AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vitamin D: ವಿಟಮಿನ್ ಡಿ ಸಪ್ಲಿಮೆಂಟ್​ಗಳಿಂದ ಮಧುಮೇಹದ ಅಪಾಯ ತಗ್ಗಲಿದೆ; ಅಧ್ಯಯನದಲ್ಲಿ ಬಯಲು

ವಿಟಮಿನ್ ಡಿ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದೆ. ಸೂರ್ಯನ ಬೆಳಕಿನಿಂದ ನೇರಳಾತೀತ ಕಿರಣಗಳು ಚರ್ಮವನ್ನು ತಲುಪಿದಾಗ ವಿಟಮಿನ್ ಡಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ.

Vitamin D: ವಿಟಮಿನ್ ಡಿ ಸಪ್ಲಿಮೆಂಟ್​ಗಳಿಂದ ಮಧುಮೇಹದ ಅಪಾಯ ತಗ್ಗಲಿದೆ; ಅಧ್ಯಯನದಲ್ಲಿ ಬಯಲು
Vitamin D Image Credit source: google image
TV9 Web
| Edited By: |

Updated on: Feb 09, 2023 | 12:22 PM

Share

ನಮ್ಮ ದೈನಂದಿನ ವಿಟಮಿನ್ ಡಿ (Vitamin D) ಅವಶ್ಯಕತೆಗಳನ್ನು ಪೂರೈಸಲು ಕೆಲವೊಮ್ಮೆ ಸೂರ್ಯನ ಬೆಳಕು ಮತ್ತು ಆಹಾರ ಸಾಕಾಗುವುದಿಲ್ಲ. ಈ ಕಾರಣದಿಂದಾಗಿ ವಿಟಮಿನ್ ಡಿ ಸಪ್ಲಿಮೆಂಟ್​​ಗಳನ್ನು ಅಂತಹವರಿಗೆ ನೀಡಲಾಗುತ್ತದೆ. ಈ ರೀತಿಯ ಹೆಚ್ಚಿನ ವಿಟಮಿನ್ ಡಿ ಸೇವನೆಯು ಪ್ರಿಡಿಯಾಬಿಟಿಸ್ ಹೊಂದಿರುವ ವಯಸ್ಕರಲ್ಲಿ ಟೈಪ್ 2 ಮಧುಮೇಹದ (Diabetes) ಪ್ರಮಾಣವನ್ನು ಕಡಿಮೆ ಮಾಡಬಹುದು.

ವಿಟಮಿನ್ ಡಿ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದನ್ನು ಕೆಲವು ಆಹಾರಗಳಲ್ಲಿ ಪೂರಕವಾಗಿ ಸೇರಿಸಲಾಗುತ್ತದೆ. ಸೂರ್ಯನ ಬೆಳಕಿನಿಂದ ನೇರಳಾತೀತ ಕಿರಣಗಳು ಚರ್ಮವನ್ನು ತಲುಪಿದಾಗ ವಿಟಮಿನ್ ಡಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ವಿಟಮಿನ್ ಡಿ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆ ಮತ್ತು ಗ್ಲೂಕೋಸ್ ಚಯಾಪಚಯ ಕ್ರಿಯೆ ಸೇರಿದಂತೆ ಅನೇಕ ಕಾರ್ಯಗಳಿಗೆ ನೆರವಾಗುತ್ತದೆ.

ರಕ್ತದಲ್ಲಿ ಕಡಿಮೆ ಮಟ್ಟದ ವಿಟಮಿನ್ ಡಿ ಹೊಂದಿರುವ ಮತ್ತು ಮಧುಮೇಹವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯದ ನಡುವಿನ ಸಂಬಂಧವನ್ನು ಅಧ್ಯಯನವೊಂದು ಕಂಡುಹಿಡಿದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: White Hair: ಈ ವಿಟಮಿನ್ ಕೊರತೆಯುಂಟಾದರೆ ಅವಧಿಗೂ ಮುನ್ನವೇ ಕೂದಲು ಬಿಳಿಯಾಗುವುದು

ಅಮೆರಿಕಾದ ಟಫ್ಟ್ಸ್ ವೈದ್ಯಕೀಯ ಕೇಂದ್ರದ ತಂಡವು ಮಧುಮೇಹದ ಅಪಾಯದ ಮೇಲೆ ವಿಟಮಿನ್ ಡಿ ಪೂರಕ ಪರಿಣಾಮಗಳನ್ನು ಹೋಲಿಸುವ 3 ಕ್ಲಿನಿಕಲ್ ಪ್ರಯೋಗಗಳ ವಿಮರ್ಶೆ ಮತ್ತು ಮೆಟಾ ವಿಶ್ಲೇಷಣೆಯನ್ನು ನಡೆಸಿತು. 3 ವರ್ಷಗಳ ನಂತರದ ಅವಧಿಯಲ್ಲಿ ವಿಟಮಿನ್ ಡಿ ಪಡೆದ ವಯಸ್ಕರಲ್ಲಿ ಶೇ. 22.7 ಮತ್ತು ಪ್ಲಸೀಬೊ ಪಡೆದವರಲ್ಲಿ ಶೇ. 25ರಷ್ಟು ವಯಸ್ಕರಲ್ಲಿ ಹೊಸ ಆರಂಭಿಕ ಹಂತದ ಮಧುಮೇಹವು ಸಂಭವಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Vitamin B12 Deficiency: ವಿಟಮಿನ್ ಬಿ 12 ಕೊರತೆಯಿಂದ ಉಂಟಾಗಬಹುದಾದ 5 ಗಂಭೀರ ಕಾಯಿಲೆಗಳಿವು

ಅಗ್ಗದ ವಿಟಮಿನ್ ಡಿ ಸಪ್ಲಿಮೆಂಟ್​ಗಳು 10 ಮಿಲಿಯನ್‌ಗಿಂತಲೂ ಹೆಚ್ಚು ಜನರಲ್ಲಿ ಮಧುಮೇಹದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಸೇವನೆ ಕೆಲವು ರೋಗಿಗಳಲ್ಲಿ ಟೈಪ್ 2 ಮಧುಮೇಹವನ್ನು ತಡೆಗಟ್ಟಬಹುದು. ಆದರೆ ಇನ್ನು ಕೆಲವರಿಗೆ ಇದು ಹಾನಿಯನ್ನು ಉಂಟುಮಾಡಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ