AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂತ್ರಕ್ಕೆ ಸಂಬಂಧಿಸಿದ ಈ ರೋಗಲಕ್ಷಣಗಳು ಏಡ್ಸ್ ರೋಗದ ಲಕ್ಷಣಗಳಿರಬಹುದು

ಮೂತ್ರಕ್ಕೆ ಸಂಬಂಧಿಸಿದ ಈ ರೋಗಲಕ್ಷಣಗಳು ಏಡ್ಸ್ ರೋಗದ ಲಕ್ಷಣಗಳಾಗಿರಬಹದು ಎಂದು ವೈದ್ಯರು ಅಭಿಪ್ರಯಾಪಟ್ಟಿದ್ದಾರೆ.

ಮೂತ್ರಕ್ಕೆ ಸಂಬಂಧಿಸಿದ ಈ ರೋಗಲಕ್ಷಣಗಳು ಏಡ್ಸ್ ರೋಗದ ಲಕ್ಷಣಗಳಿರಬಹುದು
HIV AIDS
TV9 Web
| Updated By: ವಿವೇಕ ಬಿರಾದಾರ|

Updated on: Sep 06, 2022 | 7:00 AM

Share

ಏಡ್ಸ್​ ರೋಗ ಎಂದರೆ ಜನರಲ್ಲಿ ಇನ್ನೂ ಭಯಾನಕ ರೋಗವಾಗಿ ಉಳಿದಿದೆ. ಕಾರಣ ಏಡ್ಸ್ ರೋಗಕ್ಕೆ ಇನ್ನೂ ನಿಗದಿತ ಚಿಕಿತ್ಸೆ ಇಲ್ಲ. ನೆನಪಿಡಿ ಏಡ್ಸ್​ ರೋಗ ಸಾಂಕ್ರಾಮಿಕ ರೋಗವಲ್ಲ. ಆದರೆ ಏಡ್ಸ ರೋಗ ಬಂದಿರುವ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿರೆ ಮಾತ್ರ ಬರುತ್ತದೆ. ಮತ್ತು ಏಡ್ಸ್​ ರೋಗಿಗೆ ಚುಚ್ಚಿದ ಚುಚ್ಚುಮದ್ದನ್ನು ನಿಮಗೆ ಚುಚ್ಚಿದರೆ ಮಾತ್ರ ಬರುತ್ತದೆ.

ಏಡ್ಸ್​ ರೋಗವನ್ನು ಔಷಧಿಗಳ ಮೂಲಕ ನಿಯಂತ್ರಿಸಬಹುದು. ಲಕ್ಷಾಂತರ ಏಡ್ಸ್ ರೋಗಿಗಳು ಔಷಧಿಗಳ ಸಹಾಯದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಏಡ್ಸ್, ಹೆಚ್​ಐವಿ ವೈರಸ್ ನಿಂದ ಉಂಟಾಗುತ್ತದೆ. ಇದನ್ನು ಇಮ್ಯುನೊ ಡಿಫಿಷಿಯನ್ಸಿ ವೈರಸ್ ಎಂದು ಕರೆಯಲಾಗುತ್ತದೆ. ಈ ವೈರಸ್ ದೇಹದ ಇಮ್ಯುನಿಟಿ ವ್ಯವಸ್ಥೆಯ ಮೇಲೆ ದಾಳಿ ಮಾಡಿ ಅದನ್ನು ದುರ್ಬಲಗೊಳಿಸುತ್ತದೆ.

ಹೆಚ್ಐವಿ ವೈರಸ್​ಗೆ ಚಿಕಿತ್ಸೆ ನೀಡದಿದ್ದರೆ, ಅದು ಏಡ್ಸ್ ರೋಗವಾಗಿ ರೂಪಾಂತರಗೊಳ್ಳುತ್ತದೆ. ಎಚ್ಐವಿ ರೋಗ ಬಂದಿದೆ ಎಂದು ತಿಳಿದ ನಂತರ ಸರಿಯಾದ ಸಮಯದಲ್ಲಿ ಔಷಧಿಗಳನ್ನು ಪ್ರಾರಂಭಿಸಿದರೆ, ಅದು ಏಡ್ಸ್ ರೋಗವಾಗುವುದಿಲ್ಲ. ಇದರಿಂದ ಜೀವಕ್ಕೆ ಯಾವುದೇ ಅಪಾಯವಾಗುವುದಿಲ್ಲ. ಹೆಚ್ಐವಿ ಏಡ್ಸ್ ಅಪಾಯಕಾರಿ ಕಾಯಿಲೆಯಾಗಿರಬಹುದು, ಆದರೆ ಅದರ ಲಕ್ಷಣಗಳು ಶೀಘ್ರದಲ್ಲೇ ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ವೈದ್ಯರ ಪ್ರಕಾರ, ಏಡ್ಸ್ ರೋಗವನ್ನು ತಪ್ಪಿಸಲು ಹೆಚ್ಐವಿ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯ. ಅದರ ಸಕಾಲಿಕ ಗುರುತಿಸುವಿಕೆ ಮತ್ತು ಚಿಕಿತ್ಸೆಯೊಂದಿಗೆ, ಸಾಮಾನ್ಯ ಜೀವನವನ್ನು ನಡೆಸಬಹುದು ಎಂದು ವೈದ್ಯರು ಹೇಳುತ್ತಾರೆ.

ಮೂತ್ರದಲ್ಲಿನ ಈ ಸಮಸ್ಯೆ ಏಡ್ಸ್‌ನ ಲಕ್ಷಣವಾಗಿದೆ

ಯಾರಿಗಾದರೂ ಹೆಚ್‌ಐವಿ ರೋಗ ಬಂದಿದ್ದರೆ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಸಮಸ್ಯೆ ಎದುರಾಗಬಹುದು ಎಂದು ಹಿರಿಯ ವೈದ್ಯ ಡಾ.ಕವಲ್ಜಿತ್ ಸಿಂಗ್ ಹೇಳಿದ್ದಾರೆ ಎಂದು ಟಿವಿ9 ಹಿಂದಿ ವರದಿ ಮಾಡಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಜನರು ಇದನ್ನು ಮೂತ್ರಪಿಂಡದ ಸೋಂಕು ಎಂದು ಪರಿಗಣಿಸುತ್ತಾರೆ, ಆದರೆ ಇದು HIV ಯ ಲಕ್ಷಣವೂ ಆಗಿರಬಹುದು. ಈ ಸ್ಥಿತಿಯಲ್ಲಿ ಮೂತ್ರ ವಿಸರ್ಜಿಸುವಾಗ ನೋವು ಇರುತ್ತದೆ. ಮೂತ್ರದಿಂದ ರಕ್ತ ಹೊರಬರುತ್ತದೆ. ಕೆಲವೊಮ್ಮೆ ಗುದನಾಳದ ಭಾಗದಲ್ಲಿ ತೀವ್ರವಾದ ನೋವು ಇರಬಹುದು. ಒಬ್ಬ ವ್ಯಕ್ತಿಯು ಈ ಎಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಮತ್ತು ಈ ರೋಗಲಕ್ಷಣಗಳು ಮುಂದುವರಿದರೆ, ಅವನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋಗಿ ಪರೀಕ್ಷಿಸಬೇಕು. ಇದಲ್ಲದೆ, ಪ್ರಾಸ್ಟೇಟ್ ಗ್ರಂಥಿಯಲ್ಲಿ ಊತ, ಖಾಸಗಿ ಭಾಗದಲ್ಲಿ ಯಾವುದೇ ಗಾಯವು ಸಹ ಹೆಚ್ಐವಿ ಲಕ್ಷಣವಾಗಿರಬಹುದು.

ಹತ್ತಿರದ ಯಾವುದೇ ಆಸ್ಪತ್ರೆಯಲ್ಲಿ ಹೆಚ್‌ಐವಿ ಪರೀಕ್ಷೆಯನ್ನು ಸುಲಭವಾಗಿ ಮಾಡಲಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕಾಗಿ, ಹೆಚ್ಐವಿ ಕೇಂದ್ರದಲ್ಲಿ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಇಮ್ಯುನಿಟಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರಲ್ಲಿ ಪಾಸಿಟಿವ್ ಇದ್ದರೆ ಆ ವ್ಯಕ್ತಿಯನ್ನು ಹೆಚ್​ಐವಿ ಸೋಂಕಿತ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯನ್ನು ಸಹ ಮಾಡಲಾಗುತ್ತದೆ. ಇದರಲ್ಲಿ ಹೆಚ್ಐವಿ ದೃಢಪಟ್ಟರೆ ತಕ್ಷಣ ಚಿಕಿತ್ಸೆ ನೀಡಬೇಕು. ಹೆಚ್ಐವಿ ರೋಗಕ್ಕೆ ಚಿಕಿತ್ಸೆ ವಿಳಂಬವಾದರೆ, ಈ ವೈರಸ್ ಏಡ್ಸ್ ರೋಗವಾಗಿ ಮಾರ್ಪಡುತ್ತದೆ. ಇದು ಮಾರಣಾಂತಿಕವಾಗಿದೆ. ಒಬ್ಬ ವ್ಯಕ್ತಿಯು ಈಗಾಗಲೇ ಇತರ ಗಂಭೀರ ಕಾಯಿಲೆಗಳನ್ನು ಹೊಂದಿದ್ದರೆ ಮತ್ತು ಅದರ ನಂತರ ಹೆಚ್ಐವಿ ಕೂಡ ಬಂದರೆ ಅದು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆರೋಗ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?