ನೀವು ಬಹಳ ಒತ್ತಡವನ್ನು ಅನುಭವಿಸುತ್ತಿರುವಿರಾ? ನಿಮ್ಮ ಮಾನಸಿಕ ಒತ್ತಡ ಮತ್ತು ಮೆದುಳಿನ ಆರೋಗ್ಯದ ಮೇಲೆ ನೀವು ಸೇವಿಸುವ ಆಹಾರ ಕೂಡ ಪರಿಣಾಮ ಬೀರಬಹುದು. ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆಹಾರವನ್ನು ದೀರ್ಘಕಾಲದವರೆಗೆ ಇಟ್ಟು ಸೇವಿಸುವುದರಿಂದ ನಿಮ್ಮ ಒತ್ತಡದ ಮಟ್ಟಗಳ ಮೇಲೆ ಪರಿಣಾಮ ಬೀರಬಹುದು. ಕಡಿಮೆ ಶಕ್ತಿಯ ಮಟ್ಟಗಳು ಮತ್ತು ಕಡಿಮೆ ಉತ್ಪಾದಕತೆ ನಿಮ್ಮ ಆಹಾರದಲ್ಲಿ ಕೆಲವು ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ನಂತರ ನೀವು ತೀವ್ರ ಒತ್ತಡವನ್ನು ಅನುಭವಿಸಿದರೆ ಸಂಶೋಧನೆಯ ಪ್ರಕಾರ ನಿಮ್ಮ ಒತ್ತಡದ ಮಟ್ಟವನ್ನು ನಿರ್ವಹಿಸಲು ಸಹಾಯಕವಾದ ಮೆಗ್ನೀಸಿಯಮ್, ಸತು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಿಯಾಸಿನ್ ಸೇವನೆ ಸಾಕಾಗುತ್ತಿಲ್ಲ ಎಂದು ಅರ್ಥ.
ಸಂಶೋಧನೆಯ ಪ್ರಕಾರ, ನಮ್ಮ ಕರುಳಿನಲ್ಲಿರುವ ಕರುಳಿನ ಮೈಕ್ರೋಬಯೋಟಾ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳಿಂದ ಮಾಡಲ್ಪಟ್ಟಿದೆ. ಇದು ನೀವು ದಿನವೂ ಏನು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಆಹಾರವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಆದರೆ ಅನಾರೋಗ್ಯಕರ ಆಹಾರ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನೀವು ಒತ್ತಡವನ್ನು ಅನುಭವಿಸುವಂತೆ ಮಾಡುತ್ತದೆ.
ಇದನ್ನೂ ಓದಿ: ಮಾನಸಿಕ ಒತ್ತಡದಿಂದ ದೇಹದ ತೂಕ ಹೆಚ್ಚಾಗಲು ಕಾರಣವೇನು?
ಹೆಚ್ಚಿನ ಒತ್ತಡದ ಲಕ್ಷಣಗಳೆಂದರೆ, ಜೀರ್ಣಕಾರಿ ತೊಂದರೆಗಳು, ತೂಕ ಹೆಚ್ಚಾಗುವುದು ಅಥವಾ ಅಧಿಕ ರಕ್ತದೊತ್ತಡ.
ಜೀರ್ಣಕಾರಿ ಸಮಸ್ಯೆಗಳು: ಒತ್ತಡವು ಜೀರ್ಣಕ್ರಿಯೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ.
ತೂಕ ಹೆಚ್ಚಾಗುವುದು: ಹೆಚ್ಚಿದ ಒತ್ತಡದ ಹಾರ್ಮೋನುಗಳು ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಅಧಿಕ ರಕ್ತದೊತ್ತಡ: ಪೋಷಕಾಂಶಗಳನ್ನು ಸಾಗಿಸಲು ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ.
ಅಧಿಕ ರಕ್ತದ ಸಕ್ಕರೆ ಮಟ್ಟ: ಗ್ಲೂಕೋಸ್ ಅನ್ನು ಹೆಚ್ಚುವರಿ ಶಕ್ತಿಯ ಮೂಲವಾಗಿ ಪರಿವರ್ತಿಸುತ್ತದೆ.
ಕೆಲವು ಹಣ್ಣುಗಳು ಮತ್ತು ತರಕಾರಿಗಳು ದೇಹದ ಒತ್ತಡದ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ನಿಮ್ಮನ್ನು ಹೆಚ್ಚು ಶಕ್ತಿಯುತರನ್ನಾಗಿ ಮಾಡುತ್ತದೆ.
ಇದನ್ನೂ ಓದಿ: ಕಂಪ್ಯೂಟರ್, ಮೊಬೈಲ್ ಒತ್ತಡದಿಂದ ನಮ್ಮ ಕಣ್ಣನ್ನು ಕಾಪಾಡುವುದು ಹೇಗೆ?
ಒತ್ತಡವನ್ನು ನಿವಾರಿಸಲು ಸಹಾಯ ಮಾಡುವ ಆಹಾರಗಳು ಇಲ್ಲಿವೆ…
ಬೀಟ್ರೂಟ್:
ಬೀಟ್‌ರೂಟ್‌ಗಳಲ್ಲಿ ನೈಟ್ರಿಕ್ ಆಕ್ಸೈಡ್ ಅಧಿಕವಾಗಿದ್ದು, ಇದು ರಕ್ತದ ಹರಿವಿಗೆ ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನಿಮ್ಮ ಮೆಚ್ಚಿನ ತರಕಾರಿಗಳ ಜೊತೆ ಬೀಟ್ರೂಟ್ ಗೆಡ್ಡೆಗಳನ್ನು ಸೇರಿಸಿ ಸೇವಿಸಿ.
ಬೆರಿ ಹಣ್ಣುಗಳು:
ಬೆರಿ ಹಣ್ಣುಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅರಿವಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವು ಮೆದುಳನ್ನು ರಕ್ಷಿಸಲು ಮತ್ತು ಉತ್ತಮ ಮನಸ್ಥಿತಿಯನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸ್ಮೂಥಿಗಳು ಮತ್ತು ಓಟ್ಮೀಲ್ಗೆ ಸೇರಿಸಿ ಕೂಡ ಸೇವಿಸಬಹುದು.
ಅವಕಾಡೊ:
ಮೊನೊಸ್ಯಾಚುರೇಟೆಡ್ ಕೊಬ್ಬು ಸಮೃದ್ಧವಾಗಿರುವ ಅವಕಾಡೊ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಒತ್ತಡದ ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅವಕಾಡೊ ಸಮತೋಲಿತ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದಾಳಿಂಬೆ:
ದಾಳಿಂಬೆ ಒತ್ತಡದ ಸಮಯದಲ್ಲಿ ಸಂಭವಿಸುವ ಆಕ್ಸಿಡೇಟಿವ್ ಹಾನಿಯ ವಿರುದ್ಧ ಹೋರಾಡುತ್ತದೆ. ದಾಳಿಂಬೆ ರಸದ ನಿಯಮಿತ ಸೇವನೆಯು ಖಿನ್ನತೆಯನ್ನು ಶಮನ ಮಾಡುವ ಗುಣ ಹೊಂದಿದೆ. ದಾಳಿಂಬೆಯನ್ನು ಮೊಸರು ಮತ್ತು ಸಲಾಡ್‌ಗೆ ಸೇರಿಸಿ ಸೇವಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ