ವಿಟಮಿನ್ ಡಿ ಕೊರತೆಯಿಂದ ಸ್ತನ ಕ್ಯಾನ್ಸರ್​ ಬರುತ್ತಾ?

|

Updated on: Oct 11, 2023 | 5:50 PM

ಸ್ತನ ಕ್ಯಾನ್ಸರ್ 161 ದೇಶಗಳಲ್ಲಿ ಮಹಿಳೆಯರಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕ್ಯಾನ್ಸರ್ ಆಗಿದೆ. 98 ದೇಶಗಳಲ್ಲಿ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಸ್ತನ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಜಾಗತಿಕವಾಗಿ ಸುಮಾರು 100 ಜನರು ವಿಟಮಿನ್ ಡಿಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ ಕೊರತೆಯು ಮಧುಮೇಹ, ಸಂಧಿವಾತ, ಮೂಳೆಗಳ ಸವಕಳಿ ಮತ್ತು ಕ್ಯಾನ್ಸರ್‌ನಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ.

ವಿಟಮಿನ್ ಡಿ ಕೊರತೆಯಿಂದ ಸ್ತನ ಕ್ಯಾನ್ಸರ್​ ಬರುತ್ತಾ?
ಸ್ತನ ಕ್ಯಾನ್ಸರ್
Image Credit source: iStock
Follow us on

ಇತ್ತೀಚೆಗೆ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿಬಿಟ್ಟಿದೆ. ಜಗತ್ತಿನಲ್ಲಿ ಪತ್ತೆಯಾಗುತ್ತಿರುವ ಅತಿ ಹೆಚ್ಚು ಕ್ಯಾನ್ಸರ್​ಗಳ ಪೈಕಿ ಸ್ತನ ಕ್ಯಾನ್ಸರ್​ 2ನೇ ಸ್ಥಾನದಲ್ಲಿದೆ. ವಿಟಮಿನ್ ಡಿ ಮತ್ತು ಸ್ತನ ಕ್ಯಾನ್ಸರ್ ನಡುವಿನ ಸಂಬಂಧದ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಕಡಿಮೆ ವಿಟಮಿನ್ ಡಿ ಮಟ್ಟಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ವಿಟಮಿನ್ ಡಿ ರೋಗನಿರೋಧಕ ಕಾರ್ಯ ಮತ್ತು ಜೀವಕೋಶದ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ಕ್ಯಾನ್ಸರ್ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ವಿಟಮಿನ್ ಡಿ ಕೊರತೆಯು ಸ್ತನ ಕ್ಯಾನ್ಸರ್​ಗೆ ಒಂದು ಕಾರಣವಾಗಬಲ್ಲದು ಎಂದು ಹೇಳಲಾಗಿದ್ದರೂ ಇದಕ್ಕೆ ಸೂಕ್ತ ಪುರಾವೆಗಳು ಇನ್ನೂ ಲಭ್ಯವಾಗಿಲ್ಲ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ ಮತ್ತು ಆಗಾಗ ವ್ಯಾಯಾಮವನ್ನು ಮಾಡಬೇಕು. ಹಾಗೇ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು.

ಇದನ್ನೂ ಓದಿ: ಪಾಲಕ್ ಸೊಪ್ಪನ್ನು ಸೂಪರ್ ಫುಡ್ ಎಂದು ಕರೆಯೋದೇಕೆ?

ವಿಟಮಿನ್ ಡಿಯನ್ನು ಸೂರ್ಯನ ಕಿರಣಗಳ ವಿಟಮಿನ್ ಎಂದು ಕರೆಯಲಾಗುತ್ತದೆ. ಕ್ಯಾಲ್ಸಿಯಂ ಸಮತೋಲನ, ಅಸ್ಥಿಪಂಜರದ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯದ ರಕ್ತನಾಳದ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತಿಕವಾಗಿ ಸುಮಾರು 100 ಜನರು ವಿಟಮಿನ್ ಡಿಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ ಕೊರತೆಯು ಮಧುಮೇಹ, ಸಂಧಿವಾತ, ಮೂಳೆಗಳ ಸವಕಳಿ ಮತ್ತು ಕ್ಯಾನ್ಸರ್‌ನಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳದೆ ಇರುವುದು ವಿಟಮಿನ್ ಡಿ ಕಡಿಮೆಯಾಗಲು ಮುಖ್ಯ ಕಾರಣ.

ಇದನ್ನೂ ಓದಿ: ಭಾರತದಲ್ಲಿ 10 ಕೋಟಿ ಜನರಿಗೆ ನಿದ್ರಾಹೀನತೆ ಸಮಸ್ಯೆ; ನಿಮಗೂ ಈ ಲಕ್ಷಣಗಳಿವೆಯೇ?

ಸ್ತನ ಕ್ಯಾನ್ಸರ್ 161 ದೇಶಗಳಲ್ಲಿ ಮಹಿಳೆಯರಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕ್ಯಾನ್ಸರ್ ಆಗಿದೆ. 98 ದೇಶಗಳಲ್ಲಿ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಸ್ತನ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಇತ್ತೀಚಿನ ಸಂಶೋಧನೆಯು ವಿಟಮಿನ್ ಡಿ ರಿಸೆಪ್ಟರ್ (ವಿಡಿಆರ್) ಜೀನ್‌ಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದೆ. ಸದ್ಯಕ್ಕೆ ಆಗಿರುವ ಸಂಶೋಧನೆಗಳು ವಿಟಮಿನ್ ಡಿ ಮತ್ತು ಸ್ತನ ಕ್ಯಾನ್ಸರ್ ಅಪಾಯದ ನಡುವೆ ಸಂಬಂಧವಿದೆ ಎಂದು ಹೇಳುತ್ತವೆ. ಆದರೆ, ಇದರ ಬಗ್ಗೆ ಇನ್ನಷ್ಟು ಕ್ಲಿನಿಕಲ್ ಪ್ರಯೋಗಗಳು ಆಗಬೇಕಾಗಿದೆ

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ