ಮೂಳೆ ಗಟ್ಟಿಯಾಗಿರಲು ಪ್ರತಿನಿತ್ಯ ಈ ಆಹಾರಗಳನ್ನು ಸೇವನೆ ಮಾಡಿ
ಮೂಳೆಗಳ ಮುರಿತವನ್ನು ತಪ್ಪಿಸಿ ಆರೋಗ್ಯ ಕಾಪಾಡಿಕೊಳ್ಳಲು ಜೊತೆಗೆ ಮೂಳೆ ಗಟ್ಟಿಯಾಗಿರಲು ಆಹಾರ ಕ್ರಮಗಳಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಮೂಳೆಗಳ ಆರೋಗ್ಯ ಮತ್ತು ಶಕ್ತಿ ಹದಗೆಡುತ್ತದೆ. ಹಾಗಾಗಿ ನಮ್ಮ ಒಟ್ಟಾರೆ ಸ್ವಾಸ್ಥ್ಯ ಕಾಪಾಡಲು ಪೋಷಕಾಂಶ ಸಮೃದ್ಧ ಆಹಾರಗಳನ್ನು ಸೇವನೆ ಮಾಡಬೇಕು. ಇದರಿಂದ ಪದೇ ಪದೇ ಮೂಳೆ ಮುರಿತ ಕಡಿಮೆಯಾಗುತ್ತದೆ. ಜೊತೆಗೆ ಆಸ್ಟಿಯೋಪೋರಾಸಿಸ್ ಅಪಾಯ ಕಡಿಮೆಯಾಗುತ್ತದೆ. ಹಾಗಾಗಿ ಬಲವಾದ ಮೂಳೆಗಳನ್ನು ಪಡೆಯಲು ನೀವು ಕೆಲವು ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಹಾಗಾದರೆ ಯಾವ ರೀತಿಯ ಆಹಾರ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಸಾಂದರ್ಭಿಕ ಚಿತ್ರ
ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದು ಒಂದು ರೀತಿಯ ಸವಾಲಾಗಿದೆ. ಅದರಲ್ಲಿಯೂ ಮೂಳೆಗಳ ಮುರಿತವನ್ನು ತಪ್ಪಿಸಿ ಆರೋಗ್ಯ ಕಾಪಾಡಿಕೊಳ್ಳಲು ಜೊತೆಗೆ ಮೂಳೆ ಗಟ್ಟಿಯಾಗಿರಲು ಆಹಾರ ಕ್ರಮಗಳಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಮೂಳೆಗಳ ಆರೋಗ್ಯ ಮತ್ತು ಶಕ್ತಿ ಹದಗೆಡುತ್ತದೆ. ಹಾಗಾಗಿ ನಮ್ಮ ಒಟ್ಟಾರೆ ಸ್ವಾಸ್ಥ್ಯ ಕಾಪಾಡಲು ಪೋಷಕಾಂಶ ಸಮೃದ್ಧ ಆಹಾರಗಳನ್ನು ಸೇವನೆ ಮಾಡಬೇಕು. ಇದರಿಂದ ಪದೇ ಪದೇ ಮೂಳೆ ಮುರಿತ ಕಡಿಮೆಯಾಗುತ್ತದೆ. ಜೊತೆಗೆ ಆಸ್ಟಿಯೋಪೋರಾಸಿಸ್ ಅಪಾಯ ಕಡಿಮೆಯಾಗುತ್ತದೆ. ಹಾಗಾಗಿ ಬಲವಾದ ಮೂಳೆಗಳನ್ನು ಪಡೆಯಲು ನೀವು ಕೆಲವು ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಹಾಗಾದರೆ ಯಾವ ರೀತಿಯ ಆಹಾರ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
- ಮೊಟ್ಟೆಯ ಹಳದಿ ಭಾಗ: ಇದು ಪೋಷಕಾಂಶದಿಂದ ಸಮೃದ್ಧವಾಗಿದ್ದು, ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಕೆ ಹೇರಳವಾಗಿದೆ. ಈ ಎಲ್ಲಾ ಅಂಶಗಳು ಮೂಳೆ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಸಾಲ್ಮನ್: ಇದು ಮೂಳೆಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಒಮೆಗಾ-೩ ಯನ್ನು ಹೆಚ್ಚಿಸುತ್ತದೆ. ಊರಿಯೂತ ಕಡಿಮೆ ಮಾಡಿ ಮೂಳೆಗಳಿಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ.
- ಪಾಲಕ್ ಸೊಪ್ಪು: ಈ ಸೊಪ್ಪು ಹೇರಳವಾಗಿ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಮೂಳೆ ಸಾಂದ್ರತೆಯನ್ನು ಬಲಪಡಿಸುತ್ತದೆ. ಅಲ್ಲದೆ ಇದರಲ್ಲಿ ಕಬ್ಬಿಣ, ವಿಟಮಿನ್ ಎ ಮತ್ತು ಫೈಬರ್ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡಬಹುದು. ಇದರಿಂದ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ.
- ಹಾಲು: ಇದು ಕ್ಯಾಲ್ಸಿಯಂ ಮೂಲವಾಗಿದೆ. ಅಲ್ಲದೆ ಮೂಳೆಗಳ ಆರೋಗ್ಯಕ್ಕೆ ಇದರ ಸೇವನೆ ಅಗತ್ಯವಾಗಿದೆ. ಸಾಧ್ಯವಾದರೆ ಹಾಲನ್ನು ಪ್ರತಿದಿನ ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಮೂಳೆ ಬಹಳ ಗಟ್ಟಿಯಾಗಿರುತ್ತದೆ. ಹಾಗಾಗಿ ತಜ್ಞರು ಮಕ್ಕಳಿಗೆ ಪ್ರತಿನಿತ್ಯ ಹಾಲಿನ ಸೇವನೆ ಮಾಡಲು ಸಲಹೆ ನೀಡುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ