AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Water After Fruits: ಈ 5 ಹಣ್ಣುಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬೇಡಿ

ಹಣ್ಣುಗಳನ್ನು ತಿಂದು ಅದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು, ನೀವು ಅವುಗಳನ್ನು ತಿನ್ನಲು ಸರಿಯಾದ ಸಮಯ, ಸರಿಯಾದ ಪ್ರಮಾಣ ಮತ್ತು ಹಣ್ಣುಗಳೊಂದಿಗೆ ಯಾವ ಆಹಾರವನ್ನು ಸೇವಿಸಬಾರದು ಎಂದು ತಿಳಿದಿರಬೇಕು. ಅನೇಕ ಜನರು ಆಹಾರದೊಂದಿಗೆಯೇ ರಾತ್ರಿಯಲ್ಲಿ ಅಥವಾ ಮಧ್ಯಾಹ್ನ ಯಾವುದಾದರೂ ಹಣ್ಣುಗಳನ್ನು ತಿನ್ನುತ್ತಾರೆ. ಹಣ್ಣುಗಳನ್ನು ತಿನ್ನುವ ಈ ವಿಧಾನವು ಸಂಪೂರ್ಣವಾಗಿ ತಪ್ಪು.

Water After Fruits: ಈ 5 ಹಣ್ಣುಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬೇಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Dec 19, 2024 | 3:12 PM

Share

ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಣ್ಣುಗಳು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಫೈಬರ್, ಕ್ಯಾಲ್ಸಿಯಂ, ಕಬ್ಬಿಣದಂತಹ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ನಮ್ಮಲ್ಲಿ ವಿವಿಧ ರೀತಿಯ ಹಣ್ಣುಗಳಿವೆ ಮತ್ತು ಪ್ರತಿಯೊಂದೂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಹಣ್ಣುಗಳನ್ನು ತಿಂದು ಅದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು, ನೀವು ಅವುಗಳನ್ನು ತಿನ್ನಲು ಸರಿಯಾದ ಸಮಯ, ಸರಿಯಾದ ಪ್ರಮಾಣ ಮತ್ತು ಹಣ್ಣುಗಳೊಂದಿಗೆ ಯಾವ ಆಹಾರವನ್ನು ಸೇವಿಸಬಾರದು ಎಂದು ತಿಳಿದಿರಬೇಕು.

ಅನೇಕ ಜನರು ಆಹಾರದೊಂದಿಗೆಯೇ ರಾತ್ರಿಯಲ್ಲಿ ಅಥವಾ ಮಧ್ಯಾಹ್ನ ಯಾವುದಾದರೂ ಹಣ್ಣುಗಳನ್ನು ತಿನ್ನುತ್ತಾರೆ. ಹಣ್ಣುಗಳನ್ನು ತಿನ್ನುವ ಈ ವಿಧಾನವು ಸಂಪೂರ್ಣವಾಗಿ ತಪ್ಪು. ಅದೇ ರೀತಿ, ಅನೇಕ ಜನರು ಹಣ್ಣುಗಳನ್ನು ತಿಂದ ನಂತರ ಸಾಕಷ್ಟು ನೀರು ಕುಡಿಯುತ್ತಾರೆ. ಈ ತಪ್ಪು ನಿಮಗೆ ದುಬಾರಿಯಾಗಬಹುದು. ನವ್​ಭಾರತ್ ಟೈಮ್ಸ್ ಕೆಲವು ಹಣ್ಣುಗಳನ್ನು ತಿಂದ ನಂತರ ನೀವು ತಪ್ಪಿಯೂ ನೀರು ಕುಡಿಯಬಾರದು ಎಂದು ಡಾ. ವಿನೋದ್ ಶರ್ಮಾ ಅವರು ನೀಡಿರುವ ಮಾಹಿತಿಯನ್ನು ಹಂಚಿಕೊಂಡಿದೆ.

ದಾಳಿಂಬೆ

ದಾಳಿಂಬೆ ಎಲ್ಲರಿಗೂ ಇಷ್ಟವಾಗುವ ಹಣ್ಣು. ಈ ಸಿಹಿ ಮತ್ತು ಕೆಂಪು ಬೀಜದ ಹಣ್ಣು ದೇಹದ ಆರೋಗ್ಯವನ್ನು ಹೆಚ್ಚಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ತಿಂದ ನಂತರ ನೀರು ಕುಡಿಯಬಾರದು. ಹೀಗೆ ಮಾಡಿದರೆ ವಾಕರಿಕೆ, ಆಮ್ಲೀಯತೆ ಮತ್ತು ವಾಂತಿ ಉಂಟಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು ಶಕ್ತಿಯ ಪ್ರಬಲ ಮೂಲವಾಗಿದೆ ಮತ್ತು ಪೊಟ್ಯಾಸಿಯಮ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಬಾಳೆಹಣ್ಣು ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆಯಾದರೂ, ತಿಂದ ನಂತರ ನೀರು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ.

ಇದನ್ನೂ ಓದಿ: ಪ್ರತಿದಿನ ಪೇರಳೆ ಎಲೆಗಳನ್ನು ಜಗಿದರೆ ಏನೆಲ್ಲ ಪ್ರಯೋಜನ ಇದೆ?: ಇಲ್ಲಿದೆ ಆರು ಉಪಯೋಗ

ಸಿಟ್ರಸ್ ಹಣ್ಣುಗಳು

ಕಿತ್ತಳೆ, ಆಮ್ಲಾ, ದ್ರಾಕ್ಷಿ, ಮಾವುಸಂಬಿ ಇತ್ಯಾದಿ ಹುಳಿ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವ ತಪ್ಪು ಮಾಡಬಾರದು. ಇದನ್ನು ಮಾಡುವುದರಿಂದ, ನಿಮ್ಮ ದೇಹದ ಪಿಹೆಚ್ ಮಟ್ಟವು ಹದಗೆಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಹ ತೊಂದರೆಗೊಳಗಾಗುತ್ತದೆ.

ಕಲ್ಲಂಗಡಿ

ಕೆಂಪು ಕಲ್ಲಂಗಡಿ, ಇದು ಸ್ವತಃ ನೀರಿನ ಹಣ್ಣು. ಕಲ್ಲಂಗಡಿ ತಿಂದ ಮೇಲೆ ನೀರು ಕುಡಿಯಬಾರದು ಎಂದು ವೈದ್ಯರು ನಂಬುತ್ತಾರೆ. ಇದನ್ನು ಮಾಡುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ತೊಂದರೆಗೊಳಗಾಗಬಹುದು.

ಪೇರಳೆ

ಫೈಬರ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಹೊರತುಪಡಿಸಿ, ಪೇರಳೆಯು ಫೋಲಿಕ್ ಆಮ್ಲ, ಪೊಟ್ಯಾಸಿಯಮ್ ಮತ್ತು ತಾಮ್ರದ ಉತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಇದನ್ನು ತಿಂದ ಮೇಲೆ ನೀರು ಕುಡಿದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹದಗೆಡುತ್ತದೆ.

(ಸೂಚನೆ: ಇಲ್ಲಿರುವ ವಿಷಯಗಳು ಕೇವಲ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ರೀತಿಯ ಸಂದೇಹಗಳಿದ್ದರೂ ತಜ್ಞರನ್ನು ಸಂಪರ್ಕಿಸಿ.)

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Thu, 19 December 24