ. ಹಾಗಾಗಿ ಹಿಂದಿನ ಕಾಲದಿಂದಲೂ ಇದನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ತೆಂಗಿನ ಎಣ್ಣೆ ಸೇವನೆ ಮಾಡುವವನಿಗೆ ಕಾಯಿಲೆ ಇಲ್ಲ ಎನ್ನು ಮಾತಿನಂತೆ ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ರೀತಿಯಲ್ಲಿ ಅಮೃತವಾಗಿದೆ. ಹಾಗಾಗಿ ಇದನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಲಾಗುತ್ತದೆ. ಇದು ಕೆಲವರಿಗೆ ಅಚ್ಚರಿ ಎನಿಸಬಹುದು. ಆದರೆ ಈ ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಂಡಲ್ಲಿ ಅನೇಕ ಕಾಯಿಲೆಗಳು ಬರದಂತೆ ನೋಡಿಕೊಳ್ಳಬಹುದು. ಹಾಗಾದರೆ ಇದರಿಂದ ಸಿಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಪಿಸಿಒಎಸ್ ಅಥವಾ ಪಿಸಿಒಡಿ ಸಮಸ್ಯೆ ಇರುವವರಿಗೆ ಒಳ್ಳೆಯದು

ಸಾಮಾನ್ಯವಾಗಿ ತೆಂಗಿನ ಎಣ್ಣೆಯಲ್ಲಿ ಉತ್ತಮ ಕೊಬ್ಬು ಇರುತ್ತದೆ. ಇದು ದೇಹಕ್ಕೆ ಬಹಳ ಮುಖ್ಯ. ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ತಮ ಕೊಬ್ಬು ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ಜೊತೆಗೆ ಪಿಸಿಒಎಸ್ ಅಥವಾ ಪಿಸಿಒಡಿ ಸಮಸ್ಯೆ ಇದ್ದರೂ ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆಯನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇದು ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ. ಏಕೆಂದರೆ ಪಿಸಿಒಡಿ ಸಮಸ್ಯೆ ಇದ್ದರೆ, ಅವರು ಇನ್ಸುಲಿನ್ ಪ್ರತಿರೋಧದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹಾಗಾಗಿ ಹಸಿ ತೆಂಗಿನ ಎಣ್ಣೆಯನ್ನು ಸೇವಿಸಿದಾಗ, ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕೊಬ್ಬಿನ ಶೇಖರಣೆಯಿಂದಾಗಿ ದೇಹದಲ್ಲಿ ಸಕ್ಕರೆಯ ಸ್ಪೈಕ್ ಅನ್ನು ಕಡಿಮೆ ಮಾಡುತ್ತದೆ. ಇದು ಇನ್ಸುಲಿನ್ ಪ್ರತಿರೋಧ ಮತ್ತು ವಿಭಜನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ಸಮಸ್ಯೆ ಇದ್ದರೆ ಬಾದಾಮಿ ಸೇವನೆ ಮಾಡಬೇಡಿ

ಥೈರಾಯ್ಡ್ ಸಮಸ್ಯೆಯಿಂದ ಮೂಲವ್ಯಾಧಿ ವರೆಗೆ ಎಲ್ಲಾ ಸಮಸ್ಯೆಗೂ ರಾಮಬಾಣ

ಇನ್ನು ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ವಿಶೇಷ ಗುಣಲಕ್ಷಣಗಳನ್ನು ಹೊಂದಿವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಇವುಗಳನ್ನು ತ್ವರಿತ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಹಾಗಾಗಿ ತೆಂಗಿನ ಎಣ್ಣೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು, ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆಯನ್ನು ಕುಡಿಯುವುದು ಸಾಕಷ್ಟು ರೀತಿಯಲ್ಲಿ ಪರಿಹಾರ ನೀಡುತ್ತದೆ.

ಹಸಿ ತೆಂಗಿನ ಎಣ್ಣೆಯನ್ನು ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ತೆಗೆದುಕೊಂಡರೆ, ಯಾವುದೇ ರೀತಿಯ ನೋವು ಕೂಡ 3 ರಿಂದ 4 ದಿನಗಳಲ್ಲಿ ಕಡಿಮೆಯಾಗುತ್ತದೆ. ಜೊತೆಗೆ ಖಾಲಿ ಹೊಟ್ಟೆಯಲ್ಲಿ ಹಸಿ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ, ಋತುಮಾನದಲ್ಲಿ ಪದೇ ಪದೇ ಬರುವಂತಹ ಕಾಯಿಲೆಗಳನ್ನು ತಡೆಯಬಹುದು. ನೀವು ಬೆಳಿಗ್ಗೆ ಬೇಗನೆ ಎದ್ದು ತೆಂಗಿನ ಎಣ್ಣೆಯನ್ನು ಕುಡಿಯುವುದರಿಂದ ದೇಹ ಮತ್ತು ಮನಸ್ಸು ಶಾಂತವಾಗಿರುತ್ತದೆ. ಜೊತೆಗೆ ಇದು ಆತಂಕ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಕೊಬ್ಬಿನಾಮ್ಲಗಳು ನಿಮ್ಮ ಮನಸ್ಥಿತಿಯನ್ನು ಶಾಂತಗೊಳಿಸಲು ನೆರವಾಗುತ್ತದೆ.

ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ, ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Thu, 30 January 25

ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್