ವಿಟಮಿನ್ ಡಿ ಕೊರತೆ ಕೂದಲು ಉದುರುವಿಕೆ ಕಾರಣವಾಗಬಹುದು; ಸಂಶೋಧನೆ

ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವವರಲ್ಲಿ ಕೂದಲು ಉದುರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವು ಬಹಿರಂಗಪಡಿಸಿದೆ.

ವಿಟಮಿನ್ ಡಿ ಕೊರತೆ ಕೂದಲು ಉದುರುವಿಕೆ ಕಾರಣವಾಗಬಹುದು; ಸಂಶೋಧನೆ
Hair Loss
Follow us
ಅಕ್ಷತಾ ವರ್ಕಾಡಿ
|

Updated on: Jul 08, 2023 | 6:37 AM

ಮೂಳೆ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಬೆಳವಣಿಗೆಗೆ ವಿಟಮಿನ್ ಡಿ ಅತ್ಯಂತ ಪ್ರಮುಖವಾದ ಅಂಶವಾಗಿದೆ. ಕೂದಲು ಬೆಳವಣಿಗೆಗೆ ವಿಟಮಿನ್ ಡಿ ಸಹ ಮುಖ್ಯವಾಗಿದೆ ಎಂದು ನಿಮಗೆ ತಿಳಿದಿದೆಯೇ ? ಕೂದಲು ಬೆಳವಣಿಗೆಯನ್ನು ಉತ್ತೇಜಿಸುವ ಕೂದಲಿನ ಕಿರುಚೀಲಗಳಲ್ಲಿನ ವಿವಿಧ ಮಾರ್ಗಗಳಲ್ಲಿ ತೊಡಗಿರುವ ಕಾರಣ ವಿಟಮಿನ್ ಡಿ ನಿಮಗೆ ಹೆಚ್ಚುವರಿ ಆರೋಗ್ಯಕರ ಎಳೆಗಳನ್ನು ನೀಡಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ವಿಟಮಿನ್ ಡಿ ಮತ್ತು ಕೂದಲು ಉದುರುವಿಕೆಯ ನಡುವಿನ ಸಂಪರ್ಕವು ಎಷ್ಟು ಪ್ರಮುಖವಾಗಿದೆ ಎಂದರೆ ನೀವು ಕೂದಲು ಉದುರುವಿಕೆಯನ್ನು ಅನುಭವಿಸಿದರೆ ವೈದ್ಯರು ಮತ್ತು ತಜ್ಞರು ನಿಮ್ಮ ವಿಟಮಿನ್ ಡಿ ಮಟ್ಟವನ್ನು ಪರೀಕ್ಷಿಸಲು ಶಿಫಾರಸು ಮಾಡುತ್ತಾರೆ.

2021 ರ ಅಧ್ಯಯನದ ಪ್ರಕಾರ, ಟೆಲೋಜೆನ್ ಎಫ್ಲುವಿಯಮ್, ಆಂಡ್ರೊಜೆನೆಟಿಕ್ ಅಲೋಪೆಸಿಯಾ, ಅಲೋಪೆಸಿಯಾ ಅರೆಟಾ ಮತ್ತು ಟ್ರೈಕೊಟಿಲೊಮೇನಿಯಾದಂತಹ ಪರಿಸ್ಥಿತಿ ಹೊಂದಿರುವ ಜನರು ಸಾಕಷ್ಟು ವಿಟಮಿನ್ ಡಿ ಮಟ್ಟವನ್ನು ಹೊಂದಿರುವುದಿಲ್ಲ. ವಿಟಮಿನ್ ಡಿ ಕೊರತೆಯಿರುವ ಮಹಿಳೆಯರು ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಹೊಂದಿರುವ ಮಹಿಳೆಯರಿಗಿಂತ ಕೂದಲು ಉದುರುವ ಸಾಧ್ಯತೆ ಹೆಚ್ಚು ಎಂದು ಮತ್ತೊಂದು ಅಧ್ಯಯನವು ಬಹಿರಂಗಪಡಿಸಿದೆ.

ಇದನ್ನೂ ಓದಿ: ಚಾಕಲೇಟ್ ತಿನ್ನುವುದರಿಂದ ದೇಹದ ತೂಕ ಹೆಚ್ಚುತ್ತದೆಯೇ? ಚಾಕೊಲೇಟ್ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ತಿಳಿಯಿರಿ

ನಿಮಗೆ ವಿಟಮಿನ್ ಡಿ ಕೊರತೆ ಇದೆಯೇ ಎಂದು ತಿಳಿಯುವುದು ಹೇಗೆ?

ವಿಟಮಿನ್ ಡಿ ಕೊರತೆಯ ಕೆಲವು ಲಕ್ಷಣಗಳು:

  • ಆಯಾಸ
  • ಕೂದಲು ಉದುರುವಿಕೆ
  • ಸ್ನಾಯು ದೌರ್ಬಲ್ಯ
  • ಕೀಲು ನೋವು
  • ಖಿನ್ನತೆ
  • ಗಾಯ ಬೇಗ ವಾಸಿಯಾಗದಿರುವುದು
  • ಮೂಳೆ ನಷ್ಟ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: