
ಮೇಲ್ಛಾವಣಿ ಮೇಲೆ ನೀರಿನ ಹನಿಗಳನು ಬೀಳುವ ಸದ್ದು ಕೇಳಿಸಿದರೆ ಆನಂದವಾಗುತ್ತದೆ. ಮನೆ ಪಕ್ಕದ ತೊರೆಯಲ್ಲಿ ಹರಿಯುವ ನೀರಿನಲ್ಲಿ ಕಾಗದದ ದೋಣಿ ಬಿಡುವಾಗ ಖುಷಿಯಾಗುತ್ತದೆ. ಸಂಜೆ ಹೊತ್ತು ಕಿಟಕಿಯಲ್ಲಿ ಹೊರಗೆ ನೋಡಿಕೊಂಡು ಬಿಸಿ ಬಿಸಿ ಕಾಫಿ ಅಥವಾ ಕುಡಿಯುವಾಗ ಸಂತೋಷವಾಗುತ್ತದೆ. ಇವೆಲ್ಲವೂ ಮಳೆಗಾಲ ತಂದುಕೊಡುವ ಸಂತೋಷಗಳು, ನೆನಪುಗಳು. ಆದರೆ ಈ ಮಳೆಗಾಲ ಮಧುಮೇಹವನ್ನು (Diabetic patients) ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಹಲವಾರು ಸವಾಲುಗಳನ್ನು ತಂದೊಡ್ಡುತ್ತದೆ. ಈ ಸಮಯದಲ್ಲಿ ಅವರು ಬಹು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವೈರಲ್ ಸೋಂಕುಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಅಲ್ಲದೇ ಮಳೆಯ ಹವಾಮಾನದಲ್ಲಿ ದೈನಂದಿನ ಚಟುವಟಿಕೆಗಳಿಗೆ ಅಡಚಣೆ ಉಂಟಾಗಬಹುದಾಗಿದೆ. ಬೆಳಿಗ್ಗೆಯ ವಾಕಿಂಗ್ ತಪ್ಪಬಹುದು, ಕೆಲಸಕ್ಕೆ ಹೊಗುವ ಪ್ರಯಾಣಕ್ಕೆ ತಡೆ ಉಂಟಾಗಬಹುದು ಅಥವಾ ಆಹಾರ ಸೇವನೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ಹೀಗಾಗಿ ಮಳೆಗಾಲ ಬಂದಾಗ ರೇನ್‌ಕೋಟ್‌ಗಳು ಮತ್ತು ಛತ್ರಿಗಳನ್ನು ಹೊರಗೆ ತೆಗೆಯುವಂತೆ ಮಧುಮೇಹಿಗಳು ಕೂಡ ಈ ಕಾಲದಲ್ಲಿ ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ಮೊದಲೇ ಒಳ್ಳೆಯ ದಿನಚರಿಯನ್ನು ರೂಪಿಸುವ ಅಗತ್ಯವಿದೆ.
ಮಧುಮೇಹ ನಿರ್ವಹಣೆಗೆ ಒಂದು ಸಮಗ್ರ ವಿಧಾನವು ಬೇಕಾಗುತ್ತದೆ. ಅದರಲ್ಲಿ ಒಳಾಂಗಣದಲ್ಲಿ ಸಕ್ರಿಯವಾಗಿರುವುದು, ಜಾಗೃತೆಯಿಂದ ಆಹಾರ ಸೇವನೆ ಮಾಡುವುದು ಮತ್ತು ಗ್ಲೂಕೋಸ್ ರೀಡಿಂಗ್ ಅನ್ನು ನೋಡುವುದು ಇತ್ಯಾದಿಗಳು ಸೇರಿವೆ. ಈ ರೀತಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ತಂತ್ರಜ್ಞಾನ ಕೂಡ ನೆರವಾಗುತ್ತದೆ. ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ಸಾಧನಗಳು ಯಾವುದೇ ರೀತಿಯ ಹಮಾವಾನದಲ್ಲಿಯೂ ಗ್ಲೂಕೋಸ್ ಮಟ್ಟದ ಮೇಲೆ ನಿಗಾ ಇಡಲು ನೆರವಾಗುತ್ತವೆ ಮತ್ತು ಇಲ್ಲಿ ಕೈಗೆ ಸೂಜಿಯಲ್ಲಿ ಚುಚ್ಚುವ ಅಗತ್ಯ ಇರುವುದಿಲ್ಲ.
ಈ ಕುರಿತು ಮಾಹಿತಿ ನೀಡುವ ಬೆಂಗಳೂರಿನ ಅಪೋಲೋ ಕ್ಲಿನಿಕ್ ನ ಎಂಡೋಕ್ರೈನಾಲಜಿಸ್ಟ್ ಡಾ. ವರುಣ್ ಸೂರ್ಯದೇವರ ಅವರು, “ಮಳೆಗಾಲದ ಸಂದರ್ಭದಲ್ಲಿ ಫ್ಲೂ ಮತ್ತು ನೀರಿನಿಂದ ಹರಡುವ ರೋಗಗಳು ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಸೋಂಕುಗಳು ಮಧುಮೇಹಿಗಳಿಗೆ ಗಂಭೀರ ತೊಡಕುಗಳನ್ನು ಉಂಟುಮಾಡಬಹುದು. ಹಾಗಾಗಿ ವಯಸ್ಕರು ಶಿಫಾರಸು ಮಾಡಲಾದ ಲಸಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಸೋಂಕು ಉಂಟಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ರೋಗ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸುವ ಕಡೆಗೆ ಗಮನ ಹರಿಸುವುದು ಹೆಚ್ಚು ಸಂಕೀರ್ಣವಾಗುತ್ತದೆ. ಸದಾ ಸಕ್ರಿಯರಾಗಿರುವುದು, ಪೌಷ್ಟಿಕತೆಯ ಅಗತ್ಯಗಳ ಬಗ್ಗೆ ತಿಳಿದಿರುವುದು ಮತ್ತು ಗ್ಲೂಕೋಸ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಇತ್ಯಾದಿಗಳ ಮೂಲಕ ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಸಿಜಿಎಂಗಳಂತಹ ತಂತ್ರಜ್ಞಾನಗಳು ಹವಾಮಾನದಿಂದ ಕ್ಲಿನಿಕ್ ಗೆ ಭೇಟಿ ನೀಡಲು ಸಾಧ್ಯವಾಗದಿದೇ ಇದ್ದಾಗ ನೆರವಿಗೆ ಬರುತ್ತವೆ ಎಂಬುದು ಗಮನಾರ್ಹ” ಎಂದು ಹೇಳಿದರು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮೂಗಿನ ಕೂದಲು ತೆಗೆಯಬೇಡಿ, ಇದು ದೇಹಕ್ಕೆ ರಕ್ಷಣಾ ಕವಚ
ಈ ಸಲಹೆಗಳ ಜೊತೆಗೆ ಮಧುಮೇಹಿಗಳು ಹೈಪರ್‌ಗ್ಲೈಸೀಮಿಯಾ ಅಥವಾ ಹೈಪೊಗ್ಲೈಸೀಮಿಯಾದ ಕುರಿತ ಆತಂಕಕಾರಿ ಟ್ರೆಂಡ್ ಗಳ ಬಗ್ಗೆ ಜಾಗರೂಕರಾಗಿರಬೇಕು. ಆ ಕುರಿತು ಹೆಚ್ಚು ಗಮನಹರಿಸಬೇಕು. ಒಟ್ಟಾರೆಯಾಗಿ ಮಳೆಗಾಲದಲ್ಲಿ ಮಧುಮೇಹವನ್ನು ಹೊಂದಿರುವವರು ಸ್ವಲ್ಪ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ