Foamy Urine: ನೀವು ಮೂತ್ರ ವಿಸರ್ಜನೆ ಮಾಡುವಾಗ ನೊರೆ ಬರುತ್ತಾ? ಇದು ಈ ಕಾಯಿಲೆಯ ಲಕ್ಷಣ

ರಕ್ತವನ್ನು ಸ್ವಚ್ಛಗೊಳಿಸಲು ಮೂತ್ರಪಿಂಡಗಳು ಆರೋಗ್ಯಕರವಾಗಿರುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ದೇಹ ಆರೋಗ್ಯವಾಗಿರಲು ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ಮೂತ್ರಪಿಂಡ ಕೆಲವು ಸೂಚನೆಗಳನ್ನು ನೀಡುತ್ತದೆ. ಅವುಗಳನ್ನು ನಿರ್ಲಕ್ಷಿಸಬಾರದು. ಈ ರೀತಿ ಕಂಡು ಬರುವ ಲಕ್ಷಣಗಳಲ್ಲಿ ಮೂತ್ರದಲ್ಲಿ ನೊರೆ ಬರುವುದು ಕೂಡ ಒಂದು. ಇದು ಮೂತ್ರಪಿಂಡ ವೈಫಲ್ಯದ ಸಂಕೇತವಾಗಿರಬಹುದು. ನಿಮಗೂ ಈ ರೀತಿ ಆಗುತ್ತಿದ್ದರೆ ಅವುಗಳಿಗೆ ಕಾರಣ ತಿಳಿದುಕೊಂಡು, ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಿ.

Foamy Urine: ನೀವು ಮೂತ್ರ ವಿಸರ್ಜನೆ ಮಾಡುವಾಗ ನೊರೆ ಬರುತ್ತಾ? ಇದು ಈ ಕಾಯಿಲೆಯ ಲಕ್ಷಣ
ಸಾಂದರ್ಭಿಕ ಚಿತ್ರ

Updated on: Jun 13, 2025 | 3:20 PM

ನಮ್ಮ ದೇಹ ಆರೋಗ್ಯವಾಗಿರಬೇಕು ಎಂದರೆ ಕಿಡ್ನಿ (Kidney) ಸರಿಯಾಗಿ ಕೆಲಸ ಮಾಡುವುದು ಬಹಳ ಮುಖ್ಯ. ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಿದ್ದರೆ ಅದನ್ನು ಮೂತ್ರದ ಮೂಲಕ ತಿಳಿಯಬಹುದು. ಇದರಿಂದ ಆರೋಗ್ಯ (Health) ಹೇಗಿದೆ ಎಂಬುದನ್ನು ಬಹಿರಂಗಪಡಿಸಬಹುದು. ಸಾಮಾನ್ಯವಾಗಿ ನಮ್ಮ ದೇಹದ ಅಂಗಗಳು ಮೂತ್ರವನ್ನು ಉತ್ಪಾದಿಸಲು ಕೆಲಸ ಮಾಡುತ್ತವೆ. ಜೊತೆಗೆ ಮೂತ್ರಪಿಂಡಗಳು ರಕ್ತದಿಂದ ಹೆಚ್ಚುವರಿ ದ್ರವ, ವಿಷ ಮತ್ತು ತ್ಯಾಜ್ಯವನ್ನು ತೆಗೆದುಹಾಕುವ ಮೂಲಕ ಮೂತ್ರವನ್ನು ಉತ್ಪಾದಿಸುತ್ತವೆ. ನಂತರ ಅದು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತದೆ. ಆದರೆ ನಮ್ಮ ಮೂತ್ರ ಸರಿಯಾಗಿ ಹೋಗುತ್ತಿದ್ದರೆ ಕಿಡ್ನಿ ಆರೋಗ್ಯವಾಗಿದೆ ಎಂದರ್ಥ. ಆದರೆ ಮೂತ್ರ ಮಾಡುವಾಗ ನೊರೆ (Foamy Urine) ಬಂದರೆ, ಅದು ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿರಬಹುದು. ಹಾಗಾದರೆ ಮೂತ್ರ ವಿಸರ್ಜನೆ ಮಾಡುವಾಗ ನೊರೆ ಯಾಕೆ ಕಂಡುಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಕಿಡ್ನಿ ನೀಡುವ ಮುನ್ನೆಚ್ಚರಿಕೆಗಳು ಹೇಗಿರುತ್ತವೆ?

ಸಾಮಾನ್ಯವಾಗಿ ಮೂತ್ರದಲ್ಲಿ ನೊರೆ ಬರುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ನೊರೆ ಬರುತ್ತಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಒಳ್ಳೆಯದು. ಆದರ ಮೊದಲು ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಕೆಲವು ವರದಿಗಳ ಪ್ರಕಾರ, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಮೂತ್ರದಲ್ಲಿ ಪ್ರೋಟೀನ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಇದು ನೊರೆ ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವಾಗಿದೆ. ಈ ರೀತಿ ಮೂತ್ರದಲ್ಲಿ ನೊರೆ ಬಂದರೆ, ಅದು ಮೂತ್ರಪಿಂಡದ ಸ್ಥಿತಿಯನ್ನು ಸೂಚಿಸುತ್ತದೆ. ಅಂದರೆ ಕಿಡ್ನಿ ಆರೋಗ್ಯವಾಗಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇನ್ನು ಮೂತ್ರದಲ್ಲಿ ನೊರೆ ಬರುವುದರ ಜೊತೆಗೆ, ಕೈಕಾಲುಗಳಲ್ಲಿ ಊತ, ಆಯಾಸ, ಹಸಿವಿನ ಕೊರತೆ, ಹಸಿವಿಲ್ಲದಿರುವುದು ಮತ್ತು ಮೂತ್ರ ವಿಸರ್ಜನೆ ಹೆಚ್ಚಾಗುವುದು ಮುಂತಾದ ಹಲವಾರು ಸಮಸ್ಯೆಗಳು ಉಂಟಾಗಬಹುದು.

ನಿಮ್ಮ ಈ ಅಭ್ಯಾಸ ಮೂತ್ರಪಿಂಡಕ್ಕೆ ಹಾನಿ ಮಾಡುತ್ತದೆ;

ಕೆಟ್ಟ ಆಹಾರ ಮತ್ತು ಪಾನೀಯಗಳು ಮೂತ್ರಪಿಂಡಗಳಿಗೆ ಅಪಾಯಕಾರಿ. ಇದು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ನೋವು ನಿವಾರಕಗಳ ಅತಿಯಾದ ಬಳಕೆ ಕೂಡ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ.

ಇದನ್ನೂ ಓದಿ
ಮಲಬದ್ಧತೆಯಿಂದ ಮುಕ್ತಿ ಪಡೆಯಲು ಈ ಎಲೆಯ ರಸ ಸೇವನೆ ಮಾಡಿ ಸಾಕು!
ಇದಕ್ಕೆ ಹೇಳೋದು ವಾರದಲ್ಲಿ ಒಮ್ಮೆಯಾದರೂ ಮಶ್ರೂಮ್ ತಿನ್ನಿ ಅಂತ
ಪಾಪ್‌ಕಾರ್ನ್ vs ಬಾಳೆಹಣ್ಣಿನ ಚಿಪ್ಸ್ ಯಾವುದು ಆರೋಗ್ಯಕರ?
ಮಧುಮೇಹದಿಂದ ಮಲಬದ್ಧತೆವರೆಗೆ ಎಲ್ಲಾ ಸಮಸ್ಯೆಗೂ ಈ ಬಳ್ಳಿಯೇ ಅಮೃತ

ಇದನ್ನೂ ಓದಿ: Kidney Disease: ಬೆಳಗ್ಗಿನ ಸಮಯದಲ್ಲಿ ಈ ರೀತಿಯಾಗುವುದು ಕಿಡ್ನಿ ಸಮಸ್ಯೆಯ ಲಕ್ಷಣ

ನೊರೆ ಮೂತ್ರದೊಂದಿಗೆ ಕಂಡು ಬರುವ ಇತರ ಲಕ್ಷಣಗಳು:

  • ನಿಮ್ಮ ಕೈಗಳು, ಪಾದಗಳು, ಮುಖ ಮತ್ತು ಹೊಟ್ಟೆಯಲ್ಲಿ ಊತ ಕಂಡುಬರುವುದು
  • ಆಯಾಸ
  • ಹಸಿವಾಗದಿರುವುದು
  • ವಾಕರಿಕೆ
  • ವಾಂತಿ
  • ನಿದ್ರೆ ಮಾಡುವುದಕ್ಕೆ ತೊಂದರೆ ಆಗುವುದು
  • ಮೂತ್ರದ ಪ್ರಮಾಣದಲ್ಲಿನ ಬದಲಾವಣೆಗಳು
  • ಗಾಢ ಬಣ್ಣದ ಮೂತ್ರ
  • ಸರಿಯಾಗಿ ವೀರ್ಯ ಬಿಡುಗಡೆಯಾಗದಿರುವುದು
  • ಬಂಜೆತನ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ