ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು

ಕೂದಲು ಉದುರುವಿಕೆ ತಡೆಗಟ್ಟಲು ಪರಿಹಾರ ಮಾರ್ಗಗಳು ಇಲ್ಲಿವೆ

ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 13, 2022 | 7:00 AM

ಕೂದಲು ಉದುರುವಿಕೆ ಪುರುಷ ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯೌವನಾವಸ್ಥೆಯಲ್ಲೇ ಕೂದಲು ಉದುರಿಕೆ ಪ್ರಾರಂಭವಾಗುತ್ತಿದೆ. ಇದಕ್ಕೆ ನಾನಾ ಕಾರಣಗಳನ್ನು ಹೇಳುತ್ತಾರೆ ತಜ್ಞರು. ಅಧಿಕ ಒತ್ತಡ, ಆಹಾರ ಕ್ರಮದಲ್ಲಿ ಏರು-ಪೇರು, ಸರಿಯಾಗಿ ಊಟ ಮಾಡದೆ ಇರುವುದು. ಸುಂದರವಾದ ಕಪ್ಪು ಕೂದಲುಗಳು ಉದರಲು ಪ್ರಾರಂಭಿಸಿದರೆ ಅದರ ಮಾನಸಿಕ ಸಂಕಟ ವರ್ಣನಾತೀತ.

ಎಷ್ಟೇ ಪ್ರಯತ್ನ ಪಟ್ಟರೂ ಸಮಸ್ಯೆಗೆ ಪರಿಹಾರ ಕಾಣದವರು ಹಲವರಿದ್ದಾರೆ ಅದಕ್ಕಾಗಿಯೇ ಹಲವರು ಕೂದಲು ಉದರುವಿಕೆಯನ್ನು ತಡೆಯಲು ನಾನಾ ಮಾರ್ಗಳನ್ನು ಹುಡುಕುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಶ್ಯಾಂಪೂಗಳು, ಎಣ್ಣೆಗಳು ಮತ್ತು ಕ್ರೀಮ್​ಗಳನ್ನು ಬಳಸುವುದರಿಂದ ಸಮಸ್ಯೆಯು ಪರಿಹಾರವಾಗುತ್ತದೆ ಎಂದು ಹೇಳಲು ಅಸಾಧ್ಯ.

ರಾಸಾಯನಿಕಗಳ ಮೊರೆ ಹೋಗದೆ ಮನೆ ಮದ್ದಿನ ಮೂಲಕ ಒಂದಿಷ್ಟು ಸಲಹೆಗಳನ್ನು ಪಾಲಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅಪೌಷ್ಟಿಕತೆ, ಹಾರ್ಮೋನ್ ಅಸಮತೋಲನ, ಥೈರಾಯ್ಡ್, ಒತ್ತಡ ಮತ್ತು ರಾಸಾಯನಿಕ ಕೂದಲಿನ ಉತ್ಪನ್ನಗಳ ಬಳಕೆಯು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಕೂದಲು ಉದುರುವಿಕೆ ತಡೆಗಟ್ಟಲು ಪರಿಹಾರ ಮಾರ್ಗಗಳು

1. ಒಂದು ಪಾತ್ರೆಯಲ್ಲಿ ತುಳಸಿ ಎಲೆ ಮತ್ತು ದಾಸವಾಳದ ಎಲೆಗಳನ್ನು ಹಾಕಿ ನೀರು ಬಣ್ಣ ಬದಲಾಗುವವರೆಗೆ ಕುದಿಸಿ. ಈ ನೀರನ್ನು ಫಿಲ್ಟರ್ ಮಾಡಿ ಮತ್ತು ವಾರಕ್ಕೊಮ್ಮೆ ನಿಮ್ಮ ತಲೆಗೆ ಮಸಾಜ್ ಮಾಡಿಕೊಳ್ಳಿ.

2. ಟೀ ಪುಡಿಯನ್ನು ನೀರಿಗೆ ಸೇರಿಸಿ ಅದಕ್ಕೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ. ಸಾಮಾನ್ಯ ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

3. ಕೂದಲು ಉದುರುವುದನ್ನು ತಡೆಯುವಲ್ಲಿ ಅಲೋವೆರಾ ಅದ್ಭುತವಾಗಿ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ಉಗುರುಬೆಚ್ಚಗಾಗುವ ತನಕ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಿಸಿ ಅದರಲ್ಲಿ ಅಲೋವೆರಾ ಪೇಸ್ಟ್​ನ್ನು ಮಿಶ್ರಣ ಮಾಡಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ತೆಲೆಗೆ ಹಚ್ಚಿಕೊಳ್ಳಿ.

4. ನಿಂಬೆಹಣ್ಣಿನಿಂದ ರಸವನ್ನು ಎರಡು ಲೋಟ ನೀರಿಗೆ ಬೆರೆಸಿ ಬಾಟಲಿಗೆ ಹಾಕಿ. ಇದನ್ನು ನಿಯಮಿತವಾಗಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು.

5. ಈರುಳ್ಳಿಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಈರುಳ್ಳಿಯಲ್ಲಿರುವ ಸಲ್ಫರ್, ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತವೆ.

6. ಎಲ್ಲಾ ಸಮಸ್ಯೆಗಳಿಗೂ ಬೇವು ಉತ್ತಮ ಪರಿಹಾರ ಎಂದು ತಿಳಿದಿದೆ. ಬೇವಿನ ಸೊಪ್ಪನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ತಣ್ಣಗಾಗಿಸಿ ಫಿಲ್ಟರ್ ಮಾಡಿ, ಸ್ನಾನ ಮಾಡವಾಗ ಬೇವಿನ ನೀರನ್ನು, ನೀರಿನೊಂದಿಗೆ ಮಿಶ್ರಣ ಮಾಡಿಕೊಂಡು ತೆಲೆ ಸ್ನಾನ ಮಾಡಿ. ಶಾಂಪೂ ಅನ್ವಯಿಸಬೇಡಿ. ಹಾಗೆ ಚೆನ್ನಾಗಿ ಉಜ್ಜಿಕೊಳ್ಳಿ. ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ ಮತ್ತು ಬಿಸಿ ನೀರಿನಿಂದ ಅಲ್ಲ.

7. ಹಣ್ಣುಗಳು, ಕ್ಯಾರೆಟ್, ಬೀಟ್ ರೂಟ್, ಮಶ್ರೂಮ್, ಬಾಳೆಹಣ್ಣು, ಮೊಟ್ಟೆಗಳಂತಹ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಆಹಾರ ಸೇವಿಸುವುದರಿಂದ ಕೂದಲು ಉದರುವಿಕೆಯನ್ನು ತಡೆಗಟ್ಟಬಹುದು.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ