Green Juice Benefits: ಸೆಖೆ ಸೆಖೆ ಎಂದು ಸಿಕ್ಕಿದ್ದೆಲ್ಲಾ ಕುಡೀಬೇಡಿ, ಈ 5 ಬಗೆಯ ಗ್ರೀನ್​ ಜ್ಯೂಸ್​ಗಳನ್ನು ಟ್ರೈ ಮಾಡಿ

ಬೇಸಿಗೆ(Summer)  ಶುರುವಾಗುತ್ತಿದ್ದಂತೆ ಬಾಯಾರಿಕೆಯೂ ಹೆಚ್ಚಾಗುತ್ತದೆ, ಜ್ಯೂಸ್, ಮಜ್ಜಿಗೆ, ಐಸ್​ಕ್ರೀಂ ಹೀಗೆ ಹತ್ತು ಹಲವು ತಂಪು ಪಾನೀಯವನ್ನು ಕುಡಿಯಲು ಮನಸ್ಸು ಹಾತೊರೆಯುತ್ತದೆ.

Green Juice Benefits: ಸೆಖೆ ಸೆಖೆ ಎಂದು ಸಿಕ್ಕಿದ್ದೆಲ್ಲಾ ಕುಡೀಬೇಡಿ, ಈ 5 ಬಗೆಯ ಗ್ರೀನ್​ ಜ್ಯೂಸ್​ಗಳನ್ನು ಟ್ರೈ ಮಾಡಿ
ಜ್ಯೂಸ್
Follow us
ನಯನಾ ರಾಜೀವ್
|

Updated on:Apr 03, 2023 | 1:07 PM

ಬೇಸಿಗೆ(Summer)  ಶುರುವಾಗುತ್ತಿದ್ದಂತೆ ಬಾಯಾರಿಕೆಯೂ ಹೆಚ್ಚಾಗುತ್ತದೆ, ಜ್ಯೂಸ್, ಮಜ್ಜಿಗೆ, ಐಸ್​ಕ್ರೀಂ ಹೀಗೆ ಹತ್ತು ಹಲವು ತಂಪು ಪಾನೀಯವನ್ನು ಕುಡಿಯಲು ಮನಸ್ಸು ಹಾತೊರೆಯುತ್ತದೆ. ಆದರೆ ಬೇಸಿಗೆಯಲ್ಲೂ ಚಳಿಗಾಲ, ಮಳೆಗಾಲದಂತೆ ನಿಮ್ಮ ಆಹಾರ ಪದ್ಧತಿಯಿಂದಲೇ ಬರುವ ಕಾಯಿಲೆಗಳೂ ಇರುತ್ತವೆ. ಹೀಗಾಗಿ ಬೇಸಿಗೆಯಲ್ಲಿ ಕೇವಲ ನಿಮ್ಮ ಗಂಟಲನ್ನು ತಂಪಾಗಿಡುವುದು ಮಾತ್ರವಲ್ಲ ನಿಮ್ಮ ಇಡೀ ದೇಹವನ್ನು ಕೂಡ ತಂಪಾಗಿಡುವ ಅವಶ್ಯಕತೆ ಇದೆ.

ಈ 5 ಬಗೆಯ ಗ್ರೀನ್ ಜ್ಯೂಸ್​ಗಳನ್ನು ಒಮ್ಮೆ ಟ್ರೈ ಮಾಡಿ

ಮತ್ತಷ್ಟು ಓದಿ: Mens Beauty Tips: ಸುಡು ಬಿಸಿಲಿನಲ್ಲಿ ಪುರುಷರು ತಮ್ಮ ಅಂದವನ್ನು ಕಾಪಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಅಲೋವೆರಾ ರಸ ಅಲೋವೆರಾ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವ ಮೂಲಕ ನೀವು ಅನೇಕ ಪ್ರಮುಖ ರೋಗಗಳನ್ನು ತಪ್ಪಿಸಬಹುದು. ಇದರಲ್ಲಿ ವಿಟಮಿನ್-ಎ, ವಿಟಮಿನ್-ಸಿ, ಸೋಡಿಯಂ, ಐರನ್, ಕ್ಯಾಲ್ಸಿಯಂ ಮುಂತಾದ ಅಂಶಗಳು ಹೇರಳವಾಗಿವೆ. ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ, ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ದಿನವಿಡೀ ತಾಜಾತನವನ್ನು ಅನುಭವಿಸಬಹುದು.

ಕಬ್ಬಿನ ಹಾಲು ಕಬ್ಬಿನ ರಸವನ್ನು ಬೇಸಿಗೆಯ ಸೂಪರ್ ಎನರ್ಜಿ ಡ್ರಿಂಕ್ ಎಂದು ಪರಿಗಣಿಸಲಾಗಿದೆ. ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ ಮತ್ತು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಈ ಹಸಿರು ರಸವು ನಿರ್ಜಲೀಕರಣದಿಂದ ನಿಮ್ಮನ್ನು ರಕ್ಷಿಸುತ್ತದೆ, ಇದರ ಹೊರತಾಗಿ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸೋರೆಕಾಯಿ ರಸ ಸೋರೆಕಾಯಿ ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ. ಇದರ ರಸವೂ ಅಷ್ಟೇ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್-ಸಿ, ಫಾಸ್ಫರಸ್, ಕಬ್ಬಿಣದಂತಹ ಅಂಶಗಳಿವೆ. ನಿಮ್ಮ ದೈನಂದಿನ ಆಹಾರದಲ್ಲಿ ಬಾಟಲ್ ಸೋರೆಕಾಯಿ ರಸವನ್ನು ಸೇರಿಸಿಕೊಳ್ಳಬಹುದು. ಇದನ್ನು ಕುಡಿಯುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಹಾಗಲಕಾಯಿ ರಸ ಹಾಗಲಕಾಯಿಯ ರುಚಿ ಹೆಚ್ಚು ಕಹಿಯಾದಷ್ಟೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಲಕಾಯಿ ರಸವು ಮಧುಮೇಹ ರೋಗಿಗಳಿಗೆ ರಾಮಬಾಣವಾಗಿದೆ. ಇದನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಪಾಲಕ್ ರಸ ಬೇಸಿಗೆಯಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆಹಾರದಲ್ಲಿ ಪಾಲಕ ರಸವನ್ನು ಸಹ ಸೇರಿಸಬಹುದು. ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ರಕ್ತಹೀನತೆಯನ್ನೂ ಹೋಗಲಾಡಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Mon, 3 April 23

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ