AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ದ್ರಾಕ್ಷಿ ನಿಮಗೆ ತುಂಬಾ ಇಷ್ಟನಾ? ಈ ವಿಷಯಗಳು ನೆನಪಿನಲ್ಲಿರಲಿ

ನೈಸರ್ಗಿಕವಾಗಿ ಲಭ್ಯವಿರುವ ಪ್ರೋಟೀನ್ ಗಳು ಮತ್ತು ರೋಗನಿರೋಧಕ ಶಕ್ತಿ ಹಣ್ಣುಗಳಲ್ಲಿ ಹೇರಳವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಅದರಲ್ಲಿಯೂ ಕೆಲವರಿಗೆ ದ್ರಾಕ್ಷಿ ಹಣ್ಣು ಎಂದರೆ ತುಂಬಾ ಇಷ್ಟವಾಗಿರುತ್ತದೆ. ಹಾಗಾದರೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Health Tips: ದ್ರಾಕ್ಷಿ ನಿಮಗೆ ತುಂಬಾ ಇಷ್ಟನಾ? ಈ ವಿಷಯಗಳು ನೆನಪಿನಲ್ಲಿರಲಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 04, 2024 | 3:47 PM

Share

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಹಣ್ಣುಗಳನ್ನು ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ನೈಸರ್ಗಿಕವಾಗಿ ಲಭ್ಯವಿರುವ ಪ್ರೋಟೀನ್ ಗಳು ಮತ್ತು ರೋಗನಿರೋಧಕ ಶಕ್ತಿ ಹಣ್ಣುಗಳಲ್ಲಿ ಹೇರಳವಾಗಿರುವುದೇ ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳುತ್ತಾರೆ. ಅದರಲ್ಲಿಯೂ ಕೆಲವರಿಗೆ ದ್ರಾಕ್ಷಿ ಹಣ್ಣು ಎಂದರೆ ತುಂಬಾ ಇಷ್ಟವಾಗಿರುತ್ತದೆ. ಹಾಗಾದರೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಒಣದ್ರಾಕ್ಷಿಯಾಗಿರಬಹುದು ಅಥವಾ ತಾಜಾ ದ್ರಾಕ್ಷಿಯಾಗಿರಬಹುದು ಅದರ ರುಚಿಯನ್ನು ಇಷ್ಟಪಡದವರಿಲ್ಲ. ಅದರಲ್ಲಿಯೂ ಹಸಿರು ದ್ರಾಕ್ಷಿಗಿಂತ ಕಪ್ಪು ದ್ರಾಕ್ಷಿ ತಿನ್ನುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದ್ರಾಕ್ಷಿ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ.

ದ್ರಾಕ್ಷಿಯ ಪೌಷ್ಠಿಕಾಂಶದ ಮೌಲ್ಯದಿಂದಾಗಿ, ಅವುಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ದ್ರಾಕ್ಷಿ ತಿನ್ನುವುದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು. ಏಕೆಂದರೆ ದ್ರಾಕ್ಷಿಯಲ್ಲಿ ಹೆಚ್ಚಿನ ನೀರಿನ ಅಂಶವು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ; ಮಧುಮೇಹಿಗಳು ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಈ ರಸ ಸೇವನೆ ಮಾಡಿ

ದ್ರಾಕ್ಷಿಯಲ್ಲಿರುವ ಫೈಬರ್ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ದ್ರಾಕ್ಷಿಯಲ್ಲಿ ಕ್ಯಾಲೊರಿಗಳು ಕಡಿಮೆ. ಜೊತೆಗೆ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ದ್ರಾಕ್ಷಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಂಧಿವಾತ, ಅಸ್ತಮಾ ಮತ್ತು ಕೆಲವು ರೀತಿಯ ಕ್ಯಾನ್ಸರ್ ನಂತಹ ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಇದು ಮಧುಮೇಹ, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: