Carpal Tunnel Syndrome: ಆಗಾಗ ಕೈಯಲ್ಲಿ ನೋವು ಅಥವಾ ಜುಮ್ಮೆನಿಸುವ ಅನುಭವವಾಗುತ್ತಿದೆಯೇ?

ನಿಮ್ಮ ಕೈಯಲ್ಲಿ ನೋವು ಅಥವಾ ಜುಮ್ಮೆನಿಸುವಿಕೆ ಕಾರ್ಪಲ್ ಟನಲ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ನಿಮ್ಮ ಹತ್ತಿರದ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.

Carpal Tunnel Syndrome: ಆಗಾಗ ಕೈಯಲ್ಲಿ ನೋವು ಅಥವಾ ಜುಮ್ಮೆನಿಸುವ ಅನುಭವವಾಗುತ್ತಿದೆಯೇ?
Carpal Tunnel Syndrome
Image Credit source: Academy Orthopedics
Updated By: ಅಕ್ಷತಾ ವರ್ಕಾಡಿ

Updated on: Nov 27, 2022 | 1:09 PM

ಕೆಲವೊಮ್ಮೆ ನಿಮಗೆ  ಕೈಯಲ್ಲಿ ಜುಮ್ಮೆನಿಸುವಿಕೆ ಅಥವಾ ನೋವಿನ ಅನುಭವ ಆಗುತ್ತಿದೆಯಾ?  ಉದಾಹರಣೆಗೆ, ನೀವು ಸ್ವಲ್ಪ ಸಮಯದವರೆಗೆ ಮಲಗಿರುವಾಗ ಇಂತಹ ಸಮಸ್ಯೆಗಳು ಕಂಡುಬರುತ್ತದೆ. ನಿಮ್ಮ ಕೈಯಲ್ಲಿ ನೋವು ಅಥವಾ ಜುಮ್ಮೆನಿಸುವಿಕೆ ಕಾರ್ಪಲ್ ಟನಲ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ಆದ್ದರಿಂದ ಇಂತಹ ನೋವುಗಳು ಹೆಚ್ಚಾಗಿ ಕಂಡುಬಂದಲ್ಲಿ ನಿಮ್ಮ ಹತ್ತಿರದ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.

ಕಾರ್ಪಲ್ ಟನಲ್ ಸಿಂಡ್ರೋಮ್(Carpal Tunnel Syndrome) ಎಂದರೆ ಕೈಯ ಮಧ್ಯದಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಯಾಗಿದೆ. ಇದು ಮಣಿಕಟ್ಟಿನಲ್ಲಿರುವ ನರದಿಂದ ಉಂಟಾಗುತ್ತದೆ. ಈ ನರವು ಹಾದುಹೋಗುವ ಜಾಗವನ್ನು ಕಾರ್ಪಲ್ ಟನಲ್ ಎಂದು ಕರೆಯಲಾಗುತ್ತದೆ. ಈ ಭಾಗದಲ್ಲಿ ಪ್ರಾರಂಭದಲ್ಲಿ ಊತ ಉಂಟಾಗಿ, ಅದರ ನಂತರ ನರಗಳಲ್ಲಿ ಒತ್ತಡವು ಹೆಚ್ಚಾಗುತ್ತದೆ. ಇದು ಕೈ ಅಥವಾ ಬೆರಳುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ನೋವಿಗೆ ಕಾರಣವಾಗುತ್ತದೆ. ಆದರಿಂದ ನೋವು, ಜುಮ್ಮೆನಿಸುವಿಕೆ ಕಂಡುಬಂದಲ್ಲಿ ಆ ಭಾಗಕ್ಕೆ ಸ್ವಲ್ಪ ಹೊತ್ತು ಮಸಾಜ್ ಮಾಡಿ.

ಸಾಮಾನ್ಯವಾಗಿ ಒತ್ತಡದ ಜೀವನಶೈಲಿಯಲ್ಲಿ ಉದಾಹರಣೆಗೆ ದಿನ ಪೂರ್ತಿ ಲಾಪ್ ಟಾಪ್ ಬಳಕೆ, ಹೀಗೆ ಕೈಗಳಿಗೆ ಹೆಚ್ಚಿನ ಕೆಲಸವನ್ನು ನೀಡುವ ಕೆಲಸಗಳಿಂದ ಇಂತಹ ಸಮಸ್ಯೆಗಳು ಕಂಡುಬರುತ್ತದೆ. ಜೊತೆಗೆ, ಅಪಘಾತವೂ ಸಹ ಈ ಸಮಸ್ಯೆಗೆ ಕಾರಣವಾಗಬಹುದು.

ನೀವು ಸಿಂಡ್ರೋಮ್‌ನಿಂದ ಬಳಲುತ್ತಿದ್ದೀರಾ ಅಥವಾ ಇಲ್ಲವೇ ಎಂದು ತಿಳಿಯುವುದು ಹೇಗೆ?ಕೈ ಅಥವಾ ಬೆರಳುಗಳು, ಮುಖ್ಯವಾಗಿ ಹೆಬ್ಬೆರಳು, ತೋರುಬೆರಳು, ಮಧ್ಯ ಮತ್ತು ಉಂಗುರದ ಬೆರಳುಗಳಲ್ಲಿ ಜುಮ್ಮೆನಿಸುವಿಕೆ. ಜೊತೆಗೆ ಮೊಣಕೈ ಹಾಗೂ ಭುಜದ ವರೆಗೂ ಹರಡಬಹುದು.

ಇದನ್ನು ಓದಿ: ವರ್ಕೌಟ್ ಸೆಷನ್‌ ಮೊದಲು ಈ 5 ಆಹಾರ ಕ್ರಮ ರೂಢಿಸಿಕೊಳ್ಳಿ

ನೀವು ಕಾರ್ಪಲ್ ಟನಲ್ ಸಿಂಡ್ರೋಮ್ನಿಂದ ಬಳಲುತ್ತಿದ್ದರೆ, ಉರಿಯೂತದ ಔಷಧಗಳ ಬಳಕೆ ಅಥವಾ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳಿವೆ. ನಿಮ್ಮ ಪರಿಸ್ಥಿತಿಗೆ ಸೂಕ್ತವಾದ ಆಯ್ಕೆಯ ಬಗ್ಗೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: