Cherry Benefits: ನಿದ್ರಾಹೀನತೆ ಹೋಗಲಾಡಿಸುವ ಚೆರ್ರಿ ಹಣ್ಣಿನ ಇತರೆ ವಿಶೇಷತೆ ಏನು?
Cherry Benefits: ಚೆರ್ರಿ(Cherry) ಹಣ್ಣನ್ನು ಇಷ್ಟ ಪಡದ ಜನರೇ ಇಲ್ಲ, ಇವುಗಳನ್ನು ಕೇಕ್, ಟಾರ್ಟ್ಸ್, ಮತ್ತು ಚೀಸ್ ಕೇಕ್ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ಕೇವಲ ರುಚಿಯನ್ನು ನೀಡುವುದಲ್ಲದೇ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
ಚೆರ್ರಿ(Cherry) ಹಣ್ಣನ್ನು ಇಷ್ಟ ಪಡದ ಜನರೇ ಇಲ್ಲ, ಇವುಗಳನ್ನು ಕೇಕ್, ಟಾರ್ಟ್ಸ್, ಮತ್ತು ಚೀಸ್ ಕೇಕ್ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ಕೇವಲ ರುಚಿಯನ್ನು ನೀಡುವುದಲ್ಲದೇ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಈ ಹಣ್ಣುಗಳನ್ನು ಹಲವಾರು ಆರೋಗ್ಯ ಸಮಸ್ಯೆಯ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಚೆರ್ರಿ ಹಣ್ಣುಗಳಲ್ಲಿ ವಿಟಮಿನ್ ಬಿ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಪೊಟ್ಯಾಸಿಯಂ, ಮ್ಯಾಂಗನೀಸ್ , ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ, ಮತ್ತು ರಂಜಕ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಉರಿಯೂತದ ಗುಣಗಳನ್ನು ಹೊಂದಿದೆ.
ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
-ಚೆರ್ರಿ ಹಣ್ಣಿನಲ್ಲಿ ಕಬ್ಬಿಣ, ಮ್ಯಾಂಗನೀಸ್, ಸತು, ಪೊಟ್ಯಾಸಿಯಂನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಬೀಟಾ ಕ್ಯಾರೋಟಿನ್ ಅನ್ನು ಸಹ ಹೊಂದಿರುತ್ತದೆ. ಇದು ಹೃದ್ರೋಗವನ್ನು ನಿವಾರಿಸುತ್ತದೆ.
-ಚೆರ್ರಿ ಹಣ್ಣುಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು.
-ಚೆರ್ರಿ ಹಣ್ಣಿನಲ್ಲಿ ಮೆಲಟೋನಿನ್ ಎಂಬ ಅಂಶವಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿವೆ. ಇದು ನೀವು ಅನಾರೋಗ್ಯಕ್ಕೊಳಗಾಗುವುದನ್ನು ತಡೆಯುತ್ತದೆ.
-ಪ್ರತಿಯೊಬ್ಬ ವ್ಯಕ್ತಿಯು ಒತ್ತಡವನ್ನು ಹೊಂದಿರುತ್ತಾರೆ. ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಚೆರ್ರಿ ಹಣ್ಣುಗಳನ್ನು ಸೇವಿಸಿ. ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
-ಚೆರ್ರಿ ಹಣ್ಣುಗಳಲ್ಲಿ ಮೆಲಟೋನಿನ್ ಸಮೃದ್ಧವಾಗಿದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಚೆರ್ರಿ ಹಣ್ಣಿನ ಪ್ರಯೋಜನಗಳು
ನಿದ್ರಾ ಹೀತನೆ ಕಡಿಮೆ ಮಾಡುತ್ತದೆ ಚೆರ್ರಿಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಇದ್ದು ಅದು ಉತ್ತಮ ನಿದ್ರೆಗೆ ಸಹಕಾರಿ, ಮೆಲಟೋನಿನ್ ಮೆದುಳಿನಲ್ಲಿರುವ ಪೀನಿಯಲ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್. ಇದು ನಿಮ್ಮ ನಿದ್ರೆ ಮತ್ತು ಎಚ್ಚರ ಚಕ್ರಗಳನ್ನು ನಿಯಂತ್ರಿಸುತ್ತದೆ ಮತ್ತು ಆಂತರಿಕ ದೇಹದ ಗಡಿಯಾರವನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ. ಈ ಹಣ್ಣು ನಿಮ್ಮ ಚಯಾಪಚಯ ಕ್ರಿಯೆಯನ್ನು ಬಲಪಡಿಸುವ ವಿಟಮಿನ್‌ಗಳನ್ನು ಹೊಂದಿದೆ. ಅಲ್ಲದೇ ನಿಮ್ಮ ದೇಹದಲ್ಲಿರುವ ವಿಷದ ಅಂಶಗಳನ್ನು ಸಹ ಹೊರಹಾಕಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ ಈ ಹಣ್ಣುಗಳು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ನೀವು ಸ್ವಲ್ಪ ತೂಕ ಇಳಿಸಿಕೊಳ್ಳಲು ಯೋಜಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಚೆರ್ರಿಗಳನ್ನು ಸೇರಿಸಿ ಸೇವಿಸಲು ಮರೆಯಬೇಡಿ.
ರಕ್ತದೊತ್ತಡವನ್ನು ಕಡಿಮೆ ಮಾಡಲಿದೆ ಚೆರ್ರಿಗಳು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ ಹೀಗಾಗಿ ದೇಹದಿಂದ ಹೆಚ್ಚುವರಿ ಸೋಡಿಯಂ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ದೇಹದಲ್ಲಿನ ಪೊಟ್ಯಾಸಿಯಮ್ ಮತ್ತು ಸೋಡಿಯಂ ಎರಡರ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ.
ಚರ್ಮದ ಸಮಸ್ಯೆ ನಿವಾರಣೆ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.ಈ ಹಣ್ಣುಗಳು ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವುದರಿಂದ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಅಲ್ಲದೇ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ, ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚೆರ್ರಿಗಳು ನಿಮ್ಮ ಚರ್ಮದ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಅದು ಸೂರ್ಯನ ಕಿರಣಗಳಿಂದ ಉಂಟಾಗುವ ತೊಂದರೆಯನ್ನು ಸಹ ನಿವಾರಿಸುತ್ತದೆ.
ಸೂಚನೆ: ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಹಾಗೂ ಮನೆಮದ್ದು ಆಧರಿತ ಲೇಖನವಾಗಿದೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Sun, 15 May 22