ಎಂದಾದರೂ ದಾಲ್ಚಿನ್ನಿ ಚಹಾ ಟ್ರೈ ಮಾಡಿದ್ದೀರಾ? ಇಲ್ಲವಾದರೆ ಹೀಗೆ ಮಾಡಿ

ಚಹಾದಲ್ಲಿ ಅನೇಕ ವಿಧ. ಇದರಲ್ಲಿ ಕೆಲವು ಚಹಾಗಳು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿರುತ್ತದೆ. ಇಂತಹ ಆಯ್ಕೆಗಳ ಪಟ್ಟಿಯಲ್ಲಿ ದಾಲ್ಚಿನ್ನಿ ಚಹಾ ಕೂಡ ಸೇರಿಕೊಳ್ಳುತ್ತದೆ. ಇದು ರುಚಿ ನೀಡುವುದು ಮಾತ್ರವಲ್ಲ ಆರೋಗ್ಯ ಪ್ರಯೋಜನಗಳನ್ನು ಕೂಡ ನೀಡುತ್ತದೆ. ಇದು ಸಕ್ಕರೆಯನ್ನು ದೇಹಕ್ಕೆ ಪ್ರವೇಶಿಸದಂತೆ ನಿಯಂತ್ರಿಸುವುದರ ಜೊತೆಗೆ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ಪ್ರತಿನಿತ್ಯ ದಾಲ್ಚಿನ್ನಿ ಚಹಾ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಎಂದಾದರೂ ದಾಲ್ಚಿನ್ನಿ ಚಹಾ ಟ್ರೈ ಮಾಡಿದ್ದೀರಾ? ಇಲ್ಲವಾದರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Mar 07, 2025 | 9:04 AM

ಚಹಾ ಅಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ, ಗ್ರೀನ್ ಟೀ, ಬ್ಲಾಕ್ ಟೀ ಹೀಗೆ ಚಹಾದಲ್ಲಿ ಅನೇಕ ವಿಧ. ಇದರಲ್ಲಿ ಕೆಲವು ಚಹಾಗಳು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿರುತ್ತದೆ. ಇಂತಹ ಆಯ್ಕೆಗಳ ಪಟ್ಟಿಯಲ್ಲಿ ದಾಲ್ಚಿನ್ನಿ ಚಹಾ ಕೂಡ ಸೇರಿಕೊಳ್ಳುತ್ತದೆ. ಇದು ರುಚಿ ನೀಡುವುದು ಮಾತ್ರವಲ್ಲ ಆರೋಗ್ಯ ಪ್ರಯೋಜನಗಳನ್ನು ಕೂಡ ನೀಡುತ್ತದೆ. ಇದು ಸಕ್ಕರೆಯನ್ನು ದೇಹಕ್ಕೆ ಪ್ರವೇಶಿಸದಂತೆ ನಿಯಂತ್ರಿಸುವುದರ ಜೊತೆಗೆ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ಪ್ರತಿನಿತ್ಯ ದಾಲ್ಚಿನ್ನಿ ಚಹಾ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

  • ದಾಲ್ಚಿನ್ನಿ ಚಹಾ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ಗಳನ್ನು ಹೊಂದಿರುತ್ತದೆ. ಅವು ಚಯಾಪಚಯವನ್ನು ಸುಧಾರಿಸಲು ಮತ್ತು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
  • ದಾಲ್ಚಿನ್ನಿಯಲ್ಲಿ ಜೈವಿಕ ಸಕ್ರಿಯ ಸಂಯುಕ್ತಗಳಿವೆ. ಸಂಶೋಧನೆಯ ಪ್ರಕಾರ, ದಾಲ್ಚಿನ್ನಿ ಇನ್ಸುಲಿನ್ ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಗ್ಲುಕೋಸ್ ಅನ್ನು ಜೀವಕೋಶಗಳಿಗೆ ತ್ವರಿತವಾಗಿ ಸಾಗಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ. ವಿಶೇಷವಾಗಿ ಇನ್ಸುಲಿನ್ ಪ್ರತಿರೋಧ ಹೊಂದಿರುವ ಜನರಿಗೆ ಅಥವಾ ಟೈಪ್ -2 ಮಧುಮೇಹ ಹೊಂದಿರುವವರಿಗೆ ಸಹಾಯ ಮಾಡುತ್ತದೆ.
  • ಮಧುಮೇಹ ಇರುವವರಿಗೆ ಚಹಾ ಕುಡಿಯುವುದನ್ನು ನಿಲ್ಲಿಸಲು ಕಷ್ಟವಾದರೆ, ನೀವು ಅದರಲ್ಲಿ ಸಣ್ಣ ಬದಲಾವಣೆ ಮಾಡುವ ಮೂಲಕ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ದಾಲ್ಚಿನ್ನಿ ಚಹಾ ಸೇವನೆ ಮಾಡಬಹುದು.
  • ಚಹಾಕ್ಕೆ ದಾಲ್ಚಿನ್ನಿಯನ್ನು ಸೇರಿಸುವುದರಿಂದ ಗ್ಲೂಕೋಸ್ ನಿಧಾನವಾಗಿ ದೇಹವನ್ನು ಪ್ರವೇಶಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯುತ್ತದೆ.
  • ದಾಲ್ಚಿನ್ನಿಯನ್ನು ದೀರ್ಘಕಾಲದ ವರೆಗೆ ಸೇವಿಸುವುದರಿಂದ ಉಪವಾಸದ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ

ದಾಲ್ಚಿನ್ನಿ ಚಹಾ ಮಾಡುವುದು ಹೇಗೆ?

ಚಹಾದಲ್ಲಿ ದಾಲ್ಚಿನ್ನಿಯನ್ನು ಬೆರೆಸುವುದು ತುಂಬಾ ಸುಲಭ. ನಿಮ್ಮ ಚಹಾಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಬಯಸಿದಲ್ಲಿ, ಚಹಾ ತಯಾರಿಸುವಾಗ ದಾಲ್ಚಿನ್ನಿ ಪುಡಿಯ ಬದಲು ನೇರವಾಗಿ ದಾಲ್ಚಿನ್ನಿ ಹಾಕಿ ಚೆನ್ನಾಗಿ ಕುದಿಸಬಹುದು. ಜೊತೆಗೆ ಈ ಮಿಶ್ರಣಕ್ಕೆ ಶುಂಠಿ, ಲವಂಗವನ್ನು ಕೂಡ ಬಳಸಬಹುದು. ಈ ರೀತಿಯಾಗಿ ಚಹಾ ಮಾಡುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ
ಮಕ್ಕಳಲ್ಲಿ ‘ಬೊಜ್ಜು’ ಬರುಲು ಪೋಷಕರೇ ಕಾರಣ, ಅದು ಹೇಗೆ?
ಸ್ಥೂಲಕಾಯತೆಯನ್ನು ಎದುರಿಸುವ ಕುರಿತು ಜಾಗೃತಿ ಮೂಡಿಸಿದ ಏಮ್ಸ್
ಮೋದಿ ಫಿಟ್ ಇಂಡಿಯಾ ಕರೆಗೆ ಅಕ್ಷಯ್ ಕುಮಾರ್, ವೈದ್ಯರು,ಕ್ರೀಡಾಪಟುಗಳ ಬೆಂಬಲ
ಸ್ಥೂಲಕಾಯತೆಯಿಂದ ಬಳಲುತ್ತಿದ್ದೀರಾ? ಆಹಾರದಲ್ಲಿ ಈ ಬದಲಾವಣೆ ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ