Health Tips: ಮೇಕೆ ಹಾಲು ಕುಡಿಯುವುದು ದೇಹಕ್ಕೆ ಎಷ್ಟು ಒಳ್ಳೆಯದು?
ಆಯುರ್ವೇದವು ಮೇಕೆ ಹಾಲನ್ನು ಔಷಧೀಯ ನಿಧಿ ಎಂದು ಪರಿಗಣಿಸುತ್ತದೆ. ಇದು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಮೇಕೆ ಹಾಲು ಹೃದಯದ ಆರೋಗ್ಯಕ್ಕೆ ಉತ್ತಮ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ, ಡೆಂಗ್ಯೂ ಚಿಕಿತ್ಸೆಯಲ್ಲಿ ಇದರ ಪರಿಣಾಮಕಾರಿತ್ವಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.
ಆಯುರ್ವೇದದಲ್ಲಿ ಮೇಕೆ ಹಾಲನ್ನು ಔಷಧೀಯ ನಿಧಿ ಎಂದು ಕರೆಯಲಾಗುತ್ತದೆ. ಏಕೆಂದರೆ ಮೇಕೆ ಹಾಲಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಆಡಿನ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನಿತ್ಯ ಹಸುವಿನ ಹಾಲನ್ನು ಜೀರ್ಣಿಸಿಕೊಳ್ಳಲು ತೊಂದರೆಯಾದರೆ ಮೇಕೆ ಹಾಲನ್ನು ಕುಡಿಯಿರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ನಿಮಗೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ಮೇಕೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ಗಳು, ಕ್ಯಾಲೋರಿಗಳು, ಕೊಬ್ಬು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು, ರಂಜಕ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಈ ಹಾಲಿನಲ್ಲಿ ಮೆಗ್ನಿಶಿಯಂನಂತಹ ಪೋಷಕಾಂಶಗಳಿರುವುದರಿಂದ ಹೃದ್ರೋಗಿಗಳಿಗೆ ಮೇಕೆ ಹಾಲು ರಾಮಬಾಣಕ್ಕಿಂತ ಕಡಿಮೆಯಿಲ್ಲ. ನಿಮ್ಮ ಮೆದುಳು ಆರೋಗ್ಯವಾಗಿರಲು ನೀವು ಬಯಸಿದರೆ, ಮೇಕೆ ಹಾಲಿನಲ್ಲಿ ಲಿನೋಲಿಕ್ ಆಮ್ಲವಿದೆ. ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಮೇಕೆ ಹಾಲು ಕುಡಿಯಿರಿ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ.
ಇದನ್ನೂ ಓದಿ: ಗೊರಕೆಯಿಂದ ನಿದ್ರೆ ಬರುತ್ತಿಲ್ಲವೇ? ಈ ಸಿಂಪಲ್ ಸಲಹೆ ಅನುಸರಿಸಿ
ಆರೋಗ್ಯ ತಜ್ಞರ ಪ್ರಕಾರ,ಮೇಕೆ ಹಾಲಿನಲ್ಲಿ ಹತ್ತಕ್ಕೂ ಹೆಚ್ಚು ಪೋಷಕಾಂಶಗಳಿವೆ. ಇದು ವಿಟಮಿನ್ ಬಿ 6, ಬಿ 12, ಸಿ, ಡಿ ಅನ್ನು ಹೊಂದಿರುತ್ತದೆ. ಇವು ದೇಹದಲ್ಲಿ ಫೋಲಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ, ಡೆಂಗ್ಯೂ ಚಿಕಿತ್ಸೆಯಲ್ಲಿ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಮೂಳೆಗಳು ಬಲವಾಗಿರಲು ಮೇಕೆ ಹಾಲನ್ನು ಪ್ರತಿದಿನ ಸೇವಿಸಬೇಕು. ಇದು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಅಧಿಕ ಬಿಪಿಯಲ್ಲಿ ಮೇಕೆ ಹಾಲು ಅಮೃತಕ್ಕಿಂತ ಕಡಿಮೆಯಿಲ್ಲ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೇಕೆ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಸೆಲೆನಿಯಮ್ ಇರುತ್ತದೆ. ಹಾಗಾಗಿ, ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಲು ಮೇಕೆ ಹಾಲನ್ನು ಔಷಧಿಯಾಗಿ ನೋಡುವುದು ಕೇವಲ ಮಿಥ್ಯೆ ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ