Alzheimer’s: ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸಿದ್ರೆ ಅಲ್ಝೈಮರ್ ಕಾಯಿಲೆ ಖಂಡಿತ; ಸಂಶೋಧನೆ

ಕಳಪೆ ಹಲ್ಲಿನ ಆರೋಗ್ಯವು ಅರಿವಿನ ಸಾಮರ್ಥ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Alzheimer’s: ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸಿದ್ರೆ ಅಲ್ಝೈಮರ್ ಕಾಯಿಲೆ ಖಂಡಿತ; ಸಂಶೋಧನೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 08, 2023 | 12:39 PM

ಬಾಯಿಯ ಆರೋಗ್ಯವು ದೇಹದ ಇತರ ಭಾಗದಂತೆ ಅತೀ ಮುಖ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ಅಧ್ಯಯನವೊಂದು ಪುರಾವೆಯಾಗಿದೆ. ನ್ಯೂರಾಲಜಿ ಜನರಲ್ ನಲ್ಲಿ ಪ್ರಕಟವಾದ ಒಂದು ಸಂಶೋಧನೆಯು ಕಳಪೆ ಹಲ್ಲಿನ ಆರೋಗ್ಯವು ಅರಿವಿನ ಸಾಮರ್ಥ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಬಾಯಿಯ ಕಳಪೆ ಆರೋಗ್ಯವು ಮೆದುಳಿನ ಗಾತ್ರವನ್ನು ಕುಗ್ಗಿಸಲು ಕಾರಣವಾಗಬಹುದು ಮತ್ತು ಅಲ್ಝೈಮರ್ ಕಾಯಿಲೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದ ಸಂಶೋಧನೆಗಳು ತಿಳಿಸಿವೆ. ಒಸಡಿನ ಕಾಯಿಲೆ ಮತ್ತು ಹಲ್ಲಿನ ನಷ್ಟ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಒಸಡಿನ ರೋಗವು ಹಲ್ಲುಗಳ ಸುತ್ತಲಿನ ಅಂಗಾಂಶದ ಉರಿಯೂತಕ್ಕೆ ಮತ್ತು ಹಲ್ಲುಗಳು ಸಡಿಲಗೊಳ್ಳಲು ಕಾರಣವಾಗಬಹುದು ಎಂದು ಅಧ್ಯಯನ ನಡೆಸಿದ ಲೇಖಕರು ವಿವರಿಸಿದ್ದಾರೆ. ಈ ಉರಿಯೂತವು ಬುದ್ಧಿಮಾಂದ್ಯತೆಯ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಭಾವ್ಯ ಸಂಬಂಧವನ್ನು ಹೊಂದಿದೆ ಎಂದು ಸಂಶೋಧನೆಗಳು ತಿಳಿಸಿವೆ.

ಇದನ್ನೂ ಓದಿ: ಅಮೆರಿಕದಲ್ಲಿ 65ರ ಆಸುಪಾಸಿನ 6 ಮಿಲಿಯನ್ ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ 

ಈ ಅಧ್ಯಯನವು ಆರಂಭದಲ್ಲಿ ಯಾವುದೇ ಮೆಮೊರಿ ಸಮಸ್ಯೆಗಳಿಲ್ಲದ ಸರಾಸರಿ 67 ವರ್ಷ ವಯಸ್ಸಿನ 172 ಜನರನ್ನು ಪರೀಕ್ಷಿಸಿತ್ತು. ಬಳಿಕ ತಂಡವು ಇವರಲ್ಲಿ ಕೆಲವು ಮೆಮೊರಿ ಪರೀಕ್ಷೆಗಳನ್ನು ನಡೆಸಿತ್ತು ಮತ್ತು ಹಿಪ್ಪೊಕ್ಯಾಂಪಸ್​​ನ ಪರಿಮಾಣವನ್ನು ಅಳೆಯಲು ಅವರ ಮೆದುಳನ್ನು ಸ್ಕ್ಯಾನ್ ಮಾಡಿತು. ಬಳಿಕ ಅಷ್ಟೇ ಜನರನ್ನು ನಾಲ್ಕು ವರ್ಷಗಳ ನಂತರ ಮೊದಲು ಮಾಡಿದ ಪರೀಕ್ಷೆಗಳನ್ನು ಮತ್ತೆ ಸಂಶೋಧನೆ ಮಾಡಲಾಗಿದೆ. ಒಸಡಿನ ಕಾಯಿಲೆಗಳ ಪ್ರಮಾಣ ಮತ್ತು ಮೆದುಳಿನ ಹಿಪೊಕ್ಯಾಂಪಸ್ನಲ್ಲಿನ ಬದಲಾವಣೆಗಳ ನಡುವಿನ ಸಂಬಂಧವನ್ನು ಅಧ್ಯಯನದಲ್ಲಿ ಗಮನಿಸಲಾಯಿತು. ಕಡಿಮೆ ಹಲ್ಲುಗಳಲ್ಲಿ ಹುಳುಕು ಮತ್ತು ಸೌಮ್ಯ ಒಸಡಿನ ರೋಗವನ್ನು ಹೊಂದಿರುವವರಲ್ಲಿ ಮೆದುಳಿನ ಕುಗ್ಗುವಿಕೆಯ ನಿಧಾನಗತಿಯಲ್ಲಿ ಕಂಡುಬಂದಿದೆ. ಆದರೆ ಹೆಚ್ಚಿನ ಹಲ್ಲುಗಳಲ್ಲಿ ಕುಳಿ ಇದ್ದು ತೀವ್ರವಾದ ಒಸಡು ಕಾಯಿಲೆ ಹೊಂದಿರುವ ಜನರಲ್ಲಿ ಮೆದುಳಿನ ಕುಗ್ಗುವಿಕೆಯ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.

ಈ ಅಧ್ಯಯನದ ಫಲಿತಾಂಶಗಳು ಹೇಳುವುದೆಂದರೆ ಹಲ್ಲುಗಳನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದೆ. ಹಾಗಾಗಿ ನಿಯಮಿತವಾಗಿ ವೈದ್ಯರ ಬಳಿ ಭೇಟಿ ನೀಡಿ ಹಲ್ಲು ಮತ್ತು ಒಸಡಿನ ರೋಗದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನವೆಂದರೆ ಮಂತ್ರಿಯ ಹುದ್ದೆಯಲ್ಲ: ವಿಜಯೇಂದ್ರ
ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನವೆಂದರೆ ಮಂತ್ರಿಯ ಹುದ್ದೆಯಲ್ಲ: ವಿಜಯೇಂದ್ರ
ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್
ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್
ಟಾಯ್ಲೆಟ್ ಕಮೋಡ್ ಒಳಗಿಂದ ಹೊರಬಂದ ಉಡದ ಮರಿ!
ಟಾಯ್ಲೆಟ್ ಕಮೋಡ್ ಒಳಗಿಂದ ಹೊರಬಂದ ಉಡದ ಮರಿ!
‘ಪುಷ್ಪ 2’ ನೋಡಲು ಫ್ಯಾಮಿಲಿ ಸಮೇತ ಬಂದ ಅಲ್ಲು ಅರ್ಜುನ್ ಅಭಿಮಾನಿಗಳು
‘ಪುಷ್ಪ 2’ ನೋಡಲು ಫ್ಯಾಮಿಲಿ ಸಮೇತ ಬಂದ ಅಲ್ಲು ಅರ್ಜುನ್ ಅಭಿಮಾನಿಗಳು