ಶ್ವಾಸಕೋಶ ಕ್ಯಾನ್ಸರ್‌ಗೆ ರಾಮಬಾಣವಾಗಲಿದೆಯೇ ಹಕ್ಕರಕಿ ಸೊಪ್ಪು?: ದಾವಣಗೆರೆ ವಿಶ್ವವಿದ್ಯಾಲಯದ ಹೊಸ ಸಂಶೋಧನೆ

ಶ್ವಾಸಕೋಶ ಕ್ಯಾನ್ಸರ್‌ಗೆ ರಾಮಬಾಣವಾಗಲಿದೆಯೇ ಹಕ್ಕರಕಿ ಸೊಪ್ಪು?: ದಾವಣಗೆರೆ ವಿಶ್ವವಿದ್ಯಾಲಯದ ಹೊಸ ಸಂಶೋಧನೆ ದಾವಣಗೆರೆ ವಿಶ್ವವಿದ್ಯಾಲಯದ ಸಂಶೋಧನೆಯು 'ಹಕ್ಕರಕಿ ಸೊಪ್ಪು' ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿರಬಹುದು ಎಂದು ತಿಳಿಸಿದೆ. ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಸಸ್ಯದ ಜೈವಿಕ ಸಕ್ರಿಯ ಸಂಯುಕ್ತಗಳ ಅಧ್ಯಯನ ಪ್ರಥಮ ಹಂತದಲ್ಲಿ ಆಶಾದಾಯಕ ಫಲಿತಾಂಶ ನೀಡಿದೆ. ಇದು ವೈದ್ಯಕೀಯ ಲೋಕಕ್ಕೆ ಹೊಸ ಆಶಾಕಿರಣ ಮೂಡಿಸಿದ್ದು, ಮುಂದಿನ ಪರೀಕ್ಷೆಗಳು ಯಶಸ್ವಿಯಾದರೆ ಕ್ಯಾನ್ಸರ್ ರೋಗಿಗಳಿಗೆ ಸಂಜೀವಿನಿಯಾಗಲಿದೆ.

ಶ್ವಾಸಕೋಶ ಕ್ಯಾನ್ಸರ್‌ಗೆ ರಾಮಬಾಣವಾಗಲಿದೆಯೇ ಹಕ್ಕರಕಿ ಸೊಪ್ಪು?: ದಾವಣಗೆರೆ ವಿಶ್ವವಿದ್ಯಾಲಯದ ಹೊಸ ಸಂಶೋಧನೆ
ಶ್ವಾಸಕೋಶದ ಕ್ಯಾನ್ಸರ್ ಔಷಧ
Image Credit source: Tv9 kannada
Edited By:

Updated on: Oct 14, 2026 | 4:27 PM

ದಾವಣಗೆರೆ, ಅ.14: ಸಾಮಾನ್ಯವಾಗಿ ಹೊಲ-ಗದ್ದೆಗಳ ಬದುಗಳಲ್ಲಿ ಹಾಗೂ ಜೋಳದ ಹೊಲಗಳಲ್ಲಿ ಕಳೆಯಂತೆ ಬೆಳೆಯುವ ‘ಹಕ್ಕರಕಿ ಸೊಪ್ಪು’ (ಹತ್ತರಕಿ ಪಲ್ಲೆ) ಈಗ ವೈಜ್ಞಾನಿಕ ಲೋಕದ ಗಮನ ಸೆಳೆದಿದೆ. ಗ್ರಾಮೀಣ ಭಾಗದಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಊಟದ ಜೊತೆಗೆ ಹಸಿ ಎಲೆಗಳ ರೂಪದಲ್ಲಿ ಸೇವಿಸುವ ಈ ಸಸ್ಯದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅನ್ನು ಗುಣಪಡಿಸುವ ಔಷಧೀಯ ಗುಣವಿರಬಹುದು ಎಂಬ ಮಹತ್ವದ ಸುಳಿವು ದೊರೆತಿದೆ. ದಾವಣಗೆರೆ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಕಳೆದ ಐದು ವರ್ಷಗಳಿಂದ ನಡೆದಿರುವ ಸಂಶೋಧನೆಯು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಕೊಟ್ರೇಶ್ ಹಾಗೂ ಸಂಶೋಧನಾ ವಿದ್ಯಾರ್ಥಿನಿ ಡಾ. ದೀಪಾ ಕೆ.ಎನ್. ಅವರು ಈ ಸಸ್ಯದ ಮೇಲಿನ ಔಷಧೀಯ ಗುಣಗಳ ಕುರಿತು ಜಗತ್ತಿಗೆ ಹೊಸ ಮಾಹಿತಿ ನೀಡಿದ್ದಾರೆ. ಹಕ್ಕರಕಿ ಸೊಪ್ಪಿನಿಂದ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಪ್ರತ್ಯೇಕಿಸಿ, ಅವುಗಳ ಕ್ಯಾನ್ಸರ್ ಕೋಶಗಳ ಮೇಲಿನ ಪರಿಣಾಮವನ್ನು ಅಧ್ಯಯನ ಮಾಡಲಾಗುತ್ತಿದೆ. ಪ್ರಾಥಮಿಕ ಹಂತದ ಪ್ರಯೋಗಗಳಲ್ಲಿ ಅತ್ಯಂತ ಆಶಾದಾಯಕ ಫಲಿತಾಂಶಗಳು ಕಂಡುಬಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

Hakkaraki Soppu (1)

ಈ ಮಹತ್ವದ ಸಂಶೋಧನೆಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸಂಸ್ಥೆಯು (KSTePS) 20 ಲಕ್ಷ ರೂಪಾಯಿ ಅನುದಾನ ನೀಡಿ ಬೆಂಬಲಿಸಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಭೆ ಫಲಪ್ರದ: ಮುಷ್ಕರ ವಾಪಸ್​​ ಪಡೆದ 108 ಆ್ಯಂಬುಲೆನ್ಸ್ ನೌಕರರ ಸಂಘ

Hakkaraki Soppu (2)

 

ವೈಜ್ಞಾನಿಕ ದೃಢೀಕರಣದ ಅಗತ್ಯ ಹಾಗೂ ಮುಂದಿನ ಹಂತದ ಪರೀಕ್ಷೆಗಳು:

ಪ್ರಾಥಮಿಕ ಹಂತದ ಫಲಿತಾಂಶಗಳ ಬಳಿಕ, ಪ್ರಾಣಿಗಳ ಮೇಲಿನ ಪ್ರಯೋಗಗಳು ಸೇರಿದಂತೆ ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲು ಸಂಶೋಧನಾ ತಂಡ ಮುಂದಾಗಿದೆ. ಇದಕ್ಕೆ ಪೂರಕವಾಗಿ ಕ್ಯಾನ್ಸರ್ ತಜ್ಞರು ಸಹ ಕೈಜೋಡಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಇ. ರಂಗಸ್ವಾಮಿ ಅವರು, “ಹಕ್ಕರಕಿ ಸೊಪ್ಪು ಕ್ಯಾನ್ಸರ್‌ಗೆ ಖಚಿತ ಔಷಧ ಎಂದು ಪರಿಗಣಿಸಲು ಇನ್ನೂ ಹೆಚ್ಚಿನ ವೈಜ್ಞಾನಿಕ ದೃಢೀಕರಣ ಅಗತ್ಯವಿದೆ. ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಸಾಬೀತಾಗುವವರೆಗೆ ಇದನ್ನು ಪರ್ಯಾಯ ಚಿಕಿತ್ಸೆಯಾಗಿ ಬಳಸಲಾಗದು” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಈ ಸಂಶೋಧನೆ ಮುಂಬರುವ ದಿನಗಳಲ್ಲಿ ಯಶಸ್ವಿಯಾದರೆ ವೈದ್ಯಕೀಯ ಜಗತ್ತಿಗೆ ಹೊಸ ಸಾಧ್ಯತೆಗಳನ್ನು ತೆರೆಯಲಿದ್ದು, ಕ್ಯಾನ್ಸರ್ ರೋಗಿಗಳಿಗೆ ಇದೊಂದು ಸಂಜೀವಿನಿಯಾಗಲಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Disclaimer: ಈ ಸುದ್ದಿಯು ವಿಶ್ವಾಸಾರ್ಹ ಸಾರ್ವಜನಿಕ ಮೂಲಗಳು ಹಾಗೂ ಮೂರನೇ ವ್ಯಕ್ತಿಗಳ ಮಾಹಿತಿಯನ್ನು ಆಧರಿಸಿದೆ. ಇದು ಸಂಪೂರ್ಣವಾಗಿ ಆರೋಗ್ಯ ಮಾಹಿತಿಯನ್ನು ಹಂಚುವ ಉದ್ದೇಶವನ್ನು ಮಾತ್ರ ಹೊಂದಿದ್ದು, ಸಂಬಂಧಪಟ್ಟವರಿಂದ ಅಧಿಕೃತಗೊಂಡಿರುವುದಿಲ್ಲ. ಯಾವುದೇ ವ್ಯಕ್ತಿಯ ತೇಜೋವಧೆ ಮಾಡುವುದು ಅಥವಾ ತಪ್ಪು ಮಾಹಿತಿ ನೀಡುವುದು ನಮ್ಮ ಉದ್ದೇಶವಲ್ಲ. ಓದುಗರು ಮಾಹಿತಿಯ ಸತ್ಯಾಸತ್ಯತೆಯನ್ನು ಸ್ವತಃ ಖಾತರಿಪಡಿಸಿಕೊಳ್ಳಲು ಕೋರಲಾಗಿದೆ. ಅಧಿಕೃತ ತಜ್ಞ ವೈದ್ಯರ ಜೊತೆ ಸಮಾಲೋಚನೆಯ ನಡೆಸದೇ ಔಷಧ ಸೇವನೆ ಆರೋಗ್ಯಕ್ಕೆ ಹಾನಿಕರ ಮತ್ತು ಜೀವಕ್ಕೆ ಅಪಾಯಕಾರಿ. ಅಧಿಕೃತ ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸದೇ ಈ ರೀತಿಯ ಔಷಧಗಳನ್ನು ಸೇವನೆ ಮಾಡಬೇಡಿ . ’ಟಿವಿ9 ಕನ್ನಡ’ ಇವುಗಳನ್ನು ಬೆಂಬಲಿಸುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ.

Published On - 4:00 pm, Wed, 14 October 26

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us