Coconut Water vs Sugarcane Juice: ಎಳನೀರು, ಕಬ್ಬಿನ ರಸ ಇವೆರಡರಲ್ಲಿ ಯಾವುದು ಒಳ್ಳೆಯದು
ಎಳನೀರು ಮತ್ತು ಕಬ್ಬಿನ ರಸ, ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ರುಚಿಗೂ ಇವೆರಡು ಒಂದನ್ನೊಂದು ಮೀರಿಸುವಷ್ಟು ಚೆನ್ನಾಗಿರುತ್ತದೆ. ಅದಕ್ಕಾಗಿಯೇ ಇವೆರಡನ್ನೂ ಇಷ್ಟ ಪಟ್ಟು ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇವುಗಳಲ್ಲಿ ಯಾವುದು ಒಳ್ಳೆಯದು? ಎಳನೀರು ಅಥವಾ ಕಬ್ಬಿನ ರಸ ನಮ್ಮ ದೇಹಕ್ಕೆ ಯಾವುದು ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ? ಬಾಯಾರಿಕೆಯಾದಾಗ ಇವೆರಡರಲ್ಲಿ ಯಾವುದರ ಆಯ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಎಳನೀರು ಮತ್ತು ಕಬ್ಬಿನ ರಸ ಇವೆರಡು ಪಾನೀಯಗಳನ್ನು ಆಗಾಗ ಕುಡಿಯುತ್ತೇವೆ. ಇವೆರಡರಲ್ಲಿಯೂ ಇರುವ ಆರೋಗ್ಯಕರ ಗುಣಗಳಿಂದಾಗಿ ಬಹಳ ಜನಪ್ರಿಯಗೊಂಡಿದೆ. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ರುಚಿಗೂ ಇವೆರಡು ಒಂದನ್ನೊಂದು ಮೀರಿಸುವಷ್ಟು ಚೆನ್ನಾಗಿರುತ್ತದೆ. ಅದಕ್ಕಾಗಿಯೇ ಇವೆರಡನ್ನೂ ಇಷ್ಟ ಪಟ್ಟು ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇವುಗಳಲ್ಲಿ ಯಾವುದು ಒಳ್ಳೆಯದು? ಎಳನೀರು ಅಥವಾ ಕಬ್ಬಿನ ರಸ ನಮ್ಮ ದೇಹಕ್ಕೆ ಯಾವುದು ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ? ಬಾಯಾರಿಕೆಯಾದಾಗ ಇವೆರಡರಲ್ಲಿ ಯಾವುದರ ಆಯ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಎಳನೀರಿನಲ್ಲಿರುವ ಆರೋಗ್ಯ ಪ್ರಯೋಜನಗಳು:
- ಇದು ಹೈಡ್ರೇಟ್ ಮಾಡಲು ಸಹಾಯ ಮಾಡುವುದಲ್ಲದೆ ಇವುಗಳಲ್ಲಿ ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ಖನಿಜಗಳು ಎಲ್ಲವೂ ಸಿಗುತ್ತದೆ. ಹೆಚ್ಚು ಬೆವರುವವರು ಎಳನೀರನ್ನು ತಪ್ಪದೆ ಕುಡಿಯಬೇಕು.
- ಎಳನೀರಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅಂಶವಿದೆ, ಇದು ಸೋಡಿಯಂ ಅನ್ನು ತಟಸ್ಥಗೊಳಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ.
- ಇದು ಕಡಿಮೆ ಕ್ಯಾಲೊರಿ ಇರುವ ಪಾನೀಯವಾಗಿದ್ದು, ಬಾಯಾರಿಕೆಯಾದಾಗ ಕುಡಿಯಲು ಉತ್ತಮ ಆಯ್ಕೆಯಾಗಿದೆ. ಇದು ಹಸಿವನ್ನು ನಿಗ್ರಹಿಸುವ ಮೂಲಕ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ತುಂಬಾ ಒಳ್ಳೆಯದು. ಅದಲ್ಲದೆ ವ್ಯಾಯಾಮ ಆದ ನಂತರದ ಚೇತರಿಕೆಗೆ ಎಳನೀರು ಬಹಳ ಒಳ್ಳೆಯದು ಎನ್ನಲಾಗುತ್ತದೆ
- ಎಳನೀರು ಆಮ್ಲೀಯತೆಯನ್ನು ಸಮತೋಲನಗೊಳಿಸುವ ಜೈವಿಕ ಸಕ್ರಿಯ ಕಿಣ್ವಗಳನ್ನು ಹೊಂದಿರುತ್ತದೆ. ಇದರಲ್ಲಿರುವ ಲಾರಿಕ್ ಆಮ್ಲವು ಆಂಟಿಮೈಕ್ರೊಬಿಯಲ್ ಆಗಿ ಕಾರ್ಯನಿರ್ವಹಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
- ಎಳನೀರಿನಲ್ಲಿ ವಿಟಮಿನ್ ಸಿ ಇದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವುದರೊಂದಿಗೆ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.
- ಡಯಾಬಿಟಿಸ್ ಇರುವವರಿಗೆ ಎಳನೀರು ಒಳ್ಳೆಯದು. ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುವ ಮೂಲಕ ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
- ಎಳನೀರಿನಲ್ಲಿರುವ ವಿಟಮಿನ್ ಸಿ ಮತ್ತು ಇ ಚರ್ಮವನ್ನು ಸೂರ್ಯನ ಹಾನಿ ಮತ್ತು ಮಾಲಿನ್ಯದಿಂದ ರಕ್ಷಿಸುತ್ತದೆ. ಜೀವಕೋಶಗಳ ಹಾನಿಯನ್ನು ತಡೆಯುತ್ತದೆ. ಜೊತೆಗೆ ಚರ್ಮವನ್ನು ಮೃದುವಾಗಿರಿಸುತ್ತದೆ.
ಕಬ್ಬಿನ ರಸದಲ್ಲಿರುವ ಆರೋಗ್ಯ ಪ್ರಯೋಜನಗಳು:
- ಪೊಟ್ಯಾಸಿಯಮ್ ಅಂಶ ಕಬ್ಬಿನ ರಸದಲ್ಲಿ ಹೆಚ್ಚಿದ್ದು ಮಲಬದ್ಧತೆ ಮತ್ತು ಉಬ್ಬರದಂತಹ ಸಮಸ್ಯೆಗಳನ್ನು ತಡೆಯುತ್ತದೆ.
- ಕಬ್ಬಿನ ರಸವು ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನು ಹೊಂದಿದೆ, ಇದು ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳನ್ನು ತಡೆಗಟ್ಟಲು ಜೊತೆಗೆ ಬಿಳಿ ರಕ್ತ ಕಣಗಳ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಈ ಪಾನೀಯವು ಮೂಳೆಗಳನ್ನು ಬಲಪಡಿಸುತ್ತದೆ ಜೊತೆಗೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
- ನಿರ್ಜಲೀಕರಣವನ್ನು ತಡೆಗಟ್ಟಲು ಮತ್ತು ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಲು ಕೀಮೋಥೆರಪಿ ಚಿಕಿತ್ಸೆಯ ಸಮಯದಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ದ್ರವಗಳು ಮತ್ತು ಎಲೆಕ್ಟ್ರೋಲೈಟ್ಗಳನ್ನು ಮರುಪೂರಣ ಮಾಡಲು ಕಬ್ಬಿನ ರಸ ಸಹಾಯ ಮಾಡುತ್ತದೆ.
- ಕಬ್ಬಿನ ರಸವು ಮೆಗ್ನೀಸಿಯಮ್ ಅನ್ನು ಒದಗಿಸುತ್ತದೆ, ಇದು ರಕ್ತನಾಳಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಎಬಿಸಿ ಜ್ಯೂಸ್ ಕುಡಿಯುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
ಎಳನೀರು ಮತ್ತು ಕಬ್ಬಿನ ರಸ ಯಾರಿಗೆ ಒಳ್ಳೆಯದಲ್ಲ?
ಕಬ್ಬಿನ ರಸದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಹಾಗಾಗಿ ಮಧುಮೇಹಿಗಳಿಗೆ ಇದು ಅಪಾಯಕಾರಿಯಾಗಬಹುದು. ನಿಮಗೆ ಮಧುಮೇಹವಿದ್ದರೆ ಕಬ್ಬಿನ ರಸವನ್ನು ತಪ್ಪಿಸುವುದು ಉತ್ತಮ. ಇದರ ಬದಲಿಗೆ ನಿಮಗೆ ಎಳನೀರು ಸುರಕ್ಷಿತ ಆಯ್ಕೆಯಾಗಿದೆ. ಇನ್ನು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಅಥವಾ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವವರು ಎಳನೀರು ಕುಡಿಯುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.
ಇವೆರಡರಲ್ಲಿ ಯಾವುದು ಉತ್ತಮ?
ಎಳನೀರು ಮತ್ತು ಕಬ್ಬಿನ ರಸ ಎರಡೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಪ್ರತಿಯೊಂದೂ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ನಿಮ್ಮ ದೇಹದ ಪ್ರಕೃತಿಯ ಅನುಸಾರ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಯಾವುದು ಒಳ್ಳೆಯದು ಎಂಬುದನ್ನು ನೀವೇ ನಿರ್ಧರಿಸಿ ಅಥವಾ ನಿಮ್ಮ ವೈದ್ಯರ ಸಲಹೆಯಂತೆ ಸೇವನೆ ಮಾಡುವುದು ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ