ತೂಕ ಇಳಿಸಿಕೊಳ್ಳಲು ನೀವು ಏನೇನೋ ಸರ್ಕಸ್ಗಳನ್ನು ಮಾಡಿದರೂ ತೂಕ ಮಾತ್ರ ಇಳಿಯುತ್ತಿಲ್ಲ ಎಂದು ಬೇಸರಗೊಂಡಿದ್ದೀರಾ? ಹಾಗಾದರೆ, ನಿಮ್ಮ ಆಹಾರ ಅಥವಾ ಜೀವನಶೈಲಿಯಲ್ಲೇ ಏನೋ ಸಮಸ್ಯೆ ಇರಬಹುದು. ಕೆಲವೊಮ್ಮೆ ನೀವು ಮಾಡುವ ಸಣ್ಣ ತಪ್ಪು ಕೂಡ ನಿಮ್ಮ ಪ್ರಯತ್ನವನ್ನು ಕೆಡಿಸಿಬಿಡುತ್ತದೆ.
ಅಂತಹ ತಪ್ಪುಗಳಲ್ಲಿ ಆಲ್ಕೊಹಾಲ್ ಸೇವನೆ ಕೂಡ ಒಂದು. ಏನೇ ಡಯೆಟ್, ವರ್ಕ್ಔಟ್ ಮಾಡಿದರೂ ನಿಮ್ಮ ತೂಕ ಕಡಿಮೆಯಾಗುತ್ತಿಲ್ಲ ಎಂದಾದರೆ ನೀವು ಸೇವಿಸುವ ಆಲ್ಕೋಹಾಲ್ ನಿಮ್ಮ ತೂಕದ ಮೇಲೆ ಪರಿಣಾಮ ಬೀರುತ್ತಿರಬಹುದು. ಆಲ್ಕೋಹಾಲ್ ಪ್ರತಿ ಗ್ರಾಂಗೆ ಏಳು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಒಂದು ದೊಡ್ಡ ಗ್ಲಾಸ್ ವೈಟ್ ವೈನ್ ಐಸ್ ಕ್ರೀಂನಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಒಂದು ಪಿಂಟ್ ಬಿಯರ್ ಚಾಕೊಲೇಟ್ ಬಾರ್‌ನಷ್ಟೇ ಕೊಬ್ಬಿನಾಂಶ ಹೊಂದಿರುತ್ತದೆ. ಹೀಗಾಗಿ, ನಿಮಗೆ ಗೊತ್ತಿಲ್ಲದೇ ನೀವು ಕ್ಯಾಲೋರಿಗಳನ್ನು ಸೇವಿಸುತ್ತಿರಬಹುದು. ಇದರಿಂದಲೇ ನಿಮ್ಮ ತೂಕ ಹೆಚ್ಚಾಗುತ್ತಿರಬಹುದು.
ಇದನ್ನೂ ಓದಿ: Health Tips: ಆಲ್ಕೋಹಾಲ್ ಸೇವನೆಯು ದೇಹದ ದೀರ್ಘಕಾಲ ನೋವಿಗೆ ಕಾರಣವಾಗುತ್ತದೆ: ಅಧ್ಯಯನ
ಆಲ್ಕೊಹಾಲ್ ನಿಮ್ಮ ತೂಕದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:
ನೀವು ಏನು ಕುಡಿಯುತ್ತೀರಿ, ಎಷ್ಟು ಬಾರಿ ಕುಡಿಯುತ್ತೀರಿ ಸೇರಿದಂತೆ ವಿವಿಧ ಅಂಶಗಳು ನಿಮ್ಮ ತೂಕದ ಮೇಲೆ ಆಲ್ಕೋಹಾಲ್ ಪರಿಣಾಮವನ್ನು ನಿರ್ಧರಿಸುತ್ತವೆ. ಆಲ್ಕೊಹಾಲ್ ಕೆಲವು ವ್ಯಕ್ತಿಗಳಿಗೆ ಸ್ಥೂಲಕಾಯತೆಗೆ ಅಪಾಯಕಾರಿ ಅಂಶವಾಗಿದೆ ಎಂದು ಅಧ್ಯಯನವು ತಿಳಿಸಿದೆ. ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ಸೇವಿಸಿದಾಗ ಆಲ್ಕೋಹಾಲ್ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಾಗುವುದರ ಜೊತೆಗೆ ಇನ್ನಷ್ಟು ಸಮಸ್ಯೆಗಳನ್ನು ಕೂಡ ಉಂಟುಮಾಡಬಹುದು.
ಆಲ್ಕೋಹಾಲ್ ಸೇವನೆಯಿಂದ ತೂಕ ಹೆಚ್ಚಾಗಲು ಹಲವು ಕಾರಣಗಳಿವೆ. ಅವುಗಳೆಂದರೆ,
– ಆಲ್ಕೋಹಾಲ್ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಜೊತೆಗೆ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯನ್ನು ಕೂಡ ಹೊಂದಿರುತ್ತವೆ.
– ಅಂಗಗಳು ಮತ್ತು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಯಕೃತ್ತು ನಿಮ್ಮ ದೇಹಕ್ಕೆ ಪ್ರವೇಶಿಸುವ ಎಲ್ಲ ಪದಾರ್ಥಗಳಿಗೆ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಆಲ್ಕೋಹಾಲ್ ಸೇವನೆಯು ಕೊಬ್ಬಿನಾಂಶವನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಹಾರ್ಮೋನುಗಳು ಅತ್ಯಗತ್ಯ. ಮದ್ಯಪಾನವು ಕೆಲವೊಮ್ಮೆ ಕೆಲವು ಹಾರ್ಮೋನುಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ದುರ್ಬಲಗೊಳಿಸುತ್ತದೆ.
ಇದನ್ನೂ ಓದಿ: Heart Health: ನಿಮ್ಮ ಹೃದಯದ ಆರೋಗ್ಯಕ್ಕೆ ದಿನಕ್ಕೆ 50 ಮೆಟ್ಟಿಲು ಹತ್ತಿ
– ಆಲ್ಕೋಹಾಲ್ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗಬಹುದು. ಹೆಚ್ಚು ಹಾರ್ಡ್ ಆಗಿರುವ ಆಲ್ಕೋಹಾಲ್ ಸೇವನೆಯು ನಿಮ್ಮ ನಿದ್ರೆಗೆ ಅಡ್ಡಿಪಡಿಸಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ರಾತ್ರಿಯ ನಿದ್ರೆಯನ್ನು ಪಡೆಯುವುದು ಅತ್ಯಗತ್ಯ.
– ಹಸಿವನ್ನು ಹೆಚ್ಚಿಸುತ್ತದೆ. ಆಲ್ಕೋಹಾಲ್ ಸೇವನೆಯ ಬಳಿಕ ಏನಾದರೂ ತಿನ್ನಬೇಕೆಂಬ ಆಸೆ ಹೆಚ್ಚಾಗುತ್ತದೆ. ಆಲ್ಕೋಹಾಲ್ ಹಸಿವನ್ನು ನಿಯಂತ್ರಿಸುವ ಮೆದುಳಿನ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ. ಇದು ಇನ್ನಷ್ಟು ಕಡುಬಯಕೆಗಳಿಗೆ ಕಾರಣವಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ