Spicy Food: ಅತೀ ಖಾರದ ಆಹಾರ ಪದಾರ್ಥಗಳನ್ನು ಇಷ್ಟ ಪಡುವವರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ನೀವು ಇಷ್ಟಪಟ್ಟು ತಿನ್ನುವ ಅತೀ ಮಸಾಲೆಯುಕ್ತತೆ ಅಥವಾ ಖಾರ ಪದಾರ್ಥಗಳು ನಿಮ್ಮ ದೇಹಕ್ಕೆ ಎಷ್ಟು ಸೂಕ್ತ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Spicy Food: ಅತೀ ಖಾರದ ಆಹಾರ ಪದಾರ್ಥಗಳನ್ನು ಇಷ್ಟ ಪಡುವವರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ
Spicy FoodImage Credit source: Penn Today
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 07, 2022 | 12:36 PM

ಅತೀ ಮಸಾಲೆಯುಕ್ತತೆ ಅಥವಾ ಹೆಚ್ಚಿನ ಖಾರವನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸಾಕಷ್ಟು ಜನ ಇಷ್ಟ ಪಡುತ್ತಾರೆ. ಆದರೆ ಈ ಖಾರ ಪದಾರ್ಥಗಳು ನಿಮ್ಮ ದೇಹಕ್ಕೆ ಎಷ್ಟು ಸೂಕ್ತ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕ್ಯಾಪ್ಸಿಕಂ ಮೆಣಸಿನಕಾಯಿಯು ವಿಶ್ವದ ಎಲ್ಲಾ ಭಾಗಗಳ ಆಹಾರ ಪದ್ದತಿಯಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಪದಾರ್ಥವಾಗಿದೆ. ಯಾವುದೇ ಆಹಾರ ಪದಾರ್ಥಕ್ಕೂ ವಿಶೇಷ ರುಚಿಯನ್ನು ಕೊಡುವ ಮೆಣಸಿನಕಾಯಿಯನ್ನು ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಪ್ರತಿದಿನ ತಿನ್ನುತ್ತಾರೆ.

ಹಲವಾರು ಇತಿಹಾಸದ ಪ್ರಕಾರ ದಕ್ಷಿಣ ಅಮೆರಿಕಾದ ವಿವಿಧ ಭಾಗಗಳಲ್ಲಿ ಮೆಣಸಿನಕಾಯಿಗಳನ್ನು ಮೊದಲ ಬಾರಿಗೆ ಬೆಳೆಸಲು ಪ್ರಾರಂಭಿಸಿದ್ದು ಎಂದು ಹೇಳಲಾಗುತ್ತದೆ. ಮೆಣಸಿನಕಾಯಿಯನ್ನು 16ನೇ ಶತಮಾನದಲ್ಲಿ ಯುರೋಪಿಗೆ ಪರಿಚಯಿಸಲಾಯಿತು.

ನೀವು ಹೆಚ್ಚು ಖಾರದ ಆಹಾರ ಪದಾರ್ಥಗಳನ್ನು ಇಷ್ಟ ಪಡುತ್ತಿದ್ದರೆ, ಅದು ಒಳ್ಳೆಯ ವಿಷಯವೇ ಯಾಕೆಂದರೆ ಇದರಿಂದ ನಿಮ್ಮ ದೇಹಕ್ಕೆ ಉತ್ತಮವಾಗಿದೆ. ಇದು ನಿಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಆಂಟಿಮೈಕ್ರೊಬಿಯಲ್ ಹೊಂದಿದ್ದು ಇದು ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆದರೆ ಪ್ರಾಣಿಗಳಿಗೆ ಅತಿ ಖಾರವಾದ ಅಥವಾ ಹೆಚ್ಚಿನ ಮಸಾಲೆಗಳಿರುವ ಪದಾರ್ಥಗಳನ್ನು ನೀಡುವುದು ಸೂಕ್ತವಲ್ಲ. ಯಾಕೆಂದರೆ ಇದು ಪ್ರಾಣಗಳ ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳಲ್ಲಿ ತಿಳಿದು ಬಂದಿದೆ.

ಇದನ್ನು ಓದಿ: ಚಳಿಗಾಲದಲ್ಲಿ ನೀವು ಪೇರಲೆ ಹಣ್ಣನ್ನು ಏಕೆ ತಿನ್ನಬೇಕು? 5 ಕಾರಣಗಳು ಇಲ್ಲಿವೆ

ಹೆಚ್ಚಿನ ಖಾರವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ನೀರಿನ ಬದಲಾಗಿ ಹಾಲು, ಮೊಸರು ಅಥವಾ ಐಸ್ ಕ್ರೀಮ್ ಸೇವಿಸುವುದು ಉತ್ತಮವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: