Kannada News Health Gold earrings: These are the health benefits of wearing gold earrings
ಚಿನ್ನದ ಕಿವಿಯೋಲೆ ಧರಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನಗಳು
ಹೆಣ್ಣು ಮಕ್ಕಳಿಗೆ ಆಭರಣಗಳ ಮೇಲೆ ವಿಪರೀತ ವ್ಯಾಮೋಹ. ಅದೇಗೋ ಹಣ ಹೊಂದಿಸಿ ಚಿನ್ನವನ್ನು ಖರೀದಿ ಮಾಡ್ತಾರೆ. ಆದರೆ ಆಭರಣಗಳು ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರ ಇದರಿಂದ ಹಲವಾರು ಪ್ರಯೋಜನಗಳು ಇವೆ ಎನ್ನುವುದನ್ನು ನೀವು ನಂಬಲೇಬೇಕು. ನಿಮ್ಮ ಬಳಿ ವಿವಿಧ ವಿನ್ಯಾಸದ ಚಿನ್ನದ ಕಿವಿಯೋಲೆಯಿದ್ದರೆ, ಇದನ್ನು ಧರಿಸುವುದರಿಂದ ಇರುವ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಆಭರಣಗಳು (Gold Jwellery) ಎಂದರೆ ಮೊದಲಿಗೆ ನೆನಪಾಗುವುದೇ ಈ ಹೆಣ್ಣು ಮಕ್ಕಳು. ಚಿನ್ನ ದುಬಾರಿಯಾಗಿದ್ರೂ ಬೇಡಿಕೆಯಂತೂ ಕಡಿಮೆಯಾಗಿಲ್ಲ. ಚಿನ್ನ ಖರೀದಿಸುವತ್ತ ಹೆಚ್ಚು ಆಸಕ್ತಿ ತೋರುವ ಹೆಣ್ಣು ಮಕ್ಕಳು ವಿವಿಧ ವಿನ್ಯಾಸದ ಆಭರಣಗಳ ಕಲೆಕ್ಷನ್ ಹೊಂದಿರುತ್ತಾರೆ. ಇದು ಪ್ರತಿಷ್ಠೆಯ ಸಂಕೇತವು ಆಗಿದೆ. ಆದರೆ ಚಿನ್ನದ ಕಿವಿಯೋಲೆಯನ್ನು ಧರಿಸುವುದರಿಂದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನ (health benefits) ಗಳಿವೆ. ಹೌದು, ಚಿನ್ನದ ಕಿವಿಯೋಲೆ ಇಷ್ಟ ಪಡದವರು ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡ್ರೆ ಕಿವಿಯೋಲೆಯನ್ನು ಧರಿಸದೇ ಇರಲಾರಿರಿ.
ಚಿನ್ನದ ಕಿವಿಯೋಲೆಯ ಆರೋಗ್ಯ ಪ್ರಯೋಜನಗಳು
ಚಿನ್ನದ ಓಲೆಗಳು ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಚಿನ್ನದ ಕಿವಿಯೋಲೆಯೂ ಧರಿಸಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ.
ಚಿನ್ನದ ಕಿವಿಯೋಲೆ ಮನಸ್ಸಿನಲ್ಲಿ ಮೂಡುವ ಋಣಾತ್ಮಕ ಆಲೋಚನೆಗಳನ್ನು ದೂರ ಮಾಡಿ ನಿಮ್ಮನ್ನು ಪಾಸಿಟಿವ್ ಆಗಿರುವಂತೆ ಮಾಡುತ್ತದೆ.
ಚಿನ್ನದ ಕಿವಿಯೋಲೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ನರಮಂಡಲದ ಕೆಲಸವನ್ನು ಉತ್ತೇಜಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೀವು ಚಿನ್ನದ ಕಿವಿಯೋಲೆ ಧರಿಸುತ್ತಿದ್ದರೆ ನಿಮ್ಮ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.