ಎಳನೀರು ವರ್ಸಸ್ ಹಣ್ಣಿನ ಜ್ಯೂಸ್; ಇವೆರಡರಲ್ಲಿ ಯಾವುದು ಒಳ್ಳೆಯದು?

|

Updated on: Nov 17, 2023 | 4:55 PM

ನಿಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕೆಂದು ಯೋಚಿಸುತ್ತಿದ್ದರೆ ಆಗಲೂ ನಿಮಗೆ ಹಣ್ಣಿನ ಜ್ಯೂಸ್​ಗಿಂತ ಎಳನೀರು ಸುರಕ್ಷಿತ ಆಯ್ಕೆಯಾಗಿದೆ. ಹಣ್ಣಿನ ಜ್ಯೂಸ್ ಅದರಲ್ಲೂ ವಿಶೇಷವಾಗಿ ಸಿಹಿ ಹಣ್ಣುಗಳಿಂದ ಮಾಡಿದ ಜ್ಯೂಸ್​ನಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ, ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಲ್ಲ.

ಎಳನೀರು ವರ್ಸಸ್ ಹಣ್ಣಿನ ಜ್ಯೂಸ್; ಇವೆರಡರಲ್ಲಿ ಯಾವುದು ಒಳ್ಳೆಯದು?
ಎಳನೀರು- ಜ್ಯೂಸ್
Follow us on

ಎಳನೀರು ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ ಎಂಬುದು ನಿಮಗೆ ಗೊತ್ತಿರುವ ಸಂಗತಿ. ಹಾಗೇ, ಹಣ್ಣಿನ ಜ್ಯೂಸ್ ಕೂಡ ಅನೇಕ ಪೌಷ್ಟಿಕಾಂಶಗಳ ಆಗರವಾಗಿದೆ. ಆದರೆ, ಇವೆರಡರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾದುದು ಎಂಬುದು ನಿಮಗೆ ಗೊತ್ತಾ? ನಿಮ್ಮ ಅಗತ್ಯಗಳಿಗೆ ತಕ್ಕಂತೆ ಇವೆರಡರಲ್ಲಿ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದನ್ನು ನೀವೇ ನಿರ್ಧರಿಸಿ. ಹಣ್ಣಿನ ಜ್ಯೂಸ್​ ಮತ್ತು ಎಳನೀರಿನ ವಿಶೇಷತೆ ಮತ್ತು ವ್ಯತ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.

ಎಳನೀರು ಪೌಷ್ಟಿಕಾಂಶದ ಮೂಲವಾಗಿದೆ. ಇದು ನಿಮ್ಮ ದೇಹವನ್ನು ಪೋಷಿಸಲು ಮಾತ್ರವಲ್ಲದೆ ಆರೋಗ್ಯಕರ ಚರ್ಮವನ್ನು ನೀಡಲು ಮತ್ತು ಚರ್ಮದ ದದ್ದುಗಳನ್ನು ನಿವಾರಿಸಲು ಸಹಾಯ ಮಾಡುವ ವಿವಿಧ ರೀತಿಯ ಪೋಷಕಾಂಶಗಳನ್ನು ನೀಡುತ್ತದೆ. ಮತ್ತೊಂದೆಡೆ, ಹಣ್ಣಿನ ಜ್ಯೂಸ್ ವಿಟಮಿನ್ ಎ, ಬಿ, ಸಿ ಮತ್ತು ಇ ಅಂಶವನ್ನು ಹೊಂದಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳ ಅದ್ಭುತ ಮೂಲವಾಗಿದೆ.

ಕ್ಯಾಲೋರಿ ವಿಷಯಕ್ಕೆ ಬಂದಾಗ ಎಳನೀರು ಮುಂಚೂಣಿಯಲ್ಲಿದೆ. ಇದು ಹಣ್ಣಿನ ಜ್ಯೂಸ್​ಗಳಿಗಿಂತ ಶೇ. 60ರಷ್ಟು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಉದಾಹರಣೆಗೆ, 100 ಗ್ರಾಂ ಸೇಬಿನ ಜ್ಯೂಸ್ 46 ಕ್ಯಾಲೊರಿಗಳನ್ನು ಹೊಂದಿರುತ್ತದೆ, ಅದೇ ಪ್ರಮಾಣದ ಎಳನೀರು ಕೇವಲ 18.4 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದ್ದರಿಂದ, ನಿಮ್ಮ ಕ್ಯಾಲೋರಿ ಸೇವನೆಯನ್ನು ನೀವು ಕಂಟ್ರೋಲ್ ಮಾಡಬೇಕೆಂದರೆ ಎಳನೀರು ಸೇವಿಸುವುದು ಉತ್ತಮ.

ಇದನ್ನೂ ಓದಿ: ಪ್ರತಿದಿನ ಎಳನೀರನ್ನು ಏಕೆ ಸೇವಿಸಬೇಕು, ಇಲ್ಲಿದೆ 5 ಕಾರಣ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು?

ನಿಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕೆಂದು ಯೋಚಿಸುತ್ತಿದ್ದರೆ ಆಗಲೂ ನಿಮಗೆ ಹಣ್ಣಿನ ಜ್ಯೂಸ್​ಗಿಂತ ಎಳನೀರು ಸುರಕ್ಷಿತ ಆಯ್ಕೆಯಾಗಿದೆ. ಹಣ್ಣಿನ ಜ್ಯೂಸ್ ಅದರಲ್ಲೂ ವಿಶೇಷವಾಗಿ ಸಿಹಿ ಹಣ್ಣುಗಳಿಂದ ಮಾಡಿದ ಜ್ಯೂಸ್​ನಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ, ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಲ್ಲ. ಎಳನೀರು ನೈಸರ್ಗಿಕವಾಗಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ.

ಹಣ್ಣಿನ ಜ್ಯೂಸ್ ತೆಂಗಿನ ನೀರಿಗಿಂತ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕಾರಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಮತ್ತೊಂದೆಡೆ, ಎಳನೀರಲ್ಲಿ ಎಲೆಕ್ಟ್ರೋಲೈಟ್ ಪ್ರಮಾಣ ಹೆಚ್ಚಾಗಿರುತ್ತದೆ. ವಿಶೇಷವಾಗಿ ನಿರ್ಜಲೀಕರಣ, ಹೊಟ್ಟೆಯ ಸಮಸ್ಯೆಗಳು ಅಥವಾ ಗರ್ಭಾವಸ್ಥೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದು.

ಎಳನೀರಿನಲ್ಲಿ ಹೆಚ್ಚಿನ ಎಲೆಕ್ಟ್ರೋಲೈಟ್ ಅಂಶ ಇರುತ್ತದೆ. ಇದು ಹೊಟ್ಟೆಯ ಸಮಸ್ಯೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಎಳನೀರು ಹೊಟ್ಟೆಗೆ ಆರಾಮ ನೀಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಎಳನೀರು ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ತೃಪ್ತಿಕರ ಪಾನೀಯವಾಗಿದೆ. ಎಳ ನೀರು ನಿಮ್ಮ pH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಗರ್ಭಿಣಿಯರಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಅದರ ಪ್ರಯೋಜನಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: ಹಣ್ಣು ತಿನ್ನುವುದು ಒಳ್ಳೆಯದಾ? ಜ್ಯೂಸ್ ಕುಡಿಯೋದು ಒಳ್ಳೆಯದಾ?

ಹಣ್ಣಿನ ಜ್ಯೂಸ್ ಟೇಸ್ಟಿಯಾಗಿದ್ದರೂ ಸರಿಯಾದ ಸಮಯ ಮತ್ತು ಸನ್ನಿವೇಶದಲ್ಲಿ ಇದನ್ನು ಸೇವಿಸುವುದು ಅತ್ಯಗತ್ಯ. ಹಣ್ಣಿನ ಜ್ಯೂಸ್ ಅತ್ಯುತ್ತಮ ಶಕ್ತಿ ವರ್ಧಕವಾಗಿದೆ ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಣ್ಣಿನ ಜ್ಯೂಸ್​ನಲ್ಲಿ ಹೆಚ್ಚಿನ ವಿಟಮಿನ್ ಅಂಶವಿದ್ದು, ಇದು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ. ಹಣ್ಣಿನ ಜ್ಯೂಸ್​ನಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಉತ್ತಮ ತ್ವಚೆಗೆ ಸಹಾಯಕ. ಹಣ್ಣಿನ ಜ್ಯೂಸ್ ಮಲಬದ್ಧತೆಯನ್ನು ನಿವಾರಿಸುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಹಣ್ಣಿನ ಜ್ಯೂಸ್ ಕುಡಿಯದಿರುವುದು ಒಳ್ಳೆಯದು. ಏಕೆಂದರೆ ಇದು ಆಮ್ಲೀಯತೆಗೆ ಕಾರಣವಾಗಬಹುದು. ಅಲ್ಲದೆ, ಕೆಲವು ಹಣ್ಣಿನ ರಸಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುವ ಕಾರಣ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸಮಸ್ಯೆ ಆಗಬಹುದು.

ಎಳನೀರು ಮತ್ತು ಹಣ್ಣಿನ ಜ್ಯೂಸ್​ ಎಂಬುದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಎಳನೀರಿಗೆ ಸ್ವಲ್ಪ ಮಾರ್ಕ್ ಜಾಸ್ತಿ ನೀಡಬಹುದು. ಇದು ನಿಮ್ಮ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ, ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕ್ಯಾಲೋರಿ ಮತ್ತು ಸಕ್ಕರೆಯ ಸೇವನೆಯನ್ನು ನಿಯಂತ್ರಣದಲ್ಲಿಡುತ್ತದೆ. ಎಳನೀರು ರಿಫ್ರೆಶ್ ಮತ್ತು ಪೋಷಣೆಯ ಪಾನೀಯಕ್ಕಾಗಿ ಅತ್ಯುತ್ತಮ ಆಯ್ಕೆಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ