ನಬೀಜ್ ಮುಸ್ಲಿಮರ ಸಾಂಪ್ರದಾಯಿಕ ಪಾನೀಯವಾಗಿದ್ದು, ಅದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಪ್ರವಾದಿ ಮುಹಮ್ಮದ್ ಅವರ ಅಚ್ಚುಮೆಚ್ಚಿನ ಪಾನೀಯವಾಗಿತ್ತು ಎಂದು ಹೇಳಲಾಗುತ್ತದೆ. ರಾತ್ರಿಯಿಡೀ ನೀರಿನಲ್ಲಿ ವಿವಿಧ ಪದಾರ್ಥಗಳನ್ನು ನೆನೆಸಿಟ್ಟು ಬೆಳಗ್ಗೆ ಈ ಪಾನೀಯ ತಯಾರಿಸಲಾಗುತ್ತದೆ. ಇದರ ಪಾಕವಿಧಾನ ಬದಲಾಗಬಹುದಾದರೂ ನಬೀಜ್ ವಿಶೇಷವಾಗಿ ಹಣ್ಣುಗಳು, ಗಿಡಮೂಲಿಕೆಗಳು ಮತ್ತು ಜೇನುತುಪ್ಪವನ್ನು ಒಳಗೊಂಡಿರುತ್ತದೆ.
ನಬೀಜ್ ಸೇವನೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಜೀರ್ಣಕ್ರಿಯೆಗೆ ಸಹಕಾರಿ:
ನಬೀಜ್ ಪಾನೀಯದಲ್ಲಿರುವ ಕೆಲವು ಗಿಡಮೂಲಿಕೆಗಳು, ಹಣ್ಣುಗಳು ಮತ್ತು ಬೀಜಗಳಿಂದಾಗಿ ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ.
ಇದನ್ನೂ ಓದಿ: ಚಹಾವನ್ನು ಮತ್ತೆ ಮತ್ತೆ ಕುದಿಸಿ ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
ನಿರ್ವಿಶೀಕರಣ:
ದೇಹದಿಂದ ವಿಷವನ್ನು ತೆಗೆದುಹಾಕುವ ಮೂಲಕ ನಬೀಜ್ ಎಂಬ ಈ ಪಾನೀಯ ನಿರ್ವಿಶೀಕರಣ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ:
ನಬೀಜ್‌ನಲ್ಲಿ ಸೇರಿಸಲಾದ ಕೆಲವು ಗಿಡಮೂಲಿಕೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ:
ಹಣ್ಣುಗಳು ಮತ್ತು ಗಿಡಮೂಲಿಕೆಗಳಲ್ಲಿ ಹೇರಳವಾಗಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಿಂದ ಸ್ವತಂತ್ರ ರಾಡಿಕಲ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ.
ಇದನ್ನೂ ಓದಿ: ಈ ಸಮಸ್ಯೆಯಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಕಾಫಿ ಕುಡಿಯಬೇಡಿ
ರೋಗನಿರೋಧಕ ಶಕ್ತಿ ಹೆಚ್ಚಳ:
ನಬೀಜ್ ಪ್ರಯೋಜನಗಳು ಪೋಷಕಾಂಶಭರಿತವಾದ ಘಟಕಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ವಿಶೇಷವಾಗಿ ವಿಟಮಿನ್ ಸಿ ಮತ್ತು ಇತರ ರೀತಿಯ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಶಕ್ತಿ ವರ್ಧಕ:
ನಬೀಜ್ ಉತ್ತಮ ರುಚಿ ಮತ್ತು ನೈಸರ್ಗಿಕ ಹಣ್ಣಿನ ಸಕ್ಕರೆ ಅಂಶಗಳನ್ನು ಹೊಂದಿದ್ದು ಇದು ನಿಮಗೆ ನೈಸರ್ಗಿಕ ಶಕ್ತಿಯನ್ನು ನೀಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ