Health Tips: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸುತ್ತೀರಾ? ಈ ಸಮಸ್ಯೆ ಬರುವುದು ಖಚಿತ

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು. ಏಕೆಂದರೆ ಈ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿಯೂ ಕೆಸರು, ಬಟ್ಟೆ ಒಣಗುವುದಿಲ್ಲ ಹಾಗಾಗಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ ಮಳೆಗಾಲದಲ್ಲಿ ಸೋಂಕುಗಳು ಮತ್ತು ರೋಗಗಳ ಅಪಾಯ ಹೆಚ್ಚಿರುವುದರಿಂದ ವೈಯಕ್ತಿಕ ಸ್ವಚ್ಛತೆ ತುಂಬಾ ಮುಖ್ಯವಾಗುತ್ತದೆ. ಅದರಲ್ಲಿಯೂ ಈ ಸಮಯದಲ್ಲಿ ಬಟ್ಟೆ ಒಣಗಲಿಲ್ಲ ಎಂದು ಒದ್ದೆ ಬಟ್ಟೆಗಳನ್ನು ಧರಿಸುತ್ತಾರೆ. ಹಾಗಾ್ದಾರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ? ಇದು ಆರೋಗ್ಯಕ್ಕೆ ಏಕೆ ಒಳ್ಳೆಯದಲ್ಲ? ಇಲ್ಲಿದೆ ಮಾಹಿತಿ.

Health Tips: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸುತ್ತೀರಾ? ಈ ಸಮಸ್ಯೆ ಬರುವುದು ಖಚಿತ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2024 | 5:42 PM

ಆರೋಗ್ಯಕರ ಜೀವನಶೈಲಿ ಬೇಕಾಗಿರುವುದು ಶುಚಿತ್ವ. ಅದರಲ್ಲಿಯೂ ಈ ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು. ಏಕೆಂದರೆ ಈ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿಯೂ ಕೆಸರು, ಬಟ್ಟೆ ಒಣಗುವುದಿಲ್ಲ ಹಾಗಾಗಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ ಮಳೆಗಾಲದಲ್ಲಿ ಸೋಂಕುಗಳು ಮತ್ತು ರೋಗಗಳ ಅಪಾಯ ಹೆಚ್ಚಿರುವುದರಿಂದ ವೈಯಕ್ತಿಕ ಸ್ವಚ್ಛತೆ ತುಂಬಾ ಮುಖ್ಯವಾಗುತ್ತದೆ. ಅದರಲ್ಲಿಯೂ ಈ ಸಮಯದಲ್ಲಿ ಬಟ್ಟೆ ಒಣಗಲಿಲ್ಲ ಎಂದು ಒದ್ದೆ ಬಟ್ಟೆಗಳನ್ನು ಧರಿಸುತ್ತಾರೆ. ಹಾಗಾ್ದಾರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ? ಇದು ಆರೋಗ್ಯಕ್ಕೆ ಏಕೆ ಒಳ್ಳೆಯದಲ್ಲ? ಇಲ್ಲಿದೆ ಮಾಹಿತಿ.

ಮಳೆಗಾಲದಲ್ಲಿ ಬಟ್ಟೆಯನ್ನು ಒಣಗಿಸುವುದೇ ಒಂದು ಹರಸಾಹಸ. ಹೆಚ್ಚು ಬಿಸಿಲು ಬರದೇ ಬಟ್ಟೆಗಳು ಒಣಗುವುದಿಲ್ಲ ಕೆಲವೊಮ್ಮೆ ದಿನಗಟ್ಟಲೆ ಬಟ್ಟೆ ಒಣಗುವುದೇ ಇಲ್ಲ, ಅಂತಹ ಸಂದರ್ಭಗಳಲ್ಲಿ ಒದ್ದೆ ಬಟ್ಟೆಯನ್ನೇ ಹಾಕಿಕೊಂಡು ಹೋಗುತ್ತೇವೆ. ಆದರೆ ಬಿಸಿಲಿನಲ್ಲಿ ಒಣಗದ ಬಟ್ಟೆಗಳಲ್ಲಿ ಸೂಕ್ಷ್ಮಜೀವಿಗಳಿರುತ್ತವೆ. ಹಾಗಾಗಿ ಅಂತಹ ಬಟ್ಟೆಗಳನ್ನು ಧರಿಸುವಾಗ ಬಹಳ ಜಾಗರೂಕರಾಗಿರಿ. ಮಕ್ಕಳಿಗೆ ತೊಡಿಸುವ ಬಟ್ಟೆಗಳು ಕೂಡ ಶುಚಿಯಾಗಿರುವಂತೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಅಲರ್ಜಿ ಹೆಚ್ಚಾಗುವ ಸಾಧ್ಯತೆ

ಒದ್ದೆ ಇರುವ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಚರ್ಮಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಅಂದರೆ ಅಲರ್ಜಿ ಹೆಚ್ಚುವ ಸಾಧ್ಯತೆ ಇರುತ್ತದೆ. ರಿಂಗ್‌ವರ್ಮ್ ಅಥವಾ ಹುಳುಕಡ್ಡಿ ಸಮಸ್ಯೆ ಉಂಟಾಗುತ್ತದೆ ಇದು ಇಂದು ರೀತಿಯ ಶಿಲೀಂಧ್ರ ಸೋಂಕು. ಜೊತೆಗೆ ಕೆಲವರಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು, ತುರಿಕೆ, ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವುದು ಹೀಗೆ ಅನೇಕ ರೀತಿಯ ಚರ್ಮ ಸಂಬಂಧಿತ ಸಮಸ್ಯೆಗಳು ಕಂಡು ಬರಬಹುದು. ಅದರಲ್ಲಿಯೂ ಮಕ್ಕಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸ ಬೇಕಾಗಬಹುದು. ಒದ್ದೆ ಬಟ್ಟೆಯ ತೇವಾಂಶದಿಂದ ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಬರಬಹುದು.

ಇದನ್ನೂ ಓದಿ: ಮಹಿಳೆಯರಲ್ಲಿ ಶ್ರಮದ ಕೆಲಸ ಇಲ್ಲದಿರುವುದೇ ಪಿಸಿಒಡಿ ಸಮಸ್ಯೆ ಹೆಚ್ಚಳಕ್ಕೆ ಕಾರಣ: ಡಾ। ಅಶೋಕ್ ಭಟ್

ಒದ್ದೆಯಾದ ಬಟ್ಟೆ ಧರಿಸಿ ನಿಮಗೆ ವೈರಸ್ ಅಥವಾ ಫಂಗಸ್ ಸೋಂಕು ಆಗಿದ್ದರೆ ಅಥವಾ ಮಕ್ಕಳು ಈ ಸೋಂಕಿಗೆ ಒಳಗಾಗಿದ್ದರೆ, ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ. ವೈದ್ಯರ ಬಳಿ ತಕ್ಷಣ ಚಿಕಿತ್ಸೆ ಕೊಡಿಸಿ. ಅಥವಾ ತೆಂಗಿನ ಎಣ್ಣೆಯನ್ನು ದದ್ದುಗಳು ಕಂಡು ಬಂದಿರುವ ಜಾಗಕ್ಕೆ ಹಚ್ಚಿ. ಆದರೆ ಆ ಬಳಿಕ ನಿರ್ಲಕ್ಷ್ಯ ಮಾಡದೆಯೇ ವೈದ್ಯರನ್ನು ಭೇಟಿ ಮಾಡಿ. ಒದ್ದೆ ಬಟ್ಟೆಯನ್ನು ಎಷ್ಟೇ ಕಷ್ಟದಲ್ಲಿಯೂ ಧರಿಸಬೇಡಿ. ಅಂತಹ ಸಂದರ್ಭ ಬಂದರೆ ಆ ಬಟ್ಟೆಗಳನ್ನು ಇಸ್ತ್ರಿ ಮಾಡಿ ಬಳಸಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್