AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Iron Deficiency: ಕಬ್ಬಿಣಾಂಶದ ಕೊರತೆಯೇ? ಈ ಆಹಾರ ಸೇವಿಸಿ

ಕಬ್ಬಿಣಾಂಶ ಆರೋಗ್ಯಕರ ರಕ್ತ ಮತ್ತು ದೇಹದ ಕಾರ್ಯನಿರ್ವಹಣೆಗೆ ಅತ್ಯಂತ ಮುಖ್ಯ. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಉಂಟಾಗಬಹುದು. ಬೀಟ್ ರೂಟ್, ಬೇಳೆಕಾಳು, ಪಾಲಕ್, ಕುಂಬಳಕಾಯಿ ಬೀಜಗಳು ಮತ್ತು ಡಾರ್ಕ್ ಚಾಕೊಲೇಟ್ ನಂತಹ ಆಹಾರಗಳು ಕಬ್ಬಿಣದ ಅತ್ಯುತ್ತಮ ಮೂಲಗಳು. ಈ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಕಬ್ಬಿಣದ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಆರೋಗ್ಯವನ್ನು ಸುಧಾರಿಸಬಹುದು.

Iron Deficiency: ಕಬ್ಬಿಣಾಂಶದ ಕೊರತೆಯೇ? ಈ ಆಹಾರ ಸೇವಿಸಿ
Iron Deficiency
ಅಕ್ಷತಾ ವರ್ಕಾಡಿ
|

Updated on: Dec 06, 2024 | 8:13 PM

Share

ಕಬ್ಬಿಣವು ನಮ್ಮ ದೇಹದಲ್ಲಿನ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ನಮ್ಮ ದೇಹದಲ್ಲಿ ಹೊಸ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಮತ್ತು ದೇಹದಾದ್ಯಂತ ನಾವು ಉಸಿರಾಡುವ ಗಾಳಿಯಿಂದ ಆಮ್ಲಜನಕವನ್ನು ಸಾಗಿಸಲು ಕಬ್ಬಿಣವು ಅವಶ್ಯಕವಾಗಿದೆ. ಈ ಕಬ್ಬಿಣಾಂಶವು ದೇಹದಲ್ಲಿ ಕಡಿಮೆಯಾದರೆ, ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ. ಪುರುಷರಿಗಿಂತ ಮಹಿಳೆಯರು ಕಬ್ಬಿಣದ ಕೊರತೆಗೆ ಹೆಚ್ಚು ಒಳಗಾಗುತ್ತಾರೆ, ವಿಶೇಷವಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮುಟ್ಟಿನ ಸಮಸ್ಯೆ ಇರುವ ಮಹಿಳೆಯರು.

ಕಬ್ಬಿಣದ ಕೊರತೆಯು ಹೆಚ್ಚಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಕಬ್ಬಿಣದ ಅಥವಾ ಕಬ್ಬಿಣದ ಭರಿತ ಆಹಾರಗಳನ್ನು ತಿನ್ನುವುದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತಹೀನತೆಯನ್ನು ತಡೆಯಲು ಬಹಳ ಸಹಾಯಕವಾಗಿದೆ. ಮಕ್ಕಳಲ್ಲಿ ಕಬ್ಬಿಣದ ಕೊರತೆಯು ಅವರ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಬೀಟ್ ರೂಟ್ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. 100 ಗ್ರಾಂ ಬೀಟ್ರೂಟ್ 0.8 ಮೈಕ್ರೋಗ್ರಾಂಗಳಷ್ಟು ಕಬ್ಬಿಣವನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

ಬೇಳೆಕಾಳುಗಳು:

ದ್ವಿದಳ ಧಾನ್ಯಗಳು ಸಸ್ಯ ಆಧಾರಿತ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಇದನ್ನು ವಿವಿಧ ಆಹಾರಗಳಾಗಿ ಸೇವಿಸಬಹುದು. ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿರುವ ಬೇಳೆಕಾಳುಗಳು ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತವೆ ಮತ್ತು ಜೀರ್ಣಕ್ರಿಯೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, 100 ಗ್ರಾಂ ಬೇಯಿಸಿದ ಬೇಳೆಯಲ್ಲಿ ಸುಮಾರು 3.3 ಮಿಲಿಗ್ರಾಂ ಕಬ್ಬಿಣವಿದೆ.

ಪಾಲಕ್ ಸೊಪ್ಪು:

ಪಾಲಕ್ ಸೊಪ್ಪು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅವು ಆಕ್ಸಲೇಟ್‌ಗಳನ್ನು ಹೊಂದಿರುತ್ತವೆ, ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಆದರೆ ಬೀಟ್ರೂಟ್ಗಿಂತ ಹೆಚ್ಚಿನ ಕಬ್ಬಿಣವನ್ನು ಅವು ಹೊಂದಿರುತ್ತವೆ. ಸಲಾಡ್‌ಗಳು, ಸ್ಮೂಥಿಗಳು ಅಥವಾ ಸ್ಟಿರ್-ಫ್ರೈಸ್‌ನಂತಹ ಆಹಾರಗಳಿಗೆ ಪಾಲಕವನ್ನು ಸೇರಿಸುವುದರಿಂದ ನಿಮ್ಮ ಒಟ್ಟಾರೆ ಪೌಷ್ಟಿಕಾಂಶದ ಸೇವನೆಯನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಮಾತ್ರವಲ್ಲದೆ ವಿಟಮಿನ್ ಎ, ಸಿ ಮತ್ತು ಕೆ ಕೂಡ ಸಮೃದ್ಧವಾಗಿದೆ. 100 ಗ್ರಾಂ ಬೇಯಿಸಿದ ಪಾಲಕ್ 2.7 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮಲಬದ್ಧತೆ ಮತ್ತು ಪೈಲ್ಸ್‌ನಿಂದ ಮುಕ್ತಿ ಪಡೆಯಲು ಈ ಹಣ್ಣು ಸೇವಿಸಿ

ಕುಂಬಳಕಾಯಿ ಬೀಜಗಳು:

100 ಗ್ರಾಂ ಕುಂಬಳಕಾಯಿ ಬೀಜಗಳು 2.8 ಮೈಕ್ರೋಗ್ರಾಂಗಳಷ್ಟು ಕಬ್ಬಿಣಾಂಶ ಹೊಂದಿರುತ್ತವೆ. ಅವು ಉತ್ಕರ್ಷಣ ನಿರೋಧಕಗಳ ಉಗ್ರಾಣವೂ ಹೌದು. ಕುಂಬಳಕಾಯಿ ಬೀಜಗಳು ಕಬ್ಬಿಣ ಸೇರಿದಂತೆ ಅನೇಕ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಅವುಗಳನ್ನು ಕಚ್ಚಾ, ಹುರಿದ ಅಥವಾ ಸಲಾಡ್‌ಗಳಲ್ಲಿ ತಿನ್ನಬಹುದು. ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿವೆ.

ಡಾರ್ಕ್ ಚಾಕೊಲೇಟ್:

100 ಗ್ರಾಂ ಡಾರ್ಕ್ ಚಾಕೊಲೇಟ್ 2.9 ಮೈಕ್ರೋಗ್ರಾಂಗಳಷ್ಟು ಕಬ್ಬಿಣವನ್ನು ಹೊಂದಿರುತ್ತದೆ. ಅವು ಉತ್ಕರ್ಷಣ ನಿರೋಧಕಗಳ ಉಗ್ರಾಣವೂ ಹೌದು. ಇದು ಹೆಚ್ಚುವರಿ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ