ಪೈನ್ ಕಿಲ್ಲರ್ ಇಲ್ಲದೆ ನೋವನ್ನು ಕಡಿಮೆ ಮಾಡುವುದು ಹೇಗೆ?; ಇಲ್ಲಿವೆ 5 ಪರಿಹಾರ

ಅರಿಶಿನ ಮತ್ತು ಶುಂಠಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಮತ್ತು ಶುಂಠಿಯಲ್ಲಿರುವ ಜಿಂಜರಾಲ್ ನೈಸರ್ಗಿಕ ನೋವು ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತದೆ. ನೋವನ್ನು ನಿವಾರಿಸಲು ಮತ್ತು ಉತ್ತಮ ಆರೋಗ್ಯವನ್ನು ಪಡೆಯಲು 5 ಪರಿಣಾಮಕಾರಿ ನೈಸರ್ಗಿಕ ವಿಧಾನಗಳು ಇಲ್ಲಿವೆ.

ಪೈನ್ ಕಿಲ್ಲರ್ ಇಲ್ಲದೆ ನೋವನ್ನು ಕಡಿಮೆ ಮಾಡುವುದು ಹೇಗೆ?; ಇಲ್ಲಿವೆ 5 ಪರಿಹಾರ
ನೋವು
Follow us
ಸುಷ್ಮಾ ಚಕ್ರೆ
|

Updated on: Dec 13, 2023 | 2:33 PM

ಆಗಾಗ ಕಾಲು ಉಳುಕುವುದು, ಸೊಂಟ ನೋವು, ತಲೆನೋವು ಮುಂತಾದ ಸಣ್ಣಪುಟ್ಟ ನೋವುಗಳು ಆಗುತ್ತಲೇ ಇರುತ್ತವೆ. ಆದರೆ, ಬಹುತೇಕರು ನೋವಾದಾಗ ಪೈನ್ ಕಿಲ್ಲರ್ ತೆಗೆದುಕೊಳ್ಳುತ್ತಾರೆ. ಈ ಪೈನ್ ಕಿಲ್ಲರ್​ ಮಾತ್ರೆಗಳಿಗೆ ಅಡಿಕ್ಟ್​ ಆಗುತ್ತಾರೆ. ಆದರೆ, ಪೈನ್ ಕಿಲ್ಲರ್ ಸೇವಿಸದೆ ನೈಸರ್ಗಿಕವಾಗಿ ಯಾವ ರೀತಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿದೆ.

ನೋವನ್ನು ನಿವಾರಿಸಲು ಮತ್ತು ಉತ್ತಮ ಆರೋಗ್ಯವನ್ನು ಪಡೆಯಲು 5 ಪರಿಣಾಮಕಾರಿ ನೈಸರ್ಗಿಕ ವಿಧಾನಗಳು ಇಲ್ಲಿವೆ.

ಎಣ್ಣೆಯ ಮಸಾಜ್:

ಅರೋಮಾಥೆರಪಿಯ ಬಗ್ಗೆ ನಿಮಗೆ ಗೊತ್ತಾ? ಲ್ಯಾವೆಂಡರ್, ಪುದೀನಾ ಅಥವಾ ಯೂಕಲಿಪ್ಟಸ್‌ನಂತಹ ಸಾರಭೂತ ತೈಲಗಳ ಬಳಕೆಯ ಮೂಲಕ ಸ್ನಾಯುವಿನ ಒತ್ತಡ ಮತ್ತು ನೋವಿನಿಂದ ಪರಿಹಾರವನ್ನು ಪಡೆಯಬಹುದು. ಸಾರಭೂತ ತೈಲದ ಕೆಲವು ಹನಿಗಳನ್ನು ಬೇರೆ ತೈಲದೊಂದಿಗೆ ಬೆರೆಸಿ, ಅದನ್ನು ನೋವಿರುವ ಜಾಗದಲ್ಲಿ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.

ಇದನ್ನೂ ಓದಿ: ಟೊಮ್ಯಾಟೋ ಹಣ್ಣು ಹೇಗೆ ತೂಕ ಇಳಿಸಲು ಸಹಾಯ ಮಾಡುತ್ತೆ?

ಆಕ್ಯುಪಂಕ್ಚರ್ ಮತ್ತು ಆಕ್ಯುಪ್ರೆಶರ್:

ಸಾಂಪ್ರದಾಯಿಕ ಚೀನೀ ಔಷಧವು ಆಕ್ಯುಪಂಕ್ಚರ್ ಮತ್ತು ಆಕ್ಯುಪ್ರೆಶರ್ ಅನ್ನು ಪರಿಚಯಿಸಿದೆ. ನೋವನ್ನು ನಿವಾರಿಸಲು ದೇಹದಲ್ಲಿ ನಿರ್ದಿಷ್ಟ ಭಾಗಗಳಿರುತ್ತವೆ. ಆ ಜಾಗದ ಮೇಲೆ ಒತ್ತಡ ಹಾಕುವ ಮೂಲಕ ಅಥವಾ ಅದನ್ನು ಪ್ರಚೋದಿಸುವ ಮೂಲಕ ನೋವಿನಿಂದ ಪರಿಹಾರ ಪಡೆಯಬಹುದು. ಈ ಅಭ್ಯಾಸಗಳು ಶಕ್ತಿಯ ಹರಿವನ್ನು ವರ್ಧಿಸುತ್ತದೆ, ಇದನ್ನು ಕ್ವಿ ಎಂದು ಕರೆಯಲಾಗುತ್ತದೆ. ಸೂಕ್ಷ್ಮ ಸೂಜಿಗಳ ಅಳವಡಿಕೆಯ ಮೂಲಕ ಅಥವಾ ಬೆರಳುಗಳಿಂದ ಒತ್ತಡವನ್ನು ಉಂಟುಮಾಡುವ ಮೂಲಕ ನೋವನ್ನು ಕಡಿಮೆ ಮಾಡಬಹುದು.

ಕ್ಯಾಪ್ಸೈಸಿನ್ ಕ್ರೀಮ್:

ಕ್ಯಾಪ್ಸೈಸಿನ್‌ನ ನೋವು ನಿವಾರಕ ಗುಣಲಕ್ಷಣಗಳು ಬಹುತೇಕ ಜನರಿಗೆ ಚಿರಪರಿಚಿತವಾಗಿವೆ. ಇದನ್ನು ಕೆನೆ ರೂಪದಲ್ಲಿ ನೋವು ಇರುವ ಜಾಗಕ್ಕೆ ಹಚ್ಚಿಕೊಂಡಾಗ ಇದು ತಾತ್ಕಾಲಿಕವಾಗಿ ನರ ಗ್ರಾಹಕಗಳನ್ನು ಡಿಸೆನ್ಸಿಟೈಸ್ ಮಾಡುತ್ತದೆ. ಇದು ಸಂಧಿವಾತ ಮತ್ತು ನರರೋಗದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ಅರಿಶಿನ ಮತ್ತು ಶುಂಠಿ ಕಷಾಯ:

ಅರಿಶಿನ ಮತ್ತು ಶುಂಠಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಮತ್ತು ಶುಂಠಿಯಲ್ಲಿರುವ ಜಿಂಜರಾಲ್ ನೈಸರ್ಗಿಕ ನೋವು ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ತೂಕ ಇಳಿಸಲು ವ್ಯಾಯಾಮ ಮಾತ್ರ ಪರಿಹಾರವಾ?

ಕೋಲ್ಡ್ ಕಂಪ್ರೆಸ್:

ಕೋಲ್ಡ್ ಕಂಪ್ರೆಸ್ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸರಳವಾದ ಆದರೆ ಪರಿಣಾಮಕಾರಿ ವಿಧಾನವಾಗಿದೆ. ತೆಳುವಾದ ಬಟ್ಟೆಯಲ್ಲಿ ಸುತ್ತಿದ ಐಸ್ ಪ್ಯಾಕ್‌ ಅನ್ನು ನೋವಿರುವ ಜಾಗಕ್ಕೆ ಮಸಾಜ್ ಮಾಡುವುದರಿಂದ ಅದು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಉಳುಕುಗಳಂತಹ ತೀವ್ರವಾದ ಗಾಯಗಳಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ