ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿಮ್ಮ ಹೃದಯ ಅಪಾಯದಲ್ಲಿದೆ ಎಂದರ್ಥ

ಹೃದಯ ವೈಫಲ್ಯದ ಆರಂಭಿಕ ಲಕ್ಷಣವನ್ನು ತಿಳಿದುಕೊಂಡು, ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಆದ್ದರಿಂದ ನಿಮ್ಮ ದೇಹದಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ.

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿಮ್ಮ ಹೃದಯ ಅಪಾಯದಲ್ಲಿದೆ ಎಂದರ್ಥ
Image Credit source: NDTV
Follow us
|

Updated on: May 15, 2023 | 7:00 AM

ಹೃದಯವು ದುರ್ಬಲಗೊಂಡಾಗ ಮತ್ತು  ಕಾರ್ಯವನ್ನು ನಿರ್ವಹಿಸಲು ವಿಫಲವಾದಾಗ ಹೃದಯ ವೈಫಲ್ಯ ಸಂಭವಿಸುತ್ತದೆ. ಈ ಸ್ಥಿತಿಯು ದೇಹದ ಮೇಲೆ ಪರಿಣಾಮ ಬೀರಬಹುದು ಮತ್ತು ಅಂಗಗಳ ವೈಫಲ್ಯಕ್ಕೂ ಕಾರಣವಾಗಬಹುದು. ಭಾರತದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ನಂತರ ಹೃದಯ ವೈಫಲ್ಯದ ಹೆಚ್ಚಿನ ಪ್ರಕರಣಗಳನ್ನು ಕಂಡುಹಿಡಿಯಲಾಗುತ್ತದೆ. ಅಂತಹ ಘಟನೆಯ ಸಮಯದಲ್ಲಿ, ಒಂದು ಅಥವಾ ಹೆಚ್ಚಿನ ರಕ್ತನಾಳಗಳು ಸಂಪೂರ್ಣವಾಗಿ ನಿರ್ಬಂಧಿಸಲ್ಪಡುತ್ತವೆ ಮತ್ತು ಹೃದಯ ಸ್ನಾಯುಗಳಿಗೆ ರಕ್ತವನ್ನು ಪೂರೈಸಲು ವಿಫಲವಾಗುತ್ತವೆ . ಹೃದಯ ವೈಫಲ್ಯದ ಆರಂಭಿಕ ಲಕ್ಷಣವನ್ನು ತಿಳಿದುಕೊಂಡು, ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಆದ್ದರಿಂದ ನಿಮ್ಮ ದೇಹದಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ.

ಉಬ್ಬಸ, ಕೆಮ್ಮು:

ನಿಮಗೆ ವಿಪರೀತ ಕೆಮ್ಮು ಅಥವಾ ಉಬ್ಬಸ, ಉಸಿರಾಟದ ತೊಂದರೆ ಉಂಟಾಗುತ್ತಿದ್ದರೆ ಎಂದಿಗೂ ಅದನ್ನು ನಿರ್ಲಕ್ಷ್ಯಿಸದಿರಿ. ಬದಲಾಗಿ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ, ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ.

ಪಾದದಲ್ಲಿ ಊತ:

ದೇಹದಲ್ಲಿ ರಕ್ತ ಪರಿಚಲನೆ ತೊಂದರೆ ಉಂಟಾದಾಗ, ದೇಹದ ಕೆಳಗಿನ ಭಾಗಗಳಿಂದ ಬಳಸಿದ ರಕ್ತವನ್ನು ಮರಳಿ ತರಲು ವಿಫಲವಾಗುತ್ತದೆ. ಇದು ಕಾಲುಗಳು, ಕಣಕಾಲುಗಳು, ಹೊಟ್ಟೆ ಮತ್ತು ತೊಡೆಗಳಲ್ಲಿ ದ್ರವವನ್ನು ಸಂಗ್ರಹಿಸುತ್ತದೆ. ಇದು ಊತಕ್ಕೆ ಕಾರಣವಾಗುತ್ತದೆ. ಇದರರ್ಥ ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ.

ಇದನ್ನೂ ಓದಿ: ಮಲಗುವ ಮುನ್ನ ಆಹಾರವನ್ನು ಸೇವಿಸಲು ಉತ್ತಮ ಸಮಯ ಹಾಗು ಅಭ್ಯಾಸಗಳ ಕುರಿತು ತಿಳಿಯಿರಿ

3. ಉಸಿರಾಟದ ತೊಂದರೆ:

ಶ್ವಾಸಕೋಶದಲ್ಲಿ ದ್ರವದ ಸಂಗ್ರಹವು ಕಾರ್ಬನ್ ಡೈಆಕ್ಸೈಡ್-ಸಮೃದ್ಧ ರಕ್ತವನ್ನು ಆಮ್ಲಜನಕಯುಕ್ತ ರಕ್ತವಾಗಿ ಪರಿವರ್ತಿಸಲು ಕಷ್ಟವಾಗುತ್ತದೆ. ಇದು ಉಸಿರಾಟದಂತಹ ಸಮಸ್ಯೆಗೆ ಕಾರಣವಾಗುತ್ತದೆ.

4. ದೈನಂದಿನ ಚಟುವಟಿಕೆಯಲ್ಲಿ ಅಡ್ಡಿ:

ಉಸಿರಾಟದ ತೊಂದರೆ ಮತ್ತು ನಿಶ್ಯಕ್ತಿಯಿಂದಾಗಿ, ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಗಳು ದೈಹಿಕ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ದೈನಂದಿನ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಕಷ್ಟಪಡುತ್ತಾರೆ.

5. ಆಯಾಸ:

ಸಾಕಷ್ಟು ವಿಶ್ರಾಂತಿ ಪಡೆದ ನಂತರವೂ ಕೂಡ ಆಯಾಸವನ್ನು ಹೊಂದಿದ್ದರೆ, ನಿಮ್ಮ ಹೃದಯವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರ್ಥ. ಆದ್ದರಿಂದ ನೀವು ವಿಪರೀತ ಆಯಾಸದಿಂದ ಬಳಲುತ್ತಿದ್ದರೆ, ಎಂದಿಗೂ ನಿರ್ಲಕ್ಷ್ಯಿಸಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ