ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಭಾರತದಲ್ಲೇ ಅಭಿವೃದ್ಧಿಪಡಿಸಿದ ಲಸಿಕೆ qHPVಗೆ ತಜ್ಞರ ಸಮಿತಿ ಅನುಮೋದನೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 16, 2022 | 9:46 AM

 CDSCOದ ಕೊವಿಡ್-19 ವಿಷಯದ ತಜ್ಞರ ಸಮಿತಿಯು ಬುಧವಾರದಂದು ಸೆರಮ್ ಇನ್‌ಸ್ಟಿಟ್ಯೂಟ್‌ಗೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ qHPV ತಯಾರಿಸಲು ಮಾರುಕಟ್ಟೆಯ ಅಧಿಕಾರವನ್ನು ನೀಡಲು ಶಿಫಾರಸು ಮಾಡಿದೆ.

ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಭಾರತದಲ್ಲೇ ಅಭಿವೃದ್ಧಿಪಡಿಸಿದ ಲಸಿಕೆ qHPVಗೆ ತಜ್ಞರ ಸಮಿತಿ ಅನುಮೋದನೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: 9 ವರ್ಷದಿಂದ 26 ವರ್ಷವರೆಗಿರುವ ಗರ್ಭಕಂಠದ ಕ್ಯಾನ್ಸರ್ (Cervical Cancer) ರೋಗಿಗಳಿಗೆ ಸೆರಮ್ ಇನ್‌ಸ್ಟಿಟ್ಯೂಟ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ (qHPV) ಲಸಿಕೆಯನ್ನು ಡಿಸಿಜಿಐಯ ವಿಷಯ ತಜ್ಞರ ಸಮಿತಿಯು ಬುಧವಾರ ಅನುಮೋದಿಸಿದೆ.  ಜೈವಿಕ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ದೇಶದಲ್ಲಿ ಅದರ ಆರಂಭಿಕ ಲಭ್ಯತೆಗಾಗಿ ಹಂತ 2/3 ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದ ನಂತರ qHPV ಯ ಮಾರುಕಟ್ಟೆ ಅಧಿಕಾರಕ್ಕಾಗಿ ಜೂನ್ 8 ರಂದು ಎಸ್ಐಐನಲ್ಲಿ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳು) ಪ್ರಕಾಶ್ ಕುಮಾರ್ ಸಿಂಗ್ ಅವರು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗೆ ಅರ್ಜಿ ಸಲ್ಲಿಸಿದ್ದರು.  CDSCOದ ಕೊವಿಡ್-19 ವಿಷಯದ ತಜ್ಞರ ಸಮಿತಿಯು (SEC) ಬುಧವಾರ ಸೆರಮ್ ಇನ್‌ಸ್ಟಿಟ್ಯೂಟ್‌ಗೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ qHPV ತಯಾರಿಸಲು ಮಾರುಕಟ್ಟೆಯ ಅಧಿಕಾರವನ್ನು ನೀಡಲು ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.  ಡಿಸಿಜಿಐಗೆ ಸಲ್ಲಿಸಿದ ಅರ್ಜಿಯಲ್ಲಿ, qHPV ಲಸಿಕೆ CERVAVAC ಎಲ್ಲಾ ಉದ್ದೇಶಿತ HPV ಪ್ರಕಾರಗಳ ವಿರುದ್ಧ ಮತ್ತು ಎಲ್ಲಾ ಡೋಸ್ ಮತ್ತು ವಯಸ್ಸಿನ ಗುಂಪುಗಳ ವಿರುದ್ಧ ಬೇಸ್‌ಲೈನ್‌ಗಿಂತ ಸುಮಾರು 1,000 ಪಟ್ಟು ಹೆಚ್ಚು ದೃಢವಾದ ಪ್ರತಿಕಾಯ ಪ್ರತಿಕ್ರಿಯೆಯನ್ನು ತೋರಿಸಿದೆ ಎಂದು ಸಿಂಗ್ ಹೇಳಿದ್ದಾರೆ.  ಕಳೆದ ಬುಧವಾರ ಈ ಲಸಿಕೆಯ ಡೇಟಾ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ಎನ್​​ ಟಿಎಜಿಐ (NTAGI)ನಿಂದ ಪ್ರತ್ಯೇಕವಾಗಿ ರಚಿಸಲಾದ HPV ಯ ಕಾರ್ಯನಿರತ ಗುಂಪಿನ ಮುಂದೆ ಸೆರಮ್ ಇನ್‌ಸ್ಟಿಟ್ಯೂಟ್ ಪ್ರಸ್ತುತಿಯನ್ನು ಮಾಡಿದೆ ಎಂದು ತಿಳಿದುಬಂದಿದೆ.

ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಮತ್ತು ಇತರ ಕೆಲವು ಕ್ಯಾನ್ಸರ್‌ಗಳಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಸಾವಿನ ಅನುಪಾತವು ತುಂಬಾ ಹೆಚ್ಚಾಗಿದೆ ಎಂದು ಸಿಂಗ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
Covovax Vaccine: ಖಾಸಗಿ ಕೇಂದ್ರಗಳಲ್ಲಿ 12ರಿಂದ 17 ವರ್ಷದವರಿಗೆ ಕೊವೊವ್ಯಾಕ್ಸ್​ ಲಸಿಕೆ ಲಭ್ಯ
Cervical Cancer: ಗರ್ಭಕಂಠದ ಕ್ಯಾನ್ಸರ್ ಎಂದರೇನು? ಪ್ರತಿಯೊಬ್ಬ ಮಹಿಳೆಯು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು
ಮಹಿಳೆಯರಲ್ಲಿ ಕಾಡುವ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣಗಳೇನು? ಯಾವ ರೀತಿ ಚಿಕಿತ್ಸೆ ಅಗತ್ಯ? ಇಲ್ಲಿದೆ ಮಾಹಿತಿ


ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ 15 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಎರಡನೇ ಕ್ಯಾನ್ಸರ್ ಆಗಿದೆ.

“ಪ್ರಸ್ತುತ ನಮ್ಮ ದೇಶವು HPV ಲಸಿಕೆಗಾಗಿ ವಿದೇಶಿ ತಯಾರಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ನಮ್ಮ ಗುಂಪಿನ ತತ್ವಶಾಸ್ತ್ರಕ್ಕೆ ಅನುಗುಣವಾಗಿ ಮತ್ತು ನಮ್ಮ ಸಿಇಒ ಡಾ ಅದಾರ್ ಸಿ ಪೂನಾವಾಲಾ ಅವರ ನೇತೃತ್ವದಲ್ಲಿ ನಮ್ಮ ದೇಶ ಮತ್ತು ಪ್ರಪಂಚದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳನ್ನು ಲಭ್ಯವಾಗುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ ಎಂದು ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ