Asthama: ಅಸ್ತಮಾ ತೊಂದರೆ ಇದೆಯೇ?; ಈ ವಿಷಯಗಳನ್ನು ಮರೆಯಬೇಡಿ
ಚಳಿಗಾಲದಲ್ಲಿ ಮಕ್ಕಳಿಗೆ ಶೀತ, ಕೆಮ್ಮು, ಉಸಿರಾಟದ ತೊಂದರೆ ಹೆಚ್ಚಾಗುತ್ತದೆ. ಅದರಲ್ಲೂ ಅಸ್ತಮಾದಂತಹ ಆರೋಗ್ಯ ಸಮಸ್ಯೆ ಇದ್ದರೆ ಅದು ಚಳಿಗಾಲದಲ್ಲಿ ಉಲ್ಬಣಗೊಳ್ಳುವುದು ಸಾಮಾನ್ಯ. ಮಕ್ಕಳಿಗೆ ಮಾತ್ರವಲ್ಲ; ದೊಡ್ಡವರು ಕೂಡ ಅಸ್ತಮಾದಿಂದ ತೀವ್ರ ತೊಂದರೆಗಳನ್ನು ಅನುಭವಿಸುತ್ತಾರೆ. ನಿಮಗೂ ಕೂಡ ಅಸ್ತಮಾದ ಸಮಸ್ಯೆಯಿದ್ದರೆ ಈ ಕೆಳಗಿನ ವಿಷಯಗಳನ್ನು ನಿರ್ಲಕ್ಷ್ಯ ಮಾಡಬೇಡಿ.

ಚಳಿಗಾಲ ಆರಾಮದಾಯಕವಾದ ಋತುಗಳಲ್ಲಿ ಒಂದು. ಈ ಚಳಿಗಾಲದ ಚಳಿಯನ್ನು ಬಹಳಷ್ಟು ಜನರು ಎಂಜಾಯ್ ಮಾಡುತ್ತಾರೆ. ಆದರೆ, ಈ ಸಮಯದಲ್ಲಿ ಶೀತ, ಕೆಟ್ಟ ಕೆಮ್ಮು ಮತ್ತು ಹವಾಮಾನ ಬದಲಾವಣೆಯ ನಡುವೆ ಉಸಿರಾಟದ ತೊಂದರೆಗಳು ಕೂಡ ಉಂಟಾಗುತ್ತವೆ. ಈ ಚಳಿಗಾಲದಲ್ಲಿ ಅಲರ್ಜಿಯ ಲಕ್ಷಣಗಳು ಹದಗೆಡುತ್ತವೆ. ಆದ್ದರಿಂದ ಈ ಅವಧಿಯಲ್ಲಿ ಉಸಿರಾಟದ ತೊಂದರೆಗಳು ಉಂಟಾಗುವುದು ಸಹಜ. ಅಸ್ತಮಾ (Asthama) ಹೊಂದಿರುವ ಮಕ್ಕಳಿಗೆ ಚಳಿಗಾಲ ಆತಂಕಕಾರಿ ಸಮಯವಾಗಿದೆ.
ಚಳಿಗಾಲದ ಗಾಳಿಯು ಶೀತ ಮತ್ತು ಶುಷ್ಕವಾಗಿರುತ್ತದೆ. ಆಸ್ತಮಾ ಹೊಂದಿರುವ ಮಕ್ಕಳ ಶ್ವಾಸಕೋಶವನ್ನು ಇದು ಕಿರಿಕಿರಿಗೊಳಿಸುತ್ತದೆ. ಇದು ಕೆಮ್ಮುವಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಆದಷ್ಟೂ ಬೆಚ್ಚಗಿನ ಉಡುಪು ಧರಿಸಿ. ಈ ಸಮಯದಲ್ಲಿ ಹೆಚ್ಚು ಧೂಳಿರುವ ಜಾಗಕ್ಕೆ ಹೋಗಬೇಡಿ. ಹೊರಗೆ ಹೋಗುವಾಗ ಕಿವಿ, ಕೈ, ಕಾಲುಗಳನ್ನು ಬೆಚ್ಚಗಿರಿಸಿಕೊಳ್ಳಿ.
ಇದನ್ನೂ ಓದಿ: ಚಳಿಗಾಲದಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದೀರಾ? ಇಲ್ಲಿದೆ ಸುಲಭ ಪರಿಹಾರ
ಚಳಿಗಾಲದಲ್ಲಿ ಹೊಗೆಯನ್ನು ತಪ್ಪಿಸುವುದು, ನಿಯಮಿತ ನಿರ್ವಾತ ಶುಚಿಗೊಳಿಸುವಿಕೆ, ಹಾಸಿಗೆ ಮತ್ತು ಪರದೆಗಳನ್ನು ಬಿಸಿನೀರಿನಲ್ಲಿ ತೊಳೆಯುವುದು ಅಗತ್ಯ ಹಂತಗಳಾಗಿವೆ. ನಿಮ್ಮ ವಯಸ್ಸಿಗೆ ಸೂಕ್ತವಾದ ಫ್ಲೂ ಮತ್ತು ಕೋವಿಡ್ ಲಸಿಕೆಗಳನ್ನು ಒಳಗೊಂಡಂತೆ ವ್ಯಾಕ್ಸಿನೇಷನ್ ಅನ್ನು ಹಾಕಿಸಿಕೊಳ್ಳುವುದು ಬಹಳ ಮುಖ್ಯ. ಉಸಿರಾಟದ ಸೋಂಕುಗಳನ್ನು ತಡೆಗಟ್ಟುವಲ್ಲಿ ಕೈಗಳ ನೈರ್ಮಲ್ಯ ಮತ್ತು ಮಾಸ್ಕ್ಗಳ ಬಳಕೆಯು ಅತ್ಯಂತ ಮಹತ್ವದ್ದಾಗಿದೆ. ಹಾಗೇ, ಉಸಿರಾಟದ ಸೋಂಕು ಇರುವವರೊಂದಿಗೆ ಸಂಪರ್ಕದಿಂದ ದೂರ ಇರುವುದು ಅವಶ್ಯಕ.
ಇದನ್ನೂ ಓದಿ: Asthma: ಅಸ್ತಮಾ ರೋಗಿಗಳು ಚಳಿಗಾಲದಲ್ಲಿ ವಾಕಿಂಗ್ ಹೋಗುವುದು ಸುರಕ್ಷಿತವೇ?
ಅಸ್ತಮಾ ಸಮಸ್ಯೆ ಇದ್ದರೆ ನಿಮ್ಮ ದೇಹವನ್ನು ಸಾಕಷ್ಟು ಹೈಡ್ರೇಟ್ ಮಾಡುವುದು ಅಗತ್ಯ. ನಿಮ್ಮ ಮಕ್ಕಳ ವೈದ್ಯರೊಂದಿಗೆ ಸಂಪರ್ಕದಲ್ಲಿರಿ. ಚಳಿಗಾಲ ಶುರುವಾಗುವಾಗಲೇ ಎಚ್ಚರಿಕೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ. ಮಗುವಿಗೆ ಬೇಕಾದ ವೈದ್ಯಕೀಯ ವ್ಯವಸ್ಥೆಯನ್ನು ರೆಡಿ ಮಾಡಿಟ್ಟುಕೊಳ್ಳಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




