ಸಾಮಾನ್ಯವಾಗಿ ವರ್ಷದಲ್ಲಿ ಒಂದೆರಡು ಬಾರಿಯಾದರೂ ಬಾಯಿ ಹುಣ್ಣು(Mouth Sore) ಸಮಸ್ಯೆ ಎಲ್ಲರನ್ನೂ ಕಾಡಿರುತ್ತದೆ. ಬಾಯಲ್ಲಿ ಹುಣ್ಣಾದರೆ ಏನೂ ಕುಡಿಯಲೂ ಆಗದೆ ಆಹಾರವನ್ನು ತಿನ್ನಲೂ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಬಾಯಿ ಹುಣ್ಣಿಗೆ ದೇಹದ ಉಷ್ಣವೇ ಕಾರಣ, ಹಾಗೆಯೇ ನೀವು ಹೆಚ್ಚು ಒತ್ತಡದಲ್ಲಿದ್ದರೆ ಅಥವಾ ಆಹಾರವು ಕೆಲವು ಅಲರ್ಜಿಯನ್ನು ಉಂಟು ಮಾಡ ಬಹುದು. ಇದಕ್ಕೆ ಅನೇಕ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ, ಅದಕ್ಕೆ ಮನೆಮದ್ದನ್ನೂ ಮಾಡಬಹುದು.
ತೆಂಗಿನ ಕಾಯಿ: ತೆಂಗಿನ ಕಾಯಿಯ ಹಾಲು ಹಿಂಡಿ ಬಾಯಿ ಹುಣ್ಣಿಗೆ ಮಸಾಜ್ ಮಾಡಿದರೆ ಸಹ ಹುಣ್ಣು ಗುಣವಾಗುತ್ತದೆ.
ಮಾಂಸಾಹಾರದಿಂದ ದೂರವಿರಿ. ಕ್ಯಾಲ್ಸಿಯಂ, ವಿಟಮಿನ್ ಸಿ ಹೆಚ್ಚಿರುವ ಯೋಗರ್ಟ್, ಹಾಲು, ಚೀಸ್, ಕಿತ್ತಳೆ ಜ್ಯೂಸ್ ಸೇವಿಸುವುದು ಉತ್ತಮ. ಹಾಗೆಯೇ ಬಾಯಿ ಹುಣ್ಣಿನ ಸಮಸ್ಯೆಯಿದ್ದಾಗ ಮಾಂಸಾಹಾರದಿಂದ ಸಾಧ್ಯವಾದಷ್ಟು ದೂರವಿರಿ.
ಅಲೋವೆರಾ: ಅಲೋವೆರಾವನ್ನು ಹುಣ್ಣಿರೋ ಜಾಗಕ್ಕೆ ಹಚ್ಚುವುದರಿಂದ ಬೇಗ ಹುಣ್ಣು ವಾಸಿಯಾಗುತ್ತದೆ. ನೋವನ್ನು ಕಡಿಮೆ ಮಾಡುತ್ತದೆ.
ಕಿತ್ತಳೆ ರಸ: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಬಾಯಿ ಹುಣ್ಣನ್ನು ಶಮನ ಮಾಡುತ್ತದೆ. ಬಾಯಿ ಹುಣ್ಣಿರುವಾಗ ಕಿತ್ತಳೆ ಹಣ್ಣನ್ನು ನೇರವಾಗಿ ಸೇವಿಸುವುದು ಕಷ್ಟವಾಗಬಹುದು ಹೀಗಾಗಿ ನಿತ್ಯ 2 ಲೋಟ ಕಿತ್ತಳೆ ರಸ ಕುಡಿಯಿರಿ.
ಕೊತ್ತಂಬರಿ ಸೊಪ್ಪು: ಬಾಯಿ ಹುಣ್ಣು ಕಾಣಿಸಿದರೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಕುಡಿಯಬೇಕು. ಹಾಗೆಯೇ ಕೊತ್ತಂಬರಿ ಕಾಳನ್ನು ನೆನೆ ಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಿ ಪರಿಹಾರ ಕಾಣಬಹುದು.
ಮೆಂತೆ ಕಾಳು: ರಾತ್ರಿ ಮಲಗುವ ಮೊದಲು ಮೆಂತೆ ಕಾಳನ್ನು ಬಾಯಿಯಲ್ಲಿ ಹಾಕಿ ಸ್ವಲ್ಪ ಹೊತ್ತು ಜಗಿದು ನುಂಗಿದರೂ ಬಾಯಿ ಹುಣ್ಣಿನ ಸಮಸ್ಯೆ ದೂರವಾಗುತ್ತದೆ.
ಅರಶಿಣ: ಅರಿಶಿಣವನ್ನು ಗ್ಲಿಸರಿನ್‌ಗೆ ಸೇರಿಸಿ ಹುಣ್ಣುಗಳಿಗೆ ಹಚ್ಚಿದರೂ ಹುಣ್ಣು ಮಾಯವಾಗುತ್ತದೆ.
ಸೀಬೆಕಾಯಿ ಎಲೆ: ಪೇರಲೆ ಅಥವಾ ಸೀಬೆಕಾಯಿ ಮರದ ಚಿಗುರು ಎಲೆಯ ರಸ ಹುಣ್ಣಿರುವ ಜಾಗಕ್ಕೆ ತಗುಲಿಸಿ ಕುಡಿಯುವುದರಿಂದ ಸಹ ಪರಿಹಾರ ಕಾಣಬಹುದು.
ತುಪ್ಪ: ಶುದ್ಧ ತುಪ್ಪವನ್ನು ಬಾಯಿ ಹುಣ್ಣಿರುವ ಜಾಗಕ್ಕೆ ಸವರಿ ಮಲಗಿದರೆ ಕೂಡ ಶೀಘ್ರದಲ್ಲೇ ಹುಣ್ಣು ವಾಸಿಯಾಗುತ್ತದೆ.
ತುಳಸಿ ಎಲೆ: ಬಾಯಿ ಹುಣ್ಣಾದಾಗ ತುಳಸಿ ಎಲೆಯನ್ನು ಜಗಿಯುವುದರಿಂದ ಸಹ ಪರಿಹಾರ ಕಂಡುಕೊಳ್ಳಬಹುದು.
ಸೂಚನೆ: ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಹಾಗೂ ಮನೆಮದ್ದು ಆಧರಿತ ಲೇಖನವಾಗಿದೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ