AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖರ್ಜೂರ ಬೆರೆಸಿದ ಹಾಲನ್ನು ಕುಡಿದರೆ ಈ ಆರೋಗ್ಯ ಸಮಸ್ಯೆಗಳೆಲ್ಲ ದೂರವಾಗುತ್ತದೆ, ದಿನವೂ ಸೇವಿಸಿದರೆ ಆರೋಗ್ಯ ನಳನಳಿಸುತ್ತದೆ

ಖರ್ಜೂರದಲ್ಲಿರುವ ನಾರಿನಂಶವು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಪರಿಹಾರವಾಗಿದೆ. ಖರ್ಜೂರ ಬೆರೆಸಿದ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೆ ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆಯ ಉರಿಯೂತದಂತಹ ಸಮಸ್ಯೆಗಳು ದೂರವಾಗುತ್ತವೆ.

ಖರ್ಜೂರ ಬೆರೆಸಿದ ಹಾಲನ್ನು ಕುಡಿದರೆ ಈ ಆರೋಗ್ಯ ಸಮಸ್ಯೆಗಳೆಲ್ಲ ದೂರವಾಗುತ್ತದೆ, ದಿನವೂ ಸೇವಿಸಿದರೆ ಆರೋಗ್ಯ ನಳನಳಿಸುತ್ತದೆ
ಖರ್ಜೂರ ಬೆರೆಸಿದ ಹಾಲನ್ನು ಕುಡಿದರೆ ಈ ಆರೋಗ್ಯ ಸಮಸ್ಯೆಗಳೆಲ್ಲ ದೂರವಾಗುತ್ತದೆ
Follow us
ಸಾಧು ಶ್ರೀನಾಥ್​
|

Updated on: Sep 23, 2023 | 6:06 AM

Health Benefits Of Dates Milk: ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ನೇರವಾಗಿ ಹಾಲನ್ನು ಸೇವಿಸುವ ಬದಲು ಅದಕ್ಕೆ ಖರ್ಜೂರವನ್ನು ಬೆರೆಸಿದರೆ ಹೆಚ್ಚಿನ ಆರೋಗ್ಯ ಲಾಭವನ್ನು ಪಡೆಯಬಹುದು. ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ತುಂಬಾ ಅವಶ್ಯಕ ಎಂದು ಹೇಳಲಾಗುತ್ತದೆ. ಹಾಲಿಗೆ ಖರ್ಜೂರವನ್ನು ಸೇರಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ನೋಡೋಣ.

ಕೀಲು ನೋವುಗಳನ್ನು ನಿವಾರಿಸುತ್ತದೆ: ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದಂತಹ ಮೂಳೆಗಳನ್ನು ಬಲಪಡಿಸುವ ಪೋಷಕಾಂಶಗಳಿವೆ. ಖರ್ಜೂರದಲ್ಲಿ ಹಲವು ಬಗೆಯ ಆ್ಯಂಟಿಆಕ್ಸಿಡೆಂಟ್‌ಗಳೂ ಇವೆ. ಇವು ಮೂಳೆಗಳನ್ನು ಬಲಗೊಳಿಸುವುದಲ್ಲದೆ, ಕೀಲು ನೋವನ್ನು ನಿವಾರಿಸುತ್ತದೆ.

ಜ್ಞಾಪಕ ಶಕ್ತಿ: ಖರ್ಜೂರದೊಂದಿಗೆ ಬೆರೆಸಿದ ಹಾಲು ಮೆದುಳಿನ ಕಾರ್ಯಶಕ್ತಿ ಮತ್ತು ಜ್ಞಾಪಕಶಕ್ತಿಯನ್ನು ವೃದ್ಧಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದರ ಪೋಷಕಾಂಶಗಳು ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಮೆದುಳಿಗೆ ಉತ್ತೇಜನವನ್ನು ನೀಡುತ್ತದೆ.

ಜೀರ್ಣಕಾರಿ ಸಮಸ್ಯೆಗಳು: ಖರ್ಜೂರದಲ್ಲಿರುವ ನಾರಿನಂಶವು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಪರಿಹಾರವಾಗಿದೆ. ಖರ್ಜೂರ ಬೆರೆಸಿದ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೆ ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆಯ ಉರಿಯೂತದಂತಹ ಸಮಸ್ಯೆಗಳು ದೂರವಾಗುತ್ತವೆ.

ಇದನ್ನು ಓದಿ: ನೀವು ಗೋಡಂಬಿ ತಿನ್ನುತ್ತಿಲ್ಲವೇ? ಹಾಗಾದರೆ ಈ ಆರೋಗ್ಯ ಪ್ರಯೋಜನಗಳನ್ನು ಮಿಸ್​ ಮಾಡಿಕೊಳ್ತಿದ್ದೀರಿ ನೋಡಿ

ರಕ್ತಹೀನತೆ ನಿವಾರಣೆ: ಖರ್ಜೂರ ಮತ್ತು ಹಾಲಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಈ ಕಾರಣಕ್ಕೆ ಖರ್ಜೂರ ಬೆರೆಸಿದ ಹಾಲನ್ನು ಕುಡಿದರೆ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕಬ್ಬಿಣವು ದೇಹದಲ್ಲಿ ರಕ್ತ ಕಣಗಳ ಉತ್ಪಾದನೆಯನ್ನು ಸುಧಾರಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ.

ತ್ವಚೆಯ ಆರೈಕೆ: ತ್ವಚೆಯನ್ನು ಹೊಳೆಯುವಂತೆ ಮಾಡುವಲ್ಲಿ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಖರ್ಜೂರ ಬೆರೆಸಿದ ಹಾಲನ್ನು ಕುಡಿದರೆ ಚರ್ಮದಲ್ಲಿ ಉರಿ, ಕಿರಿಕಿರಿಯಂತಹ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೇ ಇದನ್ನು ಕುಡಿದರೆ ರಕ್ತ ಸಂಚಾರ ಹೆಚ್ಚಿ, ಮುಖ ಆಕರ್ಷಕವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ