Common Kidney Disorders: ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೂತ್ರಪಿಂಡದ ಸಮಸ್ಯೆಗೆ ಕಾರಣ, ಲಕ್ಷಣ, ಚಿಕಿತ್ಸೆ ಇಲ್ಲಿದೆ

ಮೂತ್ರಪಿಂಡದ ಕಾಯಿಲೆಗಳು ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆರಂಭಿಕ ಹಂತದಲ್ಲಿಯೇ ಈ ಕಾಯಿಲೆಗಳನ್ನು ಪತ್ತೆಹಚ್ಚುವ ಮೂಲಕ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು. ಈ ನಿಟ್ಟಿನಲ್ಲಿ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುವ ವಿವಿಧ ಅಸ್ವಸ್ಥತೆಗಳು ಯಾವುವು, ಅದಕ್ಕೆ ಕಾರಣಗಳು ಮತ್ತು ಅದರ ಪರಿಣಾಮಕಾರಿ ಚಿಕಿತ್ಸೆ ಹೇಗೆ ಎಂಬ ಸಲಹೆಯನ್ನು ಆರೋಗ್ಯ ತಜ್ಞರು ಹಂಚಿಕೊಂಡಿದ್ದಾರೆ.

Common Kidney Disorders: ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೂತ್ರಪಿಂಡದ ಸಮಸ್ಯೆಗೆ ಕಾರಣ, ಲಕ್ಷಣ, ಚಿಕಿತ್ಸೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 24, 2023 | 6:33 AM

ದೇಹದ ಚಲನೆಯಲ್ಲಿ ಮೂತ್ರಪಿಂಡದ ಕಾರ್ಯ ಬಹಳ ಮುಖ್ಯ. ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಮೂಲಕ ಮತ್ತು ಹಾರ್ಮೋನುಗಳನ್ನು ಉತ್ಪಾದಿಸುವ ಮೂಲಕ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದಲ್ಲದೆ ಮೂತ್ರಪಿಂಡವು ದೇಹದಲ್ಲಿನ ಪಿಹೆಚ್, ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟವನ್ನು ನಿಯಂತ್ರಿಸುತ್ತದೆ. ಅಲ್ಲದೆ ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತು ಕೆಂಪುರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುವ ಹಾರ್ಮೋನುಗಳನ್ನು ಸಹ ಉತ್ಪಾದಿಸುತ್ತದೆ. ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುವ ವಿವಿಧ ಕಾಯಿಲೆಗಳು ಈ ಅಗತ್ಯ ಕಾರ್ಯಗಳನ್ನು ನಿರ್ವಹಿಸವಲ್ಲಿ ಅಡ್ಡಿಪಡಿಸಬಹುದು. ಮತ್ತು ಇದು ಗಮನಾರ್ಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗೆ ಸಾಮಾನ್ಯವಾಗಿ ಮೂತ್ರಪಿಂಡಗಳಲ್ಲಿ ಕಾಣಿಸಿಕೊಳ್ಳುವ ಅಸ್ವಸ್ಥತೆಗಳು, ಅವುಗಳ ಕಾರಣಗಳು, ಲಕ್ಷಣಗಳು ಮತ್ತು ಅದರ ಸೂಕ್ತ ಚಿಕಿತ್ಸೆಯ ಬಗ್ಗೆ ತಜ್ಞರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೆಚ್.ಟಿ ಲೈಫ್​​​ಸ್ಟೈಲ್​​ನ ಸಂದರ್ಶನದಲ್ಲಿ ದೆಹಲಿಯ ಇಂಡಿಯನ್ ಸ್ಪೈನಲ್ ಇನ್ಜ್ಯುರೀಸ್ ಸೆಂಟರ್​​ನ ಜನರಲ್ ಯುರೋಲಾಜಿ ಮತ್ತು ಆಂಡ್ರೋಲಜಿ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಜೈನ್ ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು ಅದರ ಲಕ್ಷಣ ಮತ್ತು ಕಾರಣಗಳನ್ನು ತಿಳಿಸಿದ್ದಾರೆ.

ಮೂತ್ರಪಿಂಡದ ಕಾಯಿಲೆಗಳು:

ಮೂತ್ರಪಿಂಡದ ಕಲ್ಲು: ಮೂತ್ರದಲ್ಲಿ ಹೆಚ್ಚು ಲವಣಾಂಶಗಳು ಶೇಖರಣೆಯಾಗಿ ಘನರೂಪಕ್ಕೆ ಮಾಪಟ್ಟು ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗುತ್ತವೆ.

ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳು(CKD): ಮೂತ್ರಪಿಂಡಗಳು ಹಾನಿಗೊಳಗಾದಾಗ ಮತ್ತು ಅವುಗಳು ಕಾಲಾನಂತರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕಳೆದುಕೊಂಡಾಗ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಕಾಣಿಸಿಕೊಳ್ಳುತ್ತದೆ.

ಗ್ಲೋಮೆರುಲೋನೆಫ್ರಿಟಿಸ್: ಇದರಲ್ಲಿ ಮೂತ್ರಪಿಂಡಗಳಲ್ಲಿನ ಸಣ್ಣ ರಕ್ತನಾಳಗಳು ಉರಿಯೂತ ಮತ್ತು ಹಾನಿಗೊಳಗಾಗುತ್ತದೆ, ಇದು ಮೂತ್ರಪಿಂಡದ ಕಾರ್ಯನಿರ್ವಹಣೆಯ ಸಾಮಾರ್ಥ್ಯವನ್ನು ಕಡಿಮೆ ಮಾಡುತ್ತದೆ.

ಮೂತ್ರಪಿಂಡದ ಕಾಯಿಲೆಗೆ ಕಾರಣಗಳು:

ಡಾ. ಪ್ರಶಾಂತ್ ಜೈನ್ ಅವರು ಮೂತ್ರಪಿಂಡದ ಅಸ್ವಸ್ಥತೆಗಳ ಕಾರಣವನ್ನು ವಿವರಿಸಿದ್ದಾರೆ, ಕಳಪೆ ಮಟ್ಟದ ಆಹಾರ ಸೇವನೆ, ನಿರ್ಜಲೀಕರಣ, ಮಧುಮೇಹ ಅಧಿಕ ರಕ್ತದೊತ್ತಡದಂತಹ ವೈದ್ಯಕೀಯ ಪರಿಸ್ಥಿತಿಗಳು ಮೂತ್ರಪಿಂಡದ ಕಾಯಿಲೆಗೆ ಕಾರಣಗಳಾಗಿವೆ. ಅಂತಹ ಸಂದರ್ಭಗಳಲ್ಲಿ ಮೂತ್ರಪಿಂಡದ ಕಾಯಿಲೆಗೆ ತುತ್ತಾದ ವ್ಯಕ್ತಿಯು ತನ್ನನ್ನು ತಾನು ಕಾಳಜಿ ವಹಿಸಲು ಆರೋಗ್ಯಕರ ಆಹಾರ ಪದ್ದತಿಯನ್ನು ಪಾಲಿಸುವುದು, ಸಾಕಷ್ಟು ನೀರಿನಾಂಶವನ್ನು ಸೇವಿಸುವ ಮೂಲಕ ದೇಹವನ್ನು ಪುನರ್ಜಲೀಕರಣ ಮಾಡುವುದು, ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಸಮತೋಲಿತ ಜೀವನಶೈಲಿಯನ್ನು ಪಾಲಿಸಬೇಕು ಹಾಗೂ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು. ಜೊತೆಗೆ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಬಹುದಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ವೈದ್ಯಕೀಯ ಪರಿಸ್ಥಿತಿಯನ್ನು ಸರಿಯಾರಿ ನಿರ್ವಹಿಸುವುದು ಸಹ ಮುಖ್ಯವಾಗಿದೆ.

ಇದನ್ನೂ ಓದಿ:Kidney Cancer: ಕಿಡ್ನಿ ಕ್ಯಾನ್ಸರ್ ರೋಗಲಕ್ಷಣಗಳ ಬಗೆಗಿನ ಮಿಥ್ಯ ಹಾಗೂ ಸತ್ಯಗಳು ಇಲ್ಲಿವೆ

ರೋಗಲಕ್ಷಣಗಳು:

ಮೂತ್ರಪಿಂಡದ ಕಾಯಿಲೆಗಳು ವಿವಿಧ ರೋಗಲಕ್ಷಣಗಳೊಂದಿಗೆ ಕಂಡುಬರಬಹುದು ಮತ್ತು ನಿರ್ದಿಷ್ಟ ರೋಗಲಕ್ಷಣಗಳು ರೋಗದ ಪ್ರಕಾರ ಮತ್ತು ತೀವ್ರತೆಯನ್ನು ಅವಲಂಬಿಸಿ ಬದಲಾಗಬಹುದು. ಮೂತ್ರ ಪಿಂಡದ ಕಾಯಿಲೆಗೆ ಸಂಬಂಧಿಸಿದ ಕೆಲವು ಸಾಮಾನ್ಯ ಲಕ್ಷಣಗಳನ್ನು ಡಾ. ಪ್ರಶಾಂತ್ ಜೈನ್ ಬಹಿರಂಗಪಡಿಸಿದ್ದಾರೆ:

ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ:

• ಆಯಾಸ ಮತ್ತು ದೌರ್ಬಲ್ಯ

• ಕೈಗಳು, ಪಾದಗಳು ಅಥವಾ ಕಣಕಾಲುಗಳಲ್ಲಿ ಊತ

• ಆಗಾಗ್ಗೆ ಮೂತ್ರ ವಿಸರ್ಜನೆ, ವಿಶೇಷವಾಗಿ ರಾತ್ರಿಯಲ್ಲಿ

• ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು

• ನೊರೆಯುಕ್ತ ಮೂತ್ರ

• ನಿರಂತರ ತುರಿಕೆ

• ಅಧಿಕ ರಕ್ತದೊತ್ತಡ

• ಹಸಿವಾಗದಿರುವುದು ಮತ್ತು ತೂಕ ನಷ್ಟ

ಮೂತ್ರಪಿಂಡದ ಕಲ್ಲು:

• ಬೆನ್ನು ನೋವು

• ಕಿಬ್ಬೊಟ್ಟೆ ಮತ್ತು ತೊಡೆಸಂದುಗಳಲ್ಲಿ ನೋವು ಕಾಣಿಸಿಕೊಳ್ಳುವುದು

• ವಾಸನೆಯುಕ್ತ ಮೂತ್ರ

• ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಮೂತ್ರ ವಿಸರ್ಜಿಲು ತುರ್ತು

• ವಾಕರಿಕೆ ಮತ್ತು ವಾಂತಿ

ಗ್ಲೋಮೆರಲೋನೆಫ್ರಿಟಿಸ್:

• ಮೂತ್ರದಲ್ಲಿ ರಕ್ತ

• ನೊರೆಯುಕ್ತ ಮೂತ್ರ

• ಮುಖ, ಕೈಗಳು ಮಾದಗಳು ಅಥವಾ ಹೊಟ್ಟೆಯಲ್ಲಿ ಊತ ಕಾಣಿಸಿಕೊಳ್ಳುವುದು

• ಅಧಿಕ ರಕ್ತದೊತ್ತಡ

• ಕಡಿಮೆ ಮೂತ್ರದ ಉತ್ಪಾದನೆ

• ಆಯಾಸ ಅಥವಾ ದೌರ್ಬಲ್ಯ

• ಉಸಿರಾಟದ ತೊಂದರೆ

• ಕೀಲುನೋವು ಮತ್ತು ಊತ

ಚಿಕಿತ್ಸೆ:

ಡಾ. ಎಲ್.ಎಚ್ ಹಿರಾನಂದಾನಿ ಆಸ್ಪತ್ರೆಯ ಸಿ,ಇ.ಒ. ಡಾ. ಸುಜಿತ್ ಚಟರ್ಜಿ ಅವರು ಮೂತ್ರಪಿಂಡದ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿವಹಿಸಲು ಚಿಕಿತ್ಸೆಯ ಆಯ್ಕೆಗಳನ್ನು ಸೂಚಿಸಿದ್ದಾರೆ.

ದೀರ್ಘಾವಧಿಯ ಮೂತ್ರಪಿಂಡದ ಕಾಯಿಲೆ (CKD):

ಔಷಧಿಗಳು:

ಸೂಕ್ತ ಔಷಧಿಗಳ ಮೂಲಕ ಈ ಮೂತ್ರಪಿಂಡದ ಕಾಯಲೆಯನ್ನು ಗುಣಪಡಿಸಬಹುದು. ನಿರ್ದಿಷ್ಟ ರೋಗಲಕ್ಷಣಗಳನ್ನು ಪರಿಹರಿಸಲು ವೈದ್ಯರು ಸೂಕ್ತ ಔಷಧಿಗಳನ್ನು ಸೂಚಿಸುತ್ತಾರೆ. ಉದಾಹರಣೆಗೆ ರಕ್ತಹೀನತೆಯನ್ನು ನಿರ್ವಹಿಸಲು ಆಂಜಿಯೋಟೆನ್ಸಿನ್-ಕನ್ವರ್ಟಿಂಗ್ ಎನ್ಜಿಮ್(ACE), ಆಂಜಿಯೋಟೆನ್ಸಿನ್ ರಿಸೆಪ್ಟರ್ ಬ್ಲಾಕರ್ಸ್ (ARBs), ಎರಿಥ್ರೋಪೊಯೆಟಿನ್-ಸ್ಟಿಮ್ಯುಲೇಟ್ ಏಜೆಂಟ್ (ESA) ಔಷಧಿ.

ಆಹಾರ ಮತ್ತು ಜೀವನಶೈಲಿ ಮಾರ್ಪಾಡು:

ಸೋಡಿಯಂ, ಪ್ರೋಟೀನ್ ಮತ್ತು ರಂಜಕದಲ್ಲಿ ಕಡಿಮೆ ಇರುವ ಮೂತ್ರಪಿಂಡ ಸ್ನೇಹಿ ಆಹಾರಗಳನ್ನು ಸೇವಿಸಲು ಶಿಪಾರಸು ಮಾಡಿದ್ದಾರೆ. ದೀರ್ಘಾವಧಿಯ ಮೂತ್ರಪಿಂಡದ ಕಾಯಿಲೆಯ ಮುಂದುವರೆದ ಹಂತದಲ್ಲಿ ದ್ರವಾಂಶ ಸೇವನೆಯನ್ನು ಸೀಮಿತಗೊಳಿಸುವುದು ಅಗತ್ಯವಾಗಬಹುದು. ನಿಯಮಿತ ವ್ಯಾಯಾಮ, ತೂಕ ನಿರ್ವಹಣೆ, ಧೂಮಪಾನ ಮತ್ತು ಅತಿಯಾದ ಮದ್ಯಪಾನವನ್ನು ತಪ್ಪಿಸುವುವ ಮೂಲಕ ಒಟ್ಟಾರೆ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಡಯಾಲಿಸಿಸ್:

ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿಗಳಿಗೆ ಡಯಾಲಿಸಿಸ್ ಒಂದು ಜೀವ ಉಳಿಸುವ ಚಿಕಿತ್ಸೆಯಾಗಿದೆ. ಇದು ಹಿಮೋಡಯಾಲಿಸಿಸ್ ಅಥವಾ ಪೆರಿಟೋನಿಯಲ್ ಡಯಾಲಿಸಿಸ್ ಮೂಲಕ ರಕ್ತದಿಂದ ತ್ಯಾಜ್ಯ ಉತ್ಪನ್ನಗಳು ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವುದನ್ನು ಒಳಗೊಂಡಿರುತ್ತದೆ.

ಮೂತ್ರಪಿಂಡ ಕಸಿ:

ಮೂತ್ರಪಿಂಡ ಕಸಿ ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಗೆ ಉತ್ತಮ ದೀರ್ಘಕಾಲಿನ ಚಿಕಿತ್ಸೆಯ ಆಯ್ಕೆಯಾಗಿದೆ. ಇದು ವಿಫಲವಾದ ಮೂತ್ರಪಿಂಡವನ್ನು ದಾನಿಯಿಂದ ಪಡೆದ ಆರೋಗ್ಯಕರ ಮೂತ್ರಪಿಂಡದೊಂದಿಗೆ ಶಸ್ತ್ರಚಿಕಿತ್ಸೆಯ ಮೂಲಕ ಬದಲಾಯಿಸುವುದನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Kidney Cancer: ಕಿಡ್ನಿ ಕ್ಯಾನ್ಸರ್ ರೋಗಲಕ್ಷಣಗಳ ಬಗೆಗಿನ ಮಿಥ್ಯ ಹಾಗೂ ಸತ್ಯಗಳು ಇಲ್ಲಿವೆ

ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆ:

ಆರಂಭಿಕ ಚಿಕಿತ್ಸೆ:

ಸಣ್ಣ ಪ್ರಮಾಣದ ಮೂತ್ರ ಪಿಂಡದ ಕಲ್ಲುಗಳು ಕಾಣಿಸಿಕೊಂಡರೆ ಹೆಚ್ಚು ನೀರು ಸೇವಿಸುವ ಮೂಲಕ ಮತ್ತು ನೋವು ನಿವಾರಕಗಳೊಂದಿಗೆ ಸ್ವಯಂ ಪ್ರೇರಿತವಾಗಿ ಅದನ್ನು ಗುಣಪಡಿಸಬಹುದು.

ವೈದ್ಯಕೀಯ ವಿಧಾನಗಳು:

ಮೂತ್ರಪಿಂಡದಲ್ಲಿ ದೊಡ್ಡ ಕಲ್ಲುಗಳು ಕಾಣಿಸಿಕೊಂಡಾಗ ಅದಕ್ಕೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಎಕ್ಸ್ ಕಾರ್ಪೊರಿಯಲ್ ಶಾಕ್ ವೇವ್ ಲಿಥೊಟ್ಸಿಪ್ಸಿ ಮತ್ತು ಪರಿಣಾಮಕಾರಿ ಶಸ್ತ್ರಚಿಕಿತ್ಸೆಯಾದ ಪೆರ್ಕ್ಯುಟೇನಿಯಸ್ ನೆಪ್ರೊಲಿಥೊಟೊಮಿ ಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕಲ್ಲನ್ನು ತೆಗೆದುಹಾಕಬಹುದು.

ಗ್ಲೋಮೆರುಲೋನೆಫ್ರಿಟಿಸ್:

ಔಷಧಿಗಳು:

ಔಷಧಿಗಳ ಸಹಾಯದಿಂದ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಕಾರ್ಟಿಕೊಸ್ಟೆರಾಯ್ಡ್, ಇಮ್ಯುನೊಸಪ್ರೆಸಿವ್ ಔಷಧಿಗಳು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಪ್ರೋಟಿನುರಿಯವನ್ನು ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗುತ್ತದೆ.

ಆಹಾರದ ಮಾರ್ಪಾಡು:

ಇಲ್ಲಿ ದ್ರವಾಂಶ ಸೇವನೆಯನ್ನು ಕಡಿಮೆ ಮಾಡಲು ಮತ್ತು ಸರಿಯಾದ ರೀತಿಯಲ್ಲಿ ಮೂತ್ರಪಿಂಡ ಕಾರ್ಯವನ್ನು ನಿರ್ವಹಿಸಲು ಸೋಡಿಯಂ ಮತ್ತು ಪ್ರೋಟಿನ್ ಸೇವನೆಯನ್ನು ಸೀಮಿತಗೊಳಿಸವುದುನ್ನು ಶಿಫಾರಸು ಮಾಡಲಾಗುತ್ತದೆ.

ವೈದ್ಯಕೀಯ ಚಿಕಿತ್ಸೆ:

ಸೋಂಕುಗಳು, ಗ್ಲೋಮೆರುಲೋನೆಫ್ರಿಟಿಸ್ ಗೆ ಸಂಬಂಧಿಸಿದ ಇತರ ಅಸ್ವಸ್ಥತೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಪಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ