Heart Health: ಆರೋಗ್ಯಕರ ಹೃದಯಕ್ಕಾಗಿ ತಜ್ಞರು ನೀಡಿರುವ ಸಲಹೆ ಇಲ್ಲಿವೆ
ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಯುವಜನತೆಯಲ್ಲಿಯೇ ಹೃದಯಾಘಾತ, ಹೃದಯದ ಕಾಯಿಲೆಗಳು ಕಂಡುಬರುತ್ತಿವೆ. ಆದ್ದರಿಂದ ಹೃದಯದ ಆರೋಗ್ಯದ ಜೊತೆಗೆ ಒಟ್ಟಾರೆ ಯೋಗಕ್ಷೇಮಕ್ಕಾಗಿ ನೀವು ಏನು ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಯುವಜನತೆಯಲ್ಲಿಯೇ ಹೃದಯಾಘಾತ, ಹೃದಯದ ಕಾಯಿಲೆಗಳು ಕಂಡುಬರುತ್ತಿವೆ. ಆದ್ದರಿಂದ ಹೃದಯದ ಆರೋಗ್ಯದ ಜೊತೆಗೆ ಒಟ್ಟಾರೆ ಯೋಗಕ್ಷೇಮಕ್ಕಾಗಿ ನೀವು ಏನು ಮಾಡಬೇಕು ಎಂದು ತಜ್ಞರು ಸೂಚಿಸುತ್ತಾರೆ. ಜೀವನಶೈಲಿ ಆಯ್ಕೆಗಳು ಮತ್ತು ಸರಿಯಾದ ಆಹಾರ ಕ್ರಮಗಳ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡಬಹುದು. ಆದಾಗ್ಯೂ, ಆರೋಗ್ಯಕರ ಹೃದಯಕ್ಕಾಗಿ, ಕರಿದ ಆಹಾರಗಳು, ಹೆಚ್ಚಿನ ಕ್ಯಾಲೋರಿ ಸಿಹಿಯಾದ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಯಾವ ರೀತಿಯ ಉಪ್ಪನ್ನು ಬಳಸಬೇಕು ಎಂಬ ಚರ್ಚೆ ಸಂಬಂಧಿಸಿದಂತೆ ಇತ್ತೀಚಿನ ಅಧ್ಯಯನಗಳು ಸಮುದ್ರದ ಉಪ್ಪಿನ ಮಧ್ಯಮ ಸೇವನೆಯು ಹೃದಯರಕ್ತನಾಳದ ಯೋಗಕ್ಷೇಮಕ್ಕೆ ಪ್ರಯೋಜನಕಾರಿಯಾದ ಅಗತ್ಯ ಖನಿಜಗಳನ್ನು ನೀಡಬಹುದು ಎಂದು ಸೂಚಿಸುತ್ತವೆ.
ತೈಲಗಳ ವಿಷಯಕ್ಕೆ ಬಂದಾಗ, ಅನೇಕರು ಸಂಸ್ಕರಿಸಿದ ತೈಲಗಳಿಗೆ ಬದಲಾಯಿಸುವ ಪ್ರಯೋಜನಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಸಂಶೋಧನೆಯ ಪ್ರಕಾರ ತುಪ್ಪ ಅಥವಾ ಬೆಣ್ಣೆಯನ್ನು ಬಳಸುವ ಹಳೆಯ ಸಂಪ್ರದಾಯವು ಹಾನಿಕಾರಕವಲ್ಲ ಎಂದು ಸೂಚಿಸುತ್ತದೆ. ಆರೋಗ್ಯಕರ ಪ್ರೋಟೀನ್‌ಗಳು ಮತ್ತು ಕೊಬ್ಬುಗಳಾದ ರಾಗಿ, ಓಟ್ಸ್, ಬ್ರೌನ್ ರೈಸ್, ಮೊಟ್ಟೆ, ಕೋಳಿ ಮಾಂಸ ಮತ್ತು ಮೀನು ಸೇವಿಸುವುದು ಉತ್ತಮ. ಜೊತೆಗೆ ಧಾನ್ಯಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಿಂಪಲ್ ಮನೆಮದ್ದು.. ಒಂದು ವಾರದಲ್ಲಿ ಗ್ಯಾರಂಟಿ ಫಲಿತಾಂಶ!
ನಡಿಗೆ, ಈಜು ಅಥವಾ ಸೈಕ್ಲಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಫಿಟ್ನೆಸ್ಗೆ ಸಹಾಯಕವಾಗಿದೆ. ಇದಲ್ಲದೆ, ಜನರು ತುಂಬಾ ಭಾರವಾದ ಮತ್ತು ಶ್ರಮದಾಯಕ ವ್ಯಾಯಾಮವನ್ನು ತಪ್ಪಿಸಬೇಕು,ವಿಶೇಷವಾಗಿ ಹೃದಯ ಸಮಸ್ಯೆಯಿಂದ ಬಳಲುತ್ತಿರುವವರು. ಪ್ರತಿದಿನ ಸುಮಾರು 30-45 ನಿಮಿಷಗಳ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಲು ತಜ್ಞರು ಶಿಫಾರಸು ಮಾಡುತ್ತಾರೆ. ಜೊತೆಗೆ ಧ್ಯಾನ ಅಥವಾ ಯೋಗ ಮಾಡುವುದನ್ನು ಸಹ ಉತ್ತಮ. ಏಕೆಂದರೆ ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒತ್ತಡವು ಹೃದಯ ಕಾಯಿಲೆಗೆ ಪ್ರಮುಖ ಕಾರಣವಾಗುವ ಅಂಶ.
ಆರೋಗ್ಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: