AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25, 45, 60 ನಿಮಿಷ ಈ ಕ್ರಮ ಪಾಲಿಸಿ, ದೈಹಿಕ, ಮಾನಸಿಕ ಆರೋಗ್ಯದಲ್ಲಿ ಬದಲಾವಣೆ ಖಂಡಿತ

ದೇಹದ ಆರೋಗ್ಯವನ್ನು ನಿಯಂತ್ರಣ ಮಾಡಲು ದೈಹಿಕ ಚಟುವಟಿಕೆಗಳು ಅಗತ್ಯವಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಬದಲಾವಣೆ ಆಗಬೇಕೆಂದರೆ, ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕು. ದೇಹದ ಭಾಗಗಳನ್ನು ಸಕ್ರಿಯವಾಗಿ ಇಟ್ಟುಕೊಳ್ಳಲು ಈ ವ್ಯಾಯಾಮ ಬೇಕು. ಅದರಲ್ಲೂ ಈ ಬೆಂಗಳೂರಿನ ಜನರಿಗೆ ಇನ್ನು ಮುಖ್ಯವಾಗಿರುತ್ತದೆ. ಯಾವೆಲ್ಲ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಇಲ್ಲಿದೆ ನೋಡಿ.

25, 45, 60 ನಿಮಿಷ ಈ ಕ್ರಮ ಪಾಲಿಸಿ, ದೈಹಿಕ, ಮಾನಸಿಕ ಆರೋಗ್ಯದಲ್ಲಿ ಬದಲಾವಣೆ ಖಂಡಿತ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
| Edited By: |

Updated on: Apr 28, 2025 | 3:02 PM

Share

ಪ್ರತಿದಿನ ಮನುಷ್ಯನ ದೇಹದ ಚಟುವಟಿಕೆಯಲ್ಲಿ ವ್ಯಾಯಾಮ (exercise) ಎನ್ನುವುದು ಬಹಳ ಮುಖ್ಯವಾದ ಕ್ರಮವಾಗಿರುತ್ತದೆ. ಇದರಿಂದ ದೇಹದಲ್ಲಿ ಹಲವು ಬದಲಾವಣೆ ಆಗುವುದು ಖಂಡಿತ, ಆದರೆ ಇದಕ್ಕೆ ಒಂದು ನಿಯಮವಿದೆ. ಸಮಯ ಸಿಕ್ಕಾಗ ಅಥವಾ ಅನುಕೂಲಕ್ಕೆ ತಕ್ಕಂತೆ ಮಾಡುವುದಲ್ಲ. ಹಾಗೆ ಮಾಡಿದ್ರೆ ಅದು ವ್ಯರ್ಥ. ದೇಹದ ಭಾಗಗಳನ್ನು ಸಕ್ರಿಯವಾಗಿ ಇಟ್ಟುಕೊಳ್ಳಲು ಈ ವ್ಯಾಯಾಮ ಬೇಕು (moderate activity). ಅದರಲ್ಲೂ ಈ ಬೆಂಗಳೂರಿನ ಜನರಿಗೆ ಇನ್ನು ಮುಖ್ಯವಾಗಿರುತ್ತದೆ. ಆಫೀಸ್​​ನಿಂದ ಮನೆ, ಮನೆಯಿಂದ ಆಫೀಸ್​​ ಇಷ್ಟೇ ಜೀವನ. ಅದರ ಜತೆಗೆ ಟ್ರಾಫಿಕ್, ಕೆಲಸ ಒತ್ತಡ, ಇದನ್ನೆಲ್ಲ ದೇಹಕ್ಕೆ ಹಾಗೂ ಮನಸ್ಸಿಗೂ ತುಂಬಾ ಭಾರದ ಭಾವನೆಯನ್ನು ನೀಡುತ್ತದೆ. ಅದಕ್ಕಾಗಿ ವ್ಯಾಯಮ ಎನ್ನುವುದು ಪರಿಹಾರ ಆಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಒಂದು ಸಲಹೆಯನ್ನು ನೀಡಿದೆ. ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯನ್ನು ಮಾಡಬೇಕು ಎಂದು ಹೇಳಿದೆ.

ದಿನಕ್ಕೆ ಸುಮಾರು 25 ರಿಂದ 30 ನಿಮಿಷಗಳ ಕಾಲ ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆ ಆಗುತ್ತದೆ. 25, 45, ಅಥವಾ 60 ನಿಮಿಷಗಳು ಎಂಬ ನಿಮಯಗಳನ್ನು ಮಾಡಿಕೊಂಡು ವ್ಯಾಯಾಮ ಮಾಡಿದ್ರೆ ಆರೋಗ್ಯದಲ್ಲಿ ಅನೇಕ ಲಾಭಗಳು ಆಗುತ್ತದೆ. ಸದೃಢವಾಗಿರಲು ಮತ್ತು ಹೃದಯದ ಆರೋಗ್ಯ ಉತ್ತಮವಾಗಿರಲು ದಿನಕ್ಕೆ 30 ರಿಂದ 45 ನಿಮಿಷಗಳ ಮಧ್ಯಮ ದೈಹಿಕ ಚಟುವಟಿಕೆ ಮಾಡಿ ಎಂದು ಮುಂಬೈನ ಪರೇಲ್‌ನಲ್ಲಿರುವ ಗ್ಲೆನೀಗಲ್ಸ್ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ಹಿರಿಯ ಸಲಹೆಗಾರ ಡಾ. ಅನುಪ್ ಖತ್ರಿ ಹೇಳಿದ್ದಾರೆ. ಒಂದು ವೇಳೆ ತೂಕ ಇಳಿಕೆ ಅಥವಾ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕೆಂದರೆ, ಕನಿಷ್ಠ ಒಂದು ಗಂಟೆಯವರೆಗೆ ಅವರಿಗೆ ಈ ವ್ಯಾಯಾಮಗಳನ್ನು ಮಾಡಬೇಕು. ಇದರ ಜತೆಗೆ 25 ನಿಮಿಷಗಳ ಹೆಚ್ಚಿನ ವ್ಯಾಯಾಮ ಮಾಡಿದ್ರೆ ಒತ್ತಡವನ್ನು ನಿವಾರಿಸಲು ಮತ್ತು ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತದೆ.

ನಡಿಗೆ, ಸೈಕ್ಲಿಂಗ್, ಯೋಗ ಅಥವಾ ಯೋಗ ತರಬೇತಿಗಳಿಗೆ ಹೋಗಿ ಇವುಗಳನ್ನು ಮಾಡಬಹುದು. ಇದು ತುಂಬಾ ಸರಳವಾಗಿರುತ್ತದೆ. ಇದರ ಜತೆಗೆ ಫಿಟ್‌ನೆಸ್‌ಗಾಗಿ ಹಾಗೂ ಏಕಗ್ರತೆಗಾಗಿ ಕಾರ್ಡಿಯೋಗಳನ್ನು ಕೂಡ ವಾರದಲ್ಲಿ ಮಾಡಬಹುದು. 60 ನಿಮಿಗಳ ಕಾಲ ಸರಳ ವ್ಯಾಯಾಮಗಳನ್ನು ಮಾಡಿದ್ರೆ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಫಿಟ್‌ನೆಸ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಇಂತಹ ವ್ಯಾಯಾಮಗಳನ್ನು ಮಾಡುವುದು ಸಾಮಾನ್ಯ ಆರೋಗ್ಯವನ್ನು ಕಾಪಾಡುತ್ತದೆ ಎಂದು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಭೌತಚಿಕಿತ್ಸೆಯ ವಿಭಾಗದ ಮುಖ್ಯಸ್ಥ ಡಾ. ಸುರೇಂದರ್ ಪಾಲ್ ಸಿಂಗ್ ಹೇಳಿದರು.

ಇದನ್ನೂ ಓದಿ: ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ, ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಪ್ರತಿದಿನ ಈ ನಿಮಯಗಳ ಪ್ರಕಾರ ಸರಳ ವ್ಯಾಯಮಗಳನ್ನು ಮಾಡಿದ್ರೆ, ಖಂಡಿತ ದೇಹದ ಹಾಗೂ ಮನಸ್ಸಿನ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯಿಂದ ಅಥವಾ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಅನುಭವಿಸುವ ಮಾನಸಿಕ ಹಾಗೂ ದೈಹಿಕ ಸಂಕಷ್ಟಕ್ಕೆ ಇದು ಉತ್ತಮ ಪರಿಹಾರವಾಗಿರುತ್ತದೆ. ಈ ಮೂಲಕ ಆರೋಗ್ಯಕರ ಜೀವನದತ್ತ ಗಮನಹರಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ