AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡ ಹೆಚ್ಚಾದಷ್ಟೂ ಕೂದಲು ಉದುರುವುದೇಕೆ? ಇಲಿಗಳ ಮೇಲೆ ನಡೆಸಿದ ಅಧ್ಯಯನ ಬಿಟ್ಟುಕೊಟ್ಟ ಗುಟ್ಟು

ಮಾನಸಿಕ ಒತ್ತಡ ಹೆಚ್ಚಾದಾಗ ಸ್ರವಿಸುವ ಹಾರ್ಮೋನ್​ಗಳನ್ನು ನೀಡಿದಾಗ ಇಲಿಗಳಲ್ಲಿ ಕೂದಲು ಬೆಳವಣಿಗೆ ನಿಂತು ಹೋಯಿತು. ಟೆನ್ಷನ್ ಮಾಡ್ಕೊಂಡ್ರೆ ಕೂದಲು ಉದುರುತ್ತೆ ಎನ್ನುವ ಮಾತಿಗೂ, ಈ ಬೆಳವಣಿಗೆಗೂ ಸಂಬಂಧವಿದೆಯೇ?

ಒತ್ತಡ ಹೆಚ್ಚಾದಷ್ಟೂ ಕೂದಲು ಉದುರುವುದೇಕೆ? ಇಲಿಗಳ ಮೇಲೆ ನಡೆಸಿದ ಅಧ್ಯಯನ ಬಿಟ್ಟುಕೊಟ್ಟ ಗುಟ್ಟು
ಕೂದಲು ಉದುರಲು ಕಾರಣವೇನು?
Skanda
| Edited By: |

Updated on: Apr 02, 2021 | 2:20 PM

Share

ಮಾನಸಿಕ ಒತ್ತಡಕ್ಕೂ ಕೂದಲು ಉದುರುವುದಕ್ಕೂ ಅದು ಎಂಥದ್ದೋ ಸಂಬಂಧವಿದೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅದರ ಹಿಂದಿರುವ ಕಾರಣಗಳೇನು ಎನ್ನುವುದು ಅಷ್ಟಾಗಿ ತಿಳಿದಿರದಿದ್ದರೂ ಜಾಸ್ತಿ ಟೆನ್ಷನ್​ ಮಾಡ್ಕಂಡ್ರೆ ಕೂದಲು ಉದುರುತ್ತಂತೆ ಎಂದು ಮಾತಿನ ಮಧ್ಯೆ ಸರಾಗವಾಗಿ ಹೇಳುತ್ತಾರೆ. ಹಾಗಾದರೆ, ಕೂದಲು ಉದುರುವುದಕ್ಕೂ ಮಾನಸಿಕ ಒತ್ತಡಕ್ಕೂ ಅಸಲಿ ಸಂಬಂಧವೇನು? ಎಲ್ಲಿಂದೆಲ್ಲಿಯ ಸಂಬಂಧವಿದು ಎಂದು ತಿಳಿದುಕೊಳ್ಳಲು ಹಾರ್ವಡ್​ನ ಕೆಲ ಅಧ್ಯಯನಕಾರರು ಇಲಿಯ ಮೇಲೆ ಸಂಶೋಧನೆ ನಡೆಸಿದ್ದಾರೆ. ಸದರಿ ಅಧ್ಯಯನವು ನೇಚರ್ ಜರ್ನಲ್​ನಲ್ಲಿ ಪ್ರಕಟಗೊಂಡಿದ್ದು ಒಂದಷ್ಟು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ.

ಸಾಧಾರಣವಾಗಿ ಕೂದಲಿನ ಕೋಶಗಳ ಜೀವಿತಾವಧಿಯನ್ನು ಬೆಳವಣಿಗೆಯ ಹಂತ, ತಟಸ್ಥ ಹಂತ ಹಾಗೂ ಉದುರುವ ಹಂತ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಕೂದಲು ನಿಯಮಿತವಾಗಿ ಉತ್ಪತ್ತಿಗೊಳ್ಳುವ ಕಾಲವನ್ನು ಬೆಳವಣಿಗೆಯ ಹಂತವೆಂದೂ, ಬೆಳೆದ ನಂತರ ಹಾಗೆಯೇ ನಿಲ್ಲುವ ಹಂತವನ್ನು ತಟಸ್ಥ ಹಂತವೆಂದೂ ಹಾಗೂ ಬಿದ್ದುಹೋಗುವ ಘಟ್ಟದಲ್ಲಿ ಕೂದಲಿನ ಕೋಶಗಳು ಅಶಕ್ತವಾಗುವುದನ್ನು ಉದುರುವ ಹಂತವೆಂದೂ ಗುರುತಿಸಲಾಗುತ್ತದೆ.

ಕೂದಲು ಉದುರುವಿಕೆಗೂ ಮಾನಸಿಕ ಒತ್ತಡಕ್ಕೂ ಇರುವ ಸಂಬಂಧ ಗುರುತಿಸುವ ಸಲುವಾಗಿ ಒತ್ತಡಕ್ಕೆ ಕಾರಣವಾಗುವ ಕಾರ್ಟಿಕೋಸ್ಟೀರಾನ್​ ಹಾರ್ಮೋನ್​ಗಳನ್ನು ಉತ್ಪಾದಿಸುವ ಅಡ್ರಿನಲ್​ ಗ್ರಂಥಿಗಳ ಗುಣಾವಗುಣಗಳ ಅಧ್ಯಯನವನ್ನು ಸಂಶೋಧನಾಕರರು ಆರಂಭಿಸಿದರು. ಇದಕ್ಕಾಗಿ ಇಲಿಯನ್ನು ಪ್ರಯೋಗಕ್ಕೆ ಒಳಪಡಿಸಿದ ಅವರು, ಇಲಿಯಿಂದ ಅಡ್ರಿನಲ್​ ಗ್ರಂಥಿಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಅಧ್ಯಯನ ಮುಂದುವರೆಸಿದರು. ಈ ಹಂತದಲ್ಲಿ ಇಲಿಯ ಕೂದಲು ಅತ್ಯಂತ ವೇಗವಾಗಿ ಬೆಳೆಯುವ ಜೊತೆಗೆ ತಟಸ್ಥ ಹಂತ ಕುಂಠಿತವಾಗಿದ್ದು ಗಮನಕ್ಕೆ ಬಂದಿತು. ನಂತರ ಇಲಿಗೆ ಕಾರ್ಟಿಕೋಸ್ಟೀರಾನ್ ನೀಡಿದಾಗ ಕೂದಲು ಬೆಳವಣಿಗೆಯ ವೇಗ ಸಾಧಾರಣ ಮಟ್ಟಕ್ಕೆ ಬಂದಿದ್ದು ಕಂಡುಬಂದಿತು.

ನಂತರ ಸುಮಾರು ಒಂಬತ್ತು ವಾರಗಳ ಅವಧಿಗೆ ನಡೆಸಿದ ಅಧ್ಯಯನದಲ್ಲಿ ಅಡ್ರಿನಲ್ ಗ್ರಂಥಿಗಳನ್ನು ತೆಗೆದಿರದ ಇಲಿಗಳಿಗೆ ಒತ್ತಡ ಉಂಟುಮಾಡುವ ಹಾರ್ಮೋನ್​ಗಳನ್ನು ಹೆಚ್ಚುವರಿಯಾಗಿ ನೀಡಲಾಯಿತು. ಪರಿಣಾಮವಾಗಿ ಕಾರ್ಟಿಕೋಸ್ಟೀರಾನ್ ಪ್ರಮಾಣ ಹೆಚ್ಚಾಗುವುದರ ಜೊತೆಜೊತೆಗೆ ಕೂದಲ ಬೆಳವಣಿಗೆ ನಿಲ್ಲುವ ಅವಧಿಯೂ ಹೆಚ್ಚಾಯಿತು.

ಈ ರೀತಿಯ ಫಲಿತಾಂಶದ ಹಿಂದೆ ಯಾವ ಬಗೆಯ  ಜೀವಾಣು ಪ್ರಕ್ರಿಯೆ (Molecular Process) ನಡೆದಿದೆ ಹಾಗೂ ಇದನ್ನು ಅದಲುಬದಲು ಮಾಡಿದರೆ ಏನಾಗಬಹುದು ಎಂದು ಅರಿಯಲು ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್​ಗಳು ಕೂದಲಿನ ಕೋಶಗಳಿಗೆ ಚಲಿಸುವ ಮಾರ್ಗವನ್ನು ಅಭ್ಯಸಿಸಿದರು. ಈ ವೇಳೆ ಕಾರ್ಟಿಕೋಸ್ಟೀರಾನ್ ಕೂದಲಿನ ಕೋಶಗಳ ಸಮೀಪದಲ್ಲೇ, ಡರ್ಮಲ್ ಪ್ಯಾಪಿಲ್ಲಾ ಜೀವಕೋಶಗಳಿಗೆ ಅಂಟಿಕೊಂಡಿರುವುದು ಪತ್ತೆಯಾಯಿತು. ಅದರ ಚಟುವಟಿಕೆಯನ್ನು ತಿಳಿದುಕೊಳ್ಳಲು ಕೆಲ ಇಲಿಗಳಿಗೆ ಕಾರ್ಟಿಕೋಸ್ಟೀರಾನ್ ನೀಡಿದಾಗ ಕೂದಲಿನ ಬೆಳವಣಿಗೆ ಸಾಧಾರಣವಾಗಿತ್ತಾದರೂ ಕೂದಲು ಬೇಗ ಉದುರಿಹೋಗಲಾರಂಭಿಸಿತು.

ಇದರೊಂದಿಗೆ ಇನ್ನಷ್ಟು ಅಂಶಗಳ ಬಗ್ಗೆಯೂ ಅಧ್ಯಯನ ನಡೆಸಲಾಗಿದ್ದು GAS6 ಎಂಬ ಪ್ರೋಟಿನ್​ ಅಂಶವನ್ನೂ ಸೇರ್ಪಡೆಗೊಳಿಸಲಾಗಿತ್ತು. ಇಷ್ಟಾದರೂ ಕೂದಲು ಉದುರುವುದಕ್ಕೆ ಒತ್ತಡ ಉಂಟುಮಾಡುವ ಹಾರ್ಮೋನ್​ಗಳೇ ಕಾರಣ ಎಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ ಮಾನಸಿಕ ಒತ್ತಡವು ಕೂದಲಿನ ಜೀವಕೋಶವನ್ನು ಸಡಿಲಗೊಳಿಸಿ, ಉದುರಲು ಕಾರಣವಾಗುತ್ತವೆ ಎಂದು ಅಂದಾಜು ಮಾಡಲಷ್ಟೇ ಸಾಧ್ಯವಾಗಿದೆ.  ಕೂದಲು ಉದುರುವಿಕೆಗೆ ನಿರ್ದಿಷ್ಟ ಕಾರಣ ಪತ್ತೆಹಚ್ಚಲು ಇನ್ನಷ್ಟು ಅಧ್ಯಯನಗಳ ಅವಶ್ಯಕತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Hair Loss: ಕೂದಲು ಉದುರುವ ಸಮಸ್ಯೆ ಎಲ್ಲಾ ಸಂದರ್ಭದಲ್ಲೂ ಒಂದೇ ಥರ ಇರಲ್ಲ

ಇದನ್ನೂ ಓದಿ: ಕ್ರೀಮ್ ಬಳಸಿದರೂ ಕೂದಲು ಬೆಳೆಯಲಿಲ್ಲ! ಜಾಹೀರಾತು ಮಾಡೆಲ್​ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ