AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ವರ್ಕೌಟ್ ಸೆಷನ್‌ ಮೊದಲು ಈ 5 ಆಹಾರ ಕ್ರಮ ರೂಢಿಸಿಕೊಳ್ಳಿ

ನಿಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವರ್ಕೌಟ್ ಸೆಷನ್‌ ಮೊದಲು ಸೇವಿಸಬೇಕಾದ ಆಹಾರದ ಕುರಿತು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾರವರು ಮಾಹಿತಿ ನೀಡಿದ್ದಾರೆ.

Health Tips: ವರ್ಕೌಟ್ ಸೆಷನ್‌ ಮೊದಲು ಈ 5 ಆಹಾರ ಕ್ರಮ ರೂಢಿಸಿಕೊಳ್ಳಿ
Before workout foodImage Credit source: Mashed
TV9 Web
| Edited By: |

Updated on:Nov 27, 2022 | 12:07 PM

Share

ನಿಮ್ಮ ದೇಹವನ್ನು ಉತ್ತಮ ರೀತಿಯಲ್ಲಿ ಆರೋಗ್ಯವಾಗಿಡಲು ನಿಮ್ಮ ಜೀವನಶೈಲಿ ಹಾಗೂ ಆಹಾರ ಕ್ರಮಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ನಿಮ್ಮ ಕೆಲಸದ ಒತ್ತಡದ ನಡುವೆಯು ಒಂದಷ್ಟು ಸಮಯ ವರ್ಕೌಟ್, ಯೋಗಾಭ್ಯಾಸಕ್ಕೆ ಮೀಸಲಿಡಿ. ಇದು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಡುತ್ತದೆ. ಆದ್ದರಿಂದ ಇಂದು ನಾವು ನೀವು ನಿಮ್ಮ ವರ್ಕೌಟ್ ಸೆಷನ್‌ ಆರಂಭಿಸುವ ಮೊದಲು ತೆಗೆದುಕೊಳ್ಳಬೇಕಾದ ಪ್ರಮುಖ ಆಹಾರಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ.

ನಿಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವರ್ಕೌಟ್ ಸೆಷನ್‌ ಮೊದಲು ಸೇವಿಸಬೇಕಾದ ಆಹಾರದ ಕುರಿತು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾರವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಮುಖ ಆಹಾರ ಕ್ರಮಗಳ ಕುರಿತು ಮಾಹಿತಿ ಇಲ್ಲಿದೆ.

1.ಬಾಳೆಹಣ್ಣಿನ ಸ್ಮೂಥಿ(Banana Smoothie):

ಇದು ನರ ಮತ್ತು ಸ್ನಾಯುವಿನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುವ ಆಹಾರವಾಗಿದೆ. ಜೊತೆಗೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದು, ಇದು ನಿಮ್ಮ ವರ್ಕೌಟ್ ಸೆಷನ್‌ ಅವಧಿಯನ್ನು ಪೂರ್ಣಗೊಳಿಸಲು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

2. ಬ್ಲ್ಯಾಕ್ ಕಾಫಿ ಮತ್ತು ಬಾಳೆ ಹಣ್ಣು(Black Coffee+Banana):

ಬ್ಲ್ಯಾಕ್ ಕಾಫಿ ನಿಮಗೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಬಾಳೆಹಣ್ಣು ನಿಮ್ಮ ಜೀರ್ಣ ಕ್ರಿಯೆಯ ಅಂಗಾಂಗಗಳಿಗೆ ಸಹಾಯಕವಾಗಿದೆ. ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ.

3. ಎಳನೀರು(Coconut Water):

ಬಾಳೆಹಣ್ಣಿನಂತೆಯೇ, ಎಳನೀರು ಕೂಡ ದೇಹದಲ್ಲಿ ಪೊಟ್ಯಾಸಿಯಮ್ ಅಂಶವನ್ನು ಹೆಚ್ಚಿಸುತ್ತದೆ. ಪ್ರತಿ ದಿನ ನಿಮ್ಮ ವರ್ಕೌಟ್ ಸೆಷನ್‌ ಪ್ರಾರಂಭಿಸುವ ಮೊದಲು 1 ಗ್ಲಾಸ್ ಎಳನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ವ್ಯಾಯಮದ ಸಮಯದಲ್ಲಿ ಹೆಚ್ಚು ಸುಸ್ತು ಆಗದಂತೆ ನೋಡಿಕೊಳ್ಳುತ್ತದೆ.

4. ಸಿಹಿ ಗೆಣಸು(Sweet Potato):

ಸಿಹಿ ಗೆಣಸು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ. ಇದು ನೀವು ವ್ಯಾಯಮ ಪ್ರಾರಂಭಿಸಿದ ನಂತರ ದೀರ್ಘ ಕಾಲದ ವರೆಗೆ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ನೀವು ವರ್ಕೌಟ್ ಸೆಷನ್‌ ಪ್ರಾರಂಭಿಸುವ ಮೊದಲು ಈ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳಿ.

ಇದನ್ನು ಓದಿ: ಪ್ರತಿ ರಾತ್ರಿ ಮಲಗುವ ಮುನ್ನ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ

5.ಕಡಲೆಕಾಯಿ ಬೆಣ್ಣೆ(Peanut butter):

ಬ್ರೆಡ್ ಸ್ಲೈಸ್ ಜೊತೆಗೆ ಕಡಲೆಕಾಯಿ ಬೆಣ್ಣೆಯನ್ನು ಹಚ್ಚಿಕೊಂಡು ತಿನ್ನಿ. ಇದು ಉತ್ತಮವಾದ ಕೊಬ್ಬುಗಳು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಮಿಶ್ರಣವಾಗಿದೆ. ಆದ್ದರಿಂದ ಆದ್ದರಿಂದ ನೀವು ವರ್ಕೌಟ್ ಸೆಷನ್‌ ಪ್ರಾರಂಭಿಸುವ ಮೊದಲು ಈ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:06 pm, Sun, 27 November 22

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ