Health Tips:ಈ ಆರೋಗ್ಯ ಸಮಸ್ಯೆಯಿರುವವರು ಚಪಾತಿ ಸೇವಿಸುವುದನ್ನು ತಪ್ಪಿಸಿ, ತಜ್ಞರು ಹೀಗೆನ್ನುವುದು ಏಕೆ?
ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಒಂದಿಲ್ಲೊಂದು ಕಾಯಿಲೆಗಳು ಜನರನ್ನು ಕಾಡುತ್ತಿದೆ. ಹೀಗಾಗಿ ಸೇವಿಸುವ ಆಹಾರಗಳ ಕುರಿತು ಎಷ್ಟು ಕಾಳಜಿ ವಹಿಸಿದರೂ ಕೂಡ ಸಾಲುವುದಿಲ್ಲ. ಕೆಲವರಿಗೆ ರಾತ್ರಿಯ ಊಟಕ್ಕೆ ಅಥವಾ ಮಧ್ಯಾಹ್ನದ ಊಟಕ್ಕೆ ಚಪಾತಿ ಸೇವಿಸುವ ಅಭ್ಯಾಸವಿರುತ್ತದೆ. ಗೋಧಿ ಹಿಟ್ಟಿನಿಂದ ತಯಾರಿಸುವ ಚಪಾತಿಯೂ ಆರೋಗ್ಯಕ್ಕೆ ಒಳ್ಳೆಯದಾದರೂ ಕೆಲವು ಸಮಸ್ಯೆಗಳಿರುವವರು ಚಪಾತಿ ತಿನ್ನಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು.
ಚಪಾತಿ ಎಂದರೆ ನಮಗೆ ತಕ್ಷಣ ನೆನಪಾಗೋದು ಇದೊಂದು ಅತ್ಯುತ್ತಮ ಡಯೇಟ್ ಆಹಾರ. ಉತ್ತರ ಭಾರತದಲ್ಲಂತೂ ಚಪಾತಿಯಿಲ್ಲದೇ ಆ ದಿನವು ಪೂರ್ಣವೇ ಆಗುವುದಿಲ್ಲ. ಇನ್ನೂ, ಫಿಟ್ ನೆಸ್ ಗೆ ಹೆಚ್ಚು ಗಮನ ಕೊಡುವವರು ಚಪಾತಿ ಸೇವನೆ ಮಾಡುವುದೇ ಹೆಚ್ಚು. ಇದರ ನಿಯಮಿತವಾದ ಸೇವನೆಯೂ ಮಾಡುವುದು ಸಹ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಈ ಆರೋಗ್ಯ ಸಮಸ್ಯೆಯಿರುವವರು ಚಪಾತಿ ಸೇವನೆಯನ್ನು ತ್ಯಜಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
- ಮಧುಮೇಹಿಗಳು : ಇತ್ತೀಚೆಗಿನ ದಿನಗಳಲ್ಲಿ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚು ಆಗಿದೆ. ಈ ಮಧುಮೇಹಿಗಳು ಅನ್ನದ ಬದಲು ಗೋಧಿ ಚಪಾತಿ ಸೇವಿಸುತ್ತಾರೆ. ಆದರೆ ಮಧುಮೇಹಿಗಳು ಚಪಾತಿಯನ್ನೂ ತಿನ್ನಬಾರದಂತೆ. ಇದು ಅಮಿಲೋಪೆಕ್ಟಿನ್ ಎಂಬ ಪಿಷ್ಟದ ಅಣುಗಳನ್ನು ಹೊಂದಿರುತ್ತದೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿರುವವರು ಚಪಾತಿ ಕಡಿಮೆ ಸೇವಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.
- ಆಯಾಸದಿಂದ ಬಳಲುತ್ತಿರುವವರು : ಯಾವಾಗ ನೋಡಿದರೂ ದಣಿವು ಆಯಾಸ ಎನ್ನುವವರು ಚಪಾತಿ ಸೇವಿಸಬೇಡಿ. ಏಕೆಂದರೆ ಗೋಧಿಯಲ್ಲಿರುವ ಕಾರ್ಬೋಹೈಡ್ರೇಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಆಯಾಸ ಮತ್ತು ಆಲಸ್ಯವು ಉಂಟಾಗುತ್ತದೆ. ಇದು ಶಕ್ತಿಯನ್ನು ಕಡಿಮೆ ಮಾಡಿ ಹಸಿವನ್ನು ಹೆಚ್ಚಿಸುವ ಕಾರಣ ಆಯಾಸ ಸುಸ್ತು ಎನ್ನುವವವರು ಚಪಾತಿ ತಿನ್ನದಿರುವುದು ಒಳ್ಳೆಯದು.
- ಥೈರಾಯ್ಡ್ ಸಮಸ್ಯೆ : ನಿಮಗೇನಾದರೂ ಥೈರಾಯ್ಡ್ ಸಮಸ್ಯೆ ಇದ್ದರೆ ಚಪಾತಿ ತಿನ್ನಬಾರದು. ಏಕೆಂದರೆ ಗೋಧಿಯಲ್ಲಿ ಹೆಚ್ಚಿನ ಪ್ರಮಾಣದ ಗ್ಲುಟನ್ ಇರುತ್ತದೆ. ಇದು ಆಟೋಇಮ್ಯೂನ್ ಥೈರಾಯ್ಡ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಥೈರಾಯ್ಡ್ ಸಮಸ್ಯೆಯೂ ಉಲ್ಬಣಗೊಳ್ಳುವ ಸಾಧ್ಯತೆಯೇ ಹೆಚ್ಚು.
- ಅತಿಯಾದ ತೂಕ ಹೊಂದಿರುವವರು : ತೂಕ ಇಳಿಸಿಕೊಳ್ಳಲು ಅನೇಕರು ಅನ್ನ ಬಿಟ್ಟು ಚಪಾತಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚು ಚಪಾತಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಂತೆ. ಗೋಧಿ ಮತ್ತು ಗ್ಲುಟನ್‌ನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಿಮ್ಮ ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸಲು ಕಾರಣವಾಗುತ್ತವೆ. ಇದರಿಂದ ತುಂಬಾ ಸುಲಭವಾಗಿ ತೂಕ ಹೆಚ್ಚಾಗುತ್ತದೆ. ಹೀಗಾಗಿ ಆದಷ್ಟು ಚಪಾತಿ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.
- ಜೀರ್ಣಕಾರಿ ಸಮಸ್ಯೆಯಿರುವವರು : ಅತಿಯಾಗಿ ಚಪಾತಿ ತಿನ್ನುವುದರಿಂದ ಗ್ಯಾಸ್, ಅಸಿಡಿಟಿ, ಅಜೀರ್ಣದಂತಹ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗುತ್ತವೆ. ಅಲ್ಲದೆ, ಗೋಧಿಯಲ್ಲಿರುವ ಗ್ಲುಟನ್ ಕರುಳಿನಲ್ಲಿ ಉರಿಯೂತವನ್ನು ಉಂಟು ಮಾಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗೂ ಕಾರಣವಾಗುತ್ತದೆ. ಹೀಗಾಗಿ ಹೊಟ್ಟೆಗೆ ಸಂಬಂಧಿತ ಸಮಸ್ಯೆಯಿರುವವರು ಇದರ ಸೇವನೆಯನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ