
ನೀವು ಎಂದಾದರೂ ಬ್ಲೂ ಟೀ ಟ್ರೈ ಮಾಡಿದ್ದೀರಾ..? ಮಾಡಿಲ್ಲ ಎಂದಾದರೆ ಮೊದಲು ಟ್ರೈ ಮಾಡಿ ನೋಡಿ. ಶಂಖಪುಷ್ಪದ ಹೂವು ಮತ್ತು ಎಲೆಯಿಂದ ತಯಾರಾಗುವ ಈ ಚಹಾದಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಈ ಚಹಾವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ತೂಕ ಕೂಡ ಕಡಿಮೆಯಾಗುತ್ತದೆ. ಚರ್ಮದ ಮೇಲಿನ ಸುಕ್ಕುಗಳು ಕಡಿಮೆಯಾಗಿ ನಿಮ್ಮ ಚರ್ಮ ಸುಂದರವಾಗಿ ಕಾಣಲು ಇದು ಸಹಾಯ ಮಾಡುತ್ತದೆ.

ಪ್ರತಿನಿತ್ಯ ಶಂಖಪುಷ್ಪ ಹೂವಿನ ಚಹಾವನ್ನು ಕುಡಿಯುವುದರಿಂದ ದೇಹದ ಅನಗತ್ಯ ಬೊಜ್ಜು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಚರ್ಮ ಮತ್ತು ಕೂದಲನ್ನು ಸುಂದರಗೊಳಿಸಲು ಇದು ಸಹಾಯ ಮಾಡುತ್ತದೆ.

ಬ್ಲೂ ಟೀ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಗಾಗ್ಗೆ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಪ್ರತಿದಿನ ಎರಡು ಕಪ್ ಗಳಷ್ಟು ನೀಲಿ ಚಹಾವನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ನೀಲಿ ಚಹಾವು ಒತ್ತಡವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ. ಇದರಿಂದ ನಮ್ಮ ಮನಸ್ಥಿತಿ ಸುಧಾರಿಸುತ್ತದೆ.

ಬ್ಲೂ ಟೀ ಅಸ್ತಮಾವನ್ನು ನಿವಾರಿಸುತ್ತದೆ, ಜ್ವರವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಧುಮೇಹವನ್ನು ತಡೆಯಬಹುದು. ನೀಲಿ ಚಹಾ ಸಂಪೂರ್ಣವಾಗಿ ಗಿಡಮೂಲಿಕೆಗಳಿಂದ ತಯಾರಾಗಿರುವುದರಿಂದ ಇದನ್ನು ಯಾರೂ ಬೇಕಾದರೂ ಸೇವನೆ ಮಾಡಬಹುದಾಗಿದೆ.

ಬ್ಲೂ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲದೆ, ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಒಮ್ಮೆ ಹೃದಯಾಘಾತ ವಾದವರು ಈ ಚಹಾವನ್ನು ತಪ್ಪದೆ ಕುಡಿಯಬೇಕು. ಏಕೆಂದರೆ ಇದು ನಿಮ್ಮ ಹೃದಯವನ್ನು ಎಲ್ಲಾ ರೀತಿಯ ಸಮಸ್ಯೆಗಳಿಂದ ಕಾಪಾಡುತ್ತದೆ. ಅದಲ್ಲದೆ ಈ ಚಹಾ ಕ್ಯಾನ್ಸರ್‌ಗಳಂತಹ ಕಾಯಿಲೆಗಳನ್ನು ತಡೆಯಲು ಕೂಡ ಪ್ರಯೋಜನಕಾರಿಯಾಗಿದೆ.