AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತದಾನ ಮಾಡಿದ್ರೆ ಈ ರೋಗಗಳು ಬರುವುದಿಲ್ಲ

ರಕ್ತದಾನ ಶ್ರೇಷ್ಠ ದಾನ, ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ರಕ್ತದಾನದಿಂದ ದೇಹದಲ್ಲಿರುವ ಹಳೆಯ ರಕ್ತಗಳು ಹೋಗಿ ಹೊಸ ರಕ್ತ ಉತ್ಪಾದನೆ ಆಗುತ್ತದೆ. ಇಷ್ಟು ಮಾತ್ರವಲ್ಲದೆ ರಕ್ತದಾನ ಮಾಡುವುದರಿಂದ ಈ ರೋಗಗಳು ಬರುವುದಿಲ್ಲ ಎಂದು ಲಂಡನ್‌ನ ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯದಲ್ಲಿ ತಿಳಿದು ಬಂದಿದೆ. ರಕ್ತದಾನದಿಂದ ಯಾವೆಲ್ಲ ರೋಗ ಬರುವುದಿಲ್ಲ. ರಕ್ತದಾನದಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ನೋಡಿ.

ರಕ್ತದಾನ ಮಾಡಿದ್ರೆ ಈ ರೋಗಗಳು ಬರುವುದಿಲ್ಲ
ಸಾಂದರ್ಭಿಕ ಚಿತ್ರ Image Credit source: Getty Images
ಸಾಯಿನಂದಾ
| Edited By: |

Updated on:Apr 28, 2025 | 5:07 PM

Share

ದಾನಗಳಲ್ಲಿ ಮಹತ್ವ ದಾನದ ರಕ್ತದಾನ (Blood donation) ಎನ್ನುತ್ತಾರೆ. ರಕ್ತದಾನ ಮಾಡಿದ್ರೆ ಪ್ರಾಣ ಅಪಾಯದಲ್ಲಿರುವವರ ಜೀವವನ್ನು ಉಳಿಸಬಹುದು. ಅದಕ್ಕಾಗಿ ವೈದ್ಯರು ಜಾಗೃತಿಗಳನ್ನು, ಶಿಬಿರಗಳನ್ನು, ಅಭಿಯಾನಗಳನ್ನು ನಡೆಸುವುದು. ಇದು ಕೇವಲ ಜೀವ ಅಪಾದಲ್ಲಿರುವವರ ಪ್ರಾಣ ಮಾತ್ರವಲ್ಲ, ರಕ್ತದಾನ ಮಾಡುವವರಿಗೂ ಒಳ್ಳೆಯದು. ದೇಹದಿಂದ ತಿಂಗಳಿಗೆ ಅಥವಾ ವರ್ಷಕ್ಕೆ ರಕ್ತ ಬದಲಾವಣೆ ಆಗಬೇಕು. ಹೀಗೆ ಮಾಡುವುದರಿಂದ ಹೊಸ ರಕ್ತದ ಉತ್ಪಾದನೆಗೆ ಅವಕಾಶ ನೀಡುತ್ತದೆ. ಇದರ ಜತೆಗೆ ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ಹೇಳಲಾಗಿದೆ. ರಕ್ತದಾನ ಮಾಡುವುದರಿಂದ ಅಪಾಯಕಾರಿ ಕಾಯಿಲೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ರಕ್ತದಾನ ಮಾಡುವುದರಿಂದ ಕ್ಯಾನ್ಸರ್, ( cancer) ಹೃದ್ರೋಗ ಮತ್ತು ಮಧುಮೇಹದಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ.

ರಕ್ತದಾನ ಮಾಡುವುದರಿಂದ ಈ ರೋಗ ಬರುವುದಿಲ್ಲ;

  • ರಕ್ತದಾನ ಮಾಡುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು: ಲಂಡನ್‌ನ ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯ ಹೇಳಿರುವ ಪ್ರಕಾರ ರಕ್ತದಾನ ಮಾಡುತ್ತಿರುವ ಜನರಿಗೆ ಲ್ಯುಕೇಮಿಯಾದಂತಹ ರಕ್ತ ಸಂಬಂಧಿತ ಕ್ಯಾನ್ಸರ್‌ಗಳು ಬರುವ ಅಪಾಯ ಕಡಿಮೆ. ರಕ್ತದಾನ ಮಾಡುವುದರಿಂದ ದೇಹವು ಹೊಸ ರಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದರಿಂದಾಗಿ ಅಪಾಯಕಾರಿ ರೂಪಾಂತರಗಳ ಅಪಾಯ ಕಡಿಮೆಯಾಗುತ್ತದೆ.
  • ರಕ್ತದಾನ ಹೃದಯಕ್ಕೆ ಒಳ್ಳೆಯದು: ರಕ್ತದಾನ ಮಾಡುವುದರಿಂದ ರಕ್ತದ ದಪ್ಪ ಆಗುವುದಿಲ್ಲ. ಇದು ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಹೆಚ್ಚುವರಿ ಕಬ್ಬಿಣವು ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತದೆ, ಇದು ಹೃದ್ರೋಗಕ್ಕೆ ಕಾರಣವಾಗಬಹುದು.
  • ಮಧುಮೇಹ ಅಪಾಯ ಕಡಿಮೆ: ರಕ್ತದಾನ ಮಾಡುವುದರಿಂದ ಇನ್ಸುಲಿನ್ ಸೂಕ್ಷ್ಮತೆಯು ಹೆಚ್ಚಾಗಬಹುದು, ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
  • ಉಚಿತ ಆರೋಗ್ಯ ತಪಾಸಣೆ: ರಕ್ತದಾನ ಮಾಡುವ ಮೊದಲು ಆರೋಗ್ಯದ ಪರೀಕ್ಷೆ ಮಾಡುವುದು ಕಡ್ಡಾಯ. ರಕ್ತದೊತ್ತಡ, ಹಿಮೋಗ್ಲೋಬಿನ್, ನಾಡಿಮಿಡಿತ ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ. ಆರೋಗ್ಯದಲ್ಲಿ ಏನಾದರೂ ಸಮಸ್ಯ ಇದ್ದರೆ ಇದರಿಂದ ಕಡಿಮೆ ಆಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Mon, 28 April 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ