Third Hand Smoking: ಸಿಗರೇಟ್ ಹೊಗೆಯಿಂದ ದೂರವಿರಿ ಇದು ಚರ್ಮ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು ಎಚ್ಚರ

ನೀವು ಧೂಮಪಾನದ ಚಟವನ್ನು ಹೊಂದಿಲ್ಲದಿದ್ದರೂ ಸಹ, ಸಾರ್ವಜನಿಕ ಸ್ಥಳಗಳಲ್ಲಿ ಈ ಕೆಟ್ಟ ಹೊಗೆಯಿಂದ ದೂರವಿರಿ. ಇದು ಚರ್ಮ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

Third Hand Smoking: ಸಿಗರೇಟ್ ಹೊಗೆಯಿಂದ ದೂರವಿರಿ ಇದು ಚರ್ಮ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು ಎಚ್ಚರ
SmokeImage Credit source: Devdiscourse
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 10, 2022 | 2:37 PM

ಸಾಮಾನ್ಯವಾಗಿ ಧೂಮಪಾನ, ಮಧ್ಯಪಾನ ಮುಂತಾದ ಕೆಟ್ಟ ಚಟಗಳನ್ನು ಹೊಂದಿರುವವರಲ್ಲಿ ಮಾತ್ರ ರೋಗಗಳು ಹರಡುತ್ತವೆ ಎಂದು ನೀವು ತಿಳಿದಿದ್ದರೆ ಅದು ಸುಳ್ಳು. ಯಾಕೆಂದರೆ ಧೂಮಪಾನ ಸೇದುವವರಿಗಿಂತ ಹೆಚ್ಚಾಗಿ ಅವರು ಸೇದಿ ಬಿಟ್ಟ ಹೊಗೆಯನ್ನು ಪಡೆದುಕೊಂಡವರಲ್ಲಿ ಹೆಚ್ಚಾಗಿ ಮಾರಕ ರೋಗಳು ಹುಟ್ಟಿಕೊಳ್ಳುತ್ತದೆ ಎಂದು ಅಧ್ಯಯನದ ಮೂಲಕ ಧೃಡಪಟ್ಟಿದೆ.

ನೀವು ಧೂಮಪಾನದ ಚಟವನ್ನು ಹೊಂದಿಲ್ಲದಿದ್ದರೂ ಸಹ, ಸಾರ್ವಜನಿಕ ಸ್ಥಳಗಳಲ್ಲಿ ಈ ಕೆಟ್ಟ ಹೊಗೆಯಿಂದ ದೂರವಿರಿ. ಇದು ಚರ್ಮ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

ಏನಿದು ಥರ್ಡ್ ಹ್ಯಾಂಡ್ ಸ್ಮೋಕಿಂಗ್?

ಥರ್ಡ್ ಹ್ಯಾಂಡ್ ಸ್ಮೋಕಿಂಗ್ ಎಂದರೆ ವಾಸ್ತವವಾಗಿ ಸಿಗರೇಟ್, ಬೀಡಿ ಮತ್ತು ಸಿಗರೇಟ್​ಗಳ ಹೊಗೆಯ ಅವಶೇಷವಾಗಿದೆ. ಈ ವಿಷಕಾರಿ ಹೊಗೆಯು ಮಾನವನ ಬಟ್ಟೆ, ಕೂದಲು, ಚರ್ಮ ಮತ್ತು ವಸ್ತುಗಳ ಮೇಲೆ ಅಂಟಿಕೊಳ್ಳುತ್ತದೆ. ಸಿಗರೇಟ್ ಹೊಗೆಯಿಂದ ಬಿಡುಗಡೆಯಾಗುವ ಈ ವಿಷಕಾರಿ ವಸ್ತುಗಳು ರಾಸಾಯನಿಕ ಕ್ರಿಯೆಯಿಂದ ಕಾಲಕ್ರಮೇಣ ಹೆಚ್ಚು ಅಪಾಯಕಾರಿಯಾಗುತ್ತವೆ. ಸಿಗರೇಟ್ ಹೊಗೆಯ ಹೊರತಾಗಿ, ಥರ್ಡ್ ಹ್ಯಾಂಡ್ ಹೊಗೆಯು ಕ್ಯಾನ್ಸರ್ ಸೇರಿದಂತೆ ಇತರ ಕಾಯಿಲೆಗಳನ್ನು ಉಂಟು ಮಾಡುವ ಅಪಾಯವನ್ನು ಹೊಂದಿದೆ.

ಯಾವುದೋ ಮೂರನೇ ವ್ಯಕ್ತಿ ಸೇದಿ ಬಿಟ್ಟ ಹೊಗೆಯು ನಿಮ್ಮ ದೇಹದ ಚರ್ಮವನ್ನು ಸ್ಪರ್ಶಿಸಿ ಇದು ಚರ್ಮದ ಕ್ಯಾನ್ಸರ್, ಮುಂತಾದ ಚರ್ಮಕ್ಕೆ ಸಂಬಂಧಪಟ್ಟ ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆ. ಆದ್ದರಿಂದ ಸಾಕಷ್ಟು ಜನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ನಿಮ್ಮನ್ನು ನೀವು ಇಂತಹ ಕಾಯಿಲೆಯಿಂದ ರಕ್ಷಿಸುವುದು ಅಗತ್ಯವಾಗಿದೆ.

ಧೂಮಪಾನದ ಹೊಗೆಗೆ ತೀವ್ರವಾಗಿ ಒಡ್ಡಿಕೊಳ್ಳುವುದರಿಂದ ಕಾಂಟ್ಯಾಕ್ಟ್ ಡರ್ಮಟೈಟಿಸ್ ಮತ್ತು ಸೋರಿಯಾಸಿಸ್‌ನಂತಹ ಚರ್ಮ ರೋಗಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಸಿಗರೇಟ್ ನ ಹೊಗೆಯು ಇದು ಕ್ಯಾನ್ಸರ್, ಹೃದ್ರೋಗ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು” ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಂಶೋಧಕರಾದ ಶೇನ್ ಸಕಾಮಕಿ-ಚಿಂಗ್ ಹೇಳಿದ್ದಾರೆ.

ಇದನ್ನು ಓದಿ: ಹೊಗೆ, ಧೂಳು, ಮಾಲಿನ್ಯಗಳು ನಿಮ್ಮ ಹೃದ್ರೋಗಗಳ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು ಎಚ್ಚರ

ಸಂಶೋಧನೆಯೊಂದರ ಪ್ರಕಾರ 22 ರಿಂದ 45 ವರ್ಷ ವಯಸ್ಸಿನ 10 ಯಾವುದೇ ಧೂಮಪಾನದ ಚಟವನ್ನು ಹೊಂದದೇ ಇರುವವರಿಗೆ ಮೂರು ಗಂಟೆಗಳ ಕಾಲ ಧೂಮಪಾನದ ಹೊಗೆ ತುಂಬಿದ ಬಟ್ಟೆಗಳನ್ನು ಧರಿಸುವಂತೆ ಹೇಳಿ ಮತ್ತೇ ಅವರನ್ನು 15 ನಿಮಿಷಗಳ ಕಾಲ ಬೆವರು ಬರುವಂತೆ ಓಡಾಡಿಸುತ್ತಾರೆ. ಆದ್ದರಿಂದ ಧೂಮಪಾನದ ಹೊಗೆಯು ಕೂಡ ಚರ್ಮ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ:

ಇದರ ಜೊತೆಗೆ ಹಳೆಯ ಕಾರುಗಳನ್ನು ಖರೀದಿಸುವಾಗ ಕೂಡ ಎಚ್ಚರ ವಹಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಯಾಕೆಂದರೆ ನೀವು ಖರೀದಿಸುವ ಕಾರಿನ ಮೊದಲ ಮಾಲೀಕ ಧೂಮಪಾನ ಮಾಡುವ ಚಟವನ್ನು ಹೊಂದಿದ್ದರೆ, ಆದೇ ಕಾರನ್ನು ನೀವು ಖರೀದಿಸಿದಾಗ ಆ ಕಾರಿನೊಳಗಡೆ ಧೂಮಪಾನದ ಹೊಗೆಗಳು ಉಳಿದುಕೊಂಡು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್