Health: ಯಾವುದೇ ಅಡ್ಡಪರಿಣಾಮಗಳಿಲ್ಲದ, ಆರೋಗ್ಯಕ್ಕೆ ಹಿತವಾದ ಈ ಭಾರತೀಯ ಖಾದ್ಯಗಳು ನಿಮ್ಮ ಆಯ್ಕೆಯಾಗಿರಲಿ

Indian Food: ಫಾಸ್ಟ್​​ಫುಡ್​ಗಳ ಮೊರೆ ಹೋಗುವ ಬದಲು ಭಾರತೀಯ ತಿನಿಸುಗಳನ್ನೇ ಆಯ್ದುಕೊಳ್ಳಬಹುದು. ಯಾವುದೇ ಅಡ್ಡಪರಿಣಾಮಗಳಿಲ್ಲದ, ತೂಕವನ್ನೂ ಹೆಚ್ಚಿಸದ ಈ ಆಹಾರಗಳು ನಿಮ್ಮ ಆಯ್ಕೆಯಾಗಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

Health: ಯಾವುದೇ ಅಡ್ಡಪರಿಣಾಮಗಳಿಲ್ಲದ, ಆರೋಗ್ಯಕ್ಕೆ ಹಿತವಾದ ಈ ಭಾರತೀಯ ಖಾದ್ಯಗಳು ನಿಮ್ಮ ಆಯ್ಕೆಯಾಗಿರಲಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Apr 24, 2022 | 10:19 AM

ಈಗಿನ ಕಾಲಮಾನದಲ್ಲಿ ಕೆಲಸದ ಒತ್ತಡದ ನಡುವೆ ತಿನ್ನುವ ಆಹಾರವನ್ನು ತಯಾರಿಸಲೂ ಹಲವು ಬಾರಿ ಸಮಯವಿರುವುದಿಲ್ಲ. ಹೀಗಾಗಿಯೇ ಜನರಿಗೆ ಸಹಾಯಕವಾಗುವಂತೆ ಸಿದ್ಧಪಡಿಸುವ ಫಾಸ್ಟ್​ಫುಡ್​ಗಳು, ಐಸ್​ಕ್ರೀಮ್​, ಕೇಕ್, ಪಿಜ್ಜಾ ಮೊದಲಾದ ತತ್​ಕ್ಷಣ ಸಿಗುವ ತಿನಿಸುಗಳಿಗೆ ಜನರು ಮೊರೆಹೋಗುತ್ತಾರೆ. ಇವು ಆಯಾ ಕ್ಷಣದ ಹಸಿವನ್ನು ನೀಗಿಸಿದರೂ ಕೂಡ, ಆರೋಗ್ಯದ ವಿಚಾರಕ್ಕೆ ಬಂದಾಗ ಉತ್ತಮ ಆಯ್ಕೆಗಳಾಗಿರುವುದಿಲ್ಲ. ಅಪರೂಪಕ್ಕೊಮ್ಮೆ ಇಂತಹ ತಿನಿಸುಗಳ ಸೇವನೆ ಹಿತಕಾರಿಯಾದರೂ, ಸದಾ ಇದನ್ನೇ ಅವಲಂಬಿಸುವುದು ದೀರ್ಘಕಾಲಿಕವಾಗಿ ಉತ್ತಮವಲ್ಲ ಎನ್ನುತ್ತಾರೆ ಆಹಾರ ತಜ್ಞರು. ಆದರೆ ನೀವು ಇಂತಹ ಫಾಸ್ಟ್​​ಫುಡ್​ಗಳ ಮೊರೆ ಹೋಗುವ ಬದಲು ಭಾರತೀಯ ಖಾದ್ಯಗಳನ್ನೇ (Indian Food) ಆಯ್ದುಕೊಳ್ಳಬಹುದು. ಯಾವುದೇ ಅಡ್ಡಪರಿಣಾಮಗಳಿಲ್ಲದ, ತೂಕವನ್ನೂ ಹೆಚ್ಚಿಸದ ಈ ಆಹಾರಗಳು ನಿಮ್ಮ ಆಯ್ಕೆಯಾಗಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

1. ಭೇಲ್​ಪುರಿ: ಹೆಚ್ಚಿನ ಸಾಸ್, ಕರಿದ ಪದಾರ್ಥಗಳನ್ನು ಹೊಂದಿದ ಭೇಲ್​ಪುರಿಯ ಬಗ್ಗೆ ಇಲ್ಲಿ ಹೇಳುತ್ತಿಲ್ಲ. ಬದಲಾಗಿ ಮನೆಯಲ್ಲಿರುವ ಸಾದಾ ಪದಾರ್ಥಗಳನ್ನು ಹಾಕಿ ತಯಾರಿಸಿದ ಭೇಲ್​ಪುರಿ ನಿಮ್ಮ ಆಯ್ಕೆಯಾಗಿರಲಿ. ತರಕಾರಿ, ನಿಂಬೆ ರಸ, ಟೊಮಾಟೋ ಮೊದಲಾದವುಗಳಿಂದ ತಯಾರಿಸಿದ ಭೇಲ್​ಪುರಿಯಲ್ಲಿ ಪ್ರೊಟೀನ್ ಸಮೃದ್ಧವಾಗಿರದಿದ್ದರೂ, ಫೈಬರ್ ಹಾಗೂ ಇತರ ಪೋಷಕಾಂಶಗಳಿರುತ್ತವೆ.

2.ರಸಂ/ ದಾಲ್: ಭಾರತದ ಉತ್ತರ ಮತ್ತು ದಕ್ಷಿಣ ರಾಜ್ಯಗಳಲ್ಲಿ ಸೇವಿಸುವ ಜನಪ್ರಿಯ ಖಾದ್ಯಗಳಾದ ರಸಂ ಮತ್ತು ದಾಲ್ ರುಚಿಕರವಷ್ಟೇ ಅಲ್ಲ, ಪ್ರೋಟೀನ್‌ನಲ್ಲಿಯೂ ಸಮೃದ್ಧವಾಗಿದೆ. ಈ ಆಹಾರ ತಿನ್ನುವುದರಿಂದ ದೇಹವು ಆರೋಗ್ಯಕರವಾಗಿ ಇರುವುದಲ್ಲದೇ, ಸಂತೃಪ್ತವಾಗಿರಲೂ ಸಹಾಯಕ.

3. ಖಿಚಡಿ: ಖಿಚಡಿಯನ್ನು ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಅದು ಅತ್ಯಂತ ಪೌಷ್ಠಿಕವಾಗಿರುತ್ತದೆ. ಆದ್ದರಿಂದಲೇ ಖಿಚಡಿಯನ್ನೂ ಕೂಡ ನೀವು ಫಾಸ್ಟ್​​ಫುಡ್​ಗಳ ಬದಲು ಸೇವಿಸಬಹುದು.

4. ಇಡ್ಲಿ ಸಾಂಬಾರ್: ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಖಾದ್ಯ ಇಡ್ಲಿ ನಮ್ಮ ನೆಲದಲ್ಲೇ ರೂಪುತಳೆದಿದ್ದು. ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದಾದ ಇದು ಆರಾಮದಾಯಕ ಆಹಾರವೆಂದೇ ಪ್ರಸಿದ್ಧವಾಗಿದೆ. ಇದರಲ್ಲಿ ಫೈಬರ್, ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ.

ಇದನ್ನೂ ಓದಿ: ‘ಬಾಹುಬಲಿ ಮೊಮೊ’ ಚಿನ್ನದ ಲೇಪನದಿಂದ ತಯಾರಾದ ತಿನಿಸು ಎಂದಾದರೂ ತಿಂದಿದ್ದೀರಾ? ಬೆಲೆ ನೋಡಿ ದಂಗಾಗ್ಬೇಡಿ!

Health Tips: ರೆಫ್ರಿಜರೇಟರ್‌ನಲ್ಲಿ ಯಾವತ್ತೂ ಈ ಆಹಾರಗಳನ್ನು ಇಡಬಾರದು..!

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್