ಕರಿಮೆಣಸು ಹಾಗೂ ಬಾದಾಮಿ ಒಟ್ಟಿಗೆ ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು?

ನಾವೆಲ್ಲರೂ ಬಾದಾಮಿ ಮತ್ತು ಕರಿಮೆಣಸನ್ನು ಸೇವಿಸುತ್ತೇವೆ ಆದರೆ ವಿಭಿನ್ನ ರೀತಿಯಲ್ಲಿ. ಆದರೆ ಎರಡನ್ನೂ ಒಟ್ಟಿಗೆ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಕರಿಮೆಣಸು ಹಾಗೂ ಬಾದಾಮಿ ಒಟ್ಟಿಗೆ ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು?
AlmondsImage Credit source: Nitya Foods
Follow us
TV9 Web
| Updated By: ನಯನಾ ರಾಜೀವ್

Updated on: Sep 03, 2022 | 1:13 PM

ನಾವೆಲ್ಲರೂ ಬಾದಾಮಿ ಮತ್ತು ಕರಿಮೆಣಸನ್ನು ಸೇವಿಸುತ್ತೇವೆ ಆದರೆ ವಿಭಿನ್ನ ರೀತಿಯಲ್ಲಿ. ಆದರೆ ಎರಡನ್ನೂ ಒಟ್ಟಿಗೆ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಬಾದಾಮಿ ಮತ್ತು ಕರಿಮೆಣಸನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನಗಳೇನು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ? ಅಂತಹ ಪರಿಸ್ಥಿತಿಯಲ್ಲಿ, ಕರಿಮೆಣಸು ಮತ್ತು ಬಾದಾಮಿಗಳ ದೊಡ್ಡ ಪ್ರಯೋಜನಗಳ ಬಗ್ಗೆ ನಾವು ಇಲ್ಲಿ ತಿಳಿಸಲಿದ್ದೇವೆ.

ಬಾದಾಮಿ ಮತ್ತು ಕರಿಮೆಣಸು ತಿನ್ನುವುದರಿಂದ ಆಗುವ ಪ್ರಯೋಜನಗಳು

ಹೊಟ್ಟೆಗೆ ಪ್ರಯೋಜನಕಾರಿ ಬಾದಾಮಿಯುಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಕರಿಮೆಣಸಿನಲ್ಲಿ ಪೈಪರಿನ್ ಎಂಬ ಸಂಯುಕ್ತಗಳಿವೆ, ಇದು ಪ್ರೋಟೀನ್‌ಗಳನ್ನು ಒಡೆಯಲು ಮತ್ತು ಅವುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ಈ ಸಂಯೋಜನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಇದನ್ನು ಪ್ರತಿದಿನ ಸೇವಿಸಿದರೆ, ಅದು ಹೊಟ್ಟೆಗೆ ಪ್ರಯೋಜನಕಾರಿಯಾಗಿದೆ.

ಮೆದುಳನ್ನು ಆರೋಗ್ಯವಾಗಿರಿಸುತ್ತದೆ ಬಾದಾಮಿ ಮೆದುಳನ್ನು ಚುರುಕುಗೊಳಿಸುವುದರಿಂದ ಅದನ್ನು ಬ್ರೈನ್ ಫುಡ್ ಎಂದು ಕರೆಯಲಾಗುತ್ತದೆ ಅದೇ ಸಮಯದಲ್ಲಿ, ಕರಿಮೆಣಸಿನಲ್ಲಿ ಇರುವ ಪೈಪರಿನ್ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹ ಕೆಲಸ ಮಾಡುತ್ತದೆ, ಮಾತ್ರವಲ್ಲ, ನೀವು ಇದನ್ನು ಪ್ರತಿದಿನ ಸೇವಿಸಿದರೆ, ಅದು ನಿಮ್ಮ ಮೆದುಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಬಾದಾಮಿ ಮತ್ತು ಕರಿಮೆಣಸಿನ ಸಂಯೋಜನೆಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯಾಘಾತದ ಅಪಾಯವಿಲ್ಲ.

ಶೀತ ಕೆಮ್ಮಿಗೆ ರಾಮಬಾಣ ಶೀತ ಮತ್ತು ಕೆಮ್ಮಿನ ಸಮಸ್ಯೆಯಿರುವವರು ಬಾದಾಮಿ ಮತ್ತು ಕರಿಮೆಣಸನ್ನು ಸೇವಿಸಬಹುದು. ಇದು ಲೋಳೆಯ ಅತಿಯಾದ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ