ನಿಮಗೆ ಗೊತ್ತಾ.. ಅಳುವುದು ಒಳ್ಳೆಯದಂತೆ! ಅಳುವುದರಿಂದಾಗುವ ಪ್ರಯೋಜನಗಳು ಇಲ್ಲಿವೆ ನೋಡಿ
Crying Benefits: ನಿಮಗೆ ಗೊತ್ತಾ.. ಅಳುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಂತೆ. ಅಳುವುದರಿಂದಾಗುವ ಪ್ರಯೋಜನಗಳು ಇಲ್ಲಿವೆ ನೋಡಿ
ಅಳುವುದು ಕೆಟ್ಟದ್ದು, ದರಿದ್ರದ್ದು ಎಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಚಿಕ್ಕ ಚಿಕ್ಕ ವಿಷಯಗಳಿಗೆ ಅಳುತ್ತಾರೆ. ಹಾಗಂತ, ಚಿಕ್ಕ ಮಕ್ಕಳ ಬಗ್ಗೆ ಹೇಳಲು ಏನೂ ಇಲ್ಲ. ಅವರು ಎಲ್ಲದಕ್ಕೂ ಅಳುತ್ತಾರೆ ಬಿಡಿ. ಅದರಲ್ಲೂ ಹುಡುಗರು ಅಳಲೇಬಾರದು ಎಂದು ಹೇಳುವುದು ರೂಢಿ. ಆದರೆ ಅಳುವುದರಿಂದ ಅನೇಕ ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಭಾವನೆಗಳನ್ನು ಹತ್ತಿಕ್ಕದೆ ಸಾರ್ವಜನಿಕವಾಗಿ ಕಣ್ಣೀರು ಹಾಕುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗುವುದಲ್ಲದೆ, ಮಾನಸಿಕ ನೆಮ್ಮದಿಯೂ ಸಿಗುತ್ತದೆ ಎಂಬುದು ಬಹಿರಂಗವಾಗಿದೆ. ಈಗ ಕಣ್ಣೀರು ಹಾಕುವುದರಿಂದ ಆಗುವ ಲಾಭಗಳೇನು ಎಂದು ನೋಡೋಣ.
ಶಾಂತವಾಗಿರಿ: ಅಳು ಬಂದಾಗ ಅತ್ತುಬಿಡುವುದರಿಂದ ಮನಸ್ಸನ್ನು ಶಾಂತಗೊಳಿಸುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸದೆ ನೀವು ಅಳುತ್ತಿದ್ದರೆ, ನಿಮ್ಮ ಮನಸ್ಸು ನಿರಾಳವಾಗುತ್ತದೆ. ಈ ರೀತಿ ಅಳುವುದು ನಿಮಗೆ ಉತ್ತಮ ಅನಿಸುತ್ತದೆ. ಮೇಲಾಗಿ ಒತ್ತಡವೂ ಕಡಿಮೆಯಾಗುತ್ತದೆ, ನಿದ್ದೆಯೂ ಚೆನ್ನಾಗಿ ಬರುತ್ತದೆ. ಮನಸ್ಸು ನಿರಾಳವಾಗುತ್ತದೆ ಎನ್ನುತ್ತಾರೆ ತಜ್ಞರು. ಅಳುವುದರಿಂದ ಮನಸ್ಸಿನ ಭಾರವೂ ಕಡಿಮೆಯಾಗುತ್ತದೆ. ಇನ್ನು, ಶಿಶುಗಳ ಅಳುವಿಕೆಯಿಂದಾಗಿ, ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
Also Read: ಈತ ನಿಜಕ್ಕೂ ವಿಚಿತ್ರ ಮನುಷ್ಯನೇ! ಕಠಿಣ ತಪಸ್ಸಿನಂತೆ 5 ವರ್ಷದಿಂದ ವಿಭಿನ್ನ ಆಹಾರ ತಿನ್ನುತ್ತಿದ್ದಾರೆ! ಯಾಕೆ ಗೊತ್ತಾ?
ಒತ್ತಡ ನಿವಾರಣೆಯಾಗುತ್ತದೆ: ಅಳುವುದು ಉತ್ತಮ ಒತ್ತಡ ನಿವಾರಕ. ನಿಮಗೆ ನೋವುಂಟಾದಾಗ ಅಳುವುದು ಅಥವಾ ನಿಮಗೆ ಭಾವನಾತ್ಮಕ ತೊಂದರೆ ಇದೆ ಎಂದು ಭಾವಿಸುವುದು ಅದನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒತ್ತಡ ಕಡಿಮೆ ಮಾಡಲು ಅಳುವುದು ದೊಡ್ಡ ಔಷಧವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಅಳದೆ ನಿಮ್ಮ ನೋವನ್ನು ಒಳಗೆ ಇಟ್ಟುಕೊಳ್ಳುವುದು ಮತ್ತಷ್ಟು ಒತ್ತಡಕ್ಕೆ ಕಾರಣವಾಗಬಹುದು. ಅಳುವುದು ಒತ್ತಡದ ಹಾರ್ಮೋನುಗಳು ಮತ್ತು ಇತರ ರಾಸಾಯನಿಕಗಳನ್ನು ಕಡಿಮೆ ಮಾಡುತ್ತದೆ. ನಿಮಗೆ ಅಳಬೇಕು ಅನಿಸಿದಾಗ ಅತ್ತುಬಿಡಿ. ಆಗ ಮಾತ್ರ ಮನಸ್ಸು ಶಾಂತವಾಗುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಏನಾಗುತ್ತೆ ಗೊತ್ತಾ? ಮೊದಲು ತಿಳಿದುಕೊಳ್ಳಿ
ಕಣ್ಣುಗಳು ಆರೋಗ್ಯಕರವಾಗುತ್ತವೆ: ಅಳುವುದರಿಂದ ಕಣ್ಣುಗಳಿಂದ ಕಣ್ಣೀರು ಹರಿಯುತ್ತದೆ. ಕಣ್ಣೀರಿನ ರೂಪದಲ್ಲಿ, ಕಣ್ಣಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದು ಕಣ್ಣುಗಳನ್ನು ಶುಭ್ರಗೊಳಿಸುತ್ತದೆ. ಅಳುವುದು ಕಣ್ಣು ಒಣಗುವುದನ್ನು ತಡೆಯುತ್ತದೆ. ಅಳುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ಅದಕ್ಕಾಗಿಯೇ ಅಳುವುದರಿಂದ ಪ್ರಯೋಜನಗಳಿವೆ ಅನ್ನುವುದು. ನಾಲ್ಕು ಜನ ಏನನ್ನುತ್ತಾರೋ ಎಂದು ಯೋಚಿಸದೆ ಅತ್ತುಬಿಡಿ. ಹಾಗೆನೋಡಿದರೆ ಅಳದೇ ಇದ್ದರೇನೆ ನಿಮ್ಮ ನೋವು ನಿಮ್ಮೊಳಗೆ ಉಳಿದುಬಿಡುತ್ತದೆ. ಈ ಕಾರಣದಿಂದಾಗಿ, ನೀವು ಒತ್ತಡದಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಅಳುವುದು ಒಳ್ಳೆಯದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Wed, 13 March 24