ರೆಪ್ಪೆಗೂದಲು ಉದುರುತ್ತಿದೆಯೇ? ಹಾಗಿದ್ದರೆ ಆರೋಗ್ಯ ಸಮಸ್ಯೆಯನ್ನು ತಿಳಿದುಕೊಳ್ಳಿ
ಥೈರಾಯ್ಡ್ ಹಾರ್ಮೋನ್ ಕೊರತೆಯು ಕಣ್ಣುರೆಪ್ಪೆ ಉದುರಲು ಪ್ರಮುಖ ಕಾರಣ. ಥೈರಾಯ್ಡ್ ಹಾರ್ಮೋನ್ ಕೊರತೆಯು ದೇಹದಲ್ಲಿ ಪ್ರೋಟೀನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಕೂದಲು ದುರ್ಬಲವಾಗುತ್ತದೆ. ಹೈಪೋಥೈರಾಯ್ಡಿಸಮ್ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕಣ್ಣು ರೆಪ್ಪೆಗಳು ಉದುರುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಜ್ಞರು ಎಚ್ಚರಿಸುತ್ತಾರೆ.

ಮಾನವ ದೇಹದಲ್ಲಿ ಕಣ್ಣುಗಳು ಬಹಳ ಮುಖ್ಯವಾದುದು. ಕಣ್ಣು ಬಹಳ ಸೂಕ್ಷ್ಮವಾದ್ದರಿಂದ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಣ್ಣಿನ ರೆಪ್ಪೆಗಳು ಪ್ರಮುಖ ಪಾತ್ರವಹಿಸುತ್ತವೆ. ಕಣ್ಣುಗಳನ್ನು ಧೂಳಿನಿಂದ ರಕ್ಷಿಸುವಲ್ಲಿ ಕಣ್ಣಿನ ರೆಪ್ಪೆಗಳು ಸಹಾಯಕವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಕಣ್ಣುರೆಪ್ಪೆಗಳು ಉದುರುತ್ತವೆ. ಈ ರೀತಿಯ ಸಮಸ್ಯೆಯಿಂದ ಬಳುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ.
ರೆಪ್ಪೆಗೂದಲು ಉದುರಲು ಕಾರಣಗಳು:
ಥೈರಾಯ್ಡ್ :
ಥೈರಾಯ್ಡ್ ಹಾರ್ಮೋನ್ ಕೊರತೆಯು ಕಣ್ಣುರೆಪ್ಪೆ ಉದುರಲು ಪ್ರಮುಖ ಕಾರಣ. ಥೈರಾಯ್ಡ್ ಹಾರ್ಮೋನ್ ಕೊರತೆಯು ದೇಹದಲ್ಲಿ ಪ್ರೋಟೀನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಕೂದಲು ದುರ್ಬಲವಾಗುತ್ತದೆ. ಹೈಪೋಥೈರಾಯ್ಡಿಸಮ್ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕಣ್ಣು ರೆಪ್ಪೆಗಳು ಉದುರುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಜ್ಞರು ಎಚ್ಚರಿಸುತ್ತಾರೆ.
ಇದನ್ನೂ ಓದಿ: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದೆಯಾ? ಇಂದೇ ಬಿಟ್ಟು ಬಿಡಿ
ಮೈಸ್ತೇನಿಯಾ ಗ್ರ್ಯಾವಿಸ್:
ಮೈಸ್ತೇನಿಯಾ ಗ್ರ್ಯಾವಿಸ್ ಎಂಬ ಕಾಯಿಲೆಯಿಂದ ರೆಪ್ಪೆ ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಈ ರೋಗವು ದೇಹದಲ್ಲಿನ ಸ್ನಾಯುಗಳ ದೌರ್ಬಲ್ಯದಿಂದ ಉಂಟಾಗುತ್ತದೆ. ಇದರಿಂದಾಗಿ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಿದಿಲ್ಲ. ಜೊತೆಗೆ ರೆಪ್ಪೆಗೂದಲು ಉದುರಲು ಕಾರಣವಾಗುತ್ತದೆ.
ಬೆಲ್ ಪಾಲ್ಸಿ:
ಬೆಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿದ್ದರೆ ಕಣ್ಣಿನ ರೆಪ್ಪೆಗಳು ಉದುರುತ್ತವೆ. ಬೆಲ್ ಪಾಲ್ಸಿ ಮುಖದ ನರದ ಸಮಸ್ಯೆಯಾಗಿದೆ. ಈ ಕಾಯಿಲೆಯಿಂದಾಗಿ, ಬಾಯಿ, ಕಣ್ಣುರೆಪ್ಪೆಗಳು ಮತ್ತು ಕೆನ್ನೆಗಳ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದರಿಂದ ಕಣ್ಣು ರೆಪ್ಪೆಗಳೂ ಉದುರುತ್ತವೆ. ಹಾಗಾಗಿ ಕಣ್ಣಿನ ರೆಪ್ಪೆಗಳು ಉದುರುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎನ್ನುತ್ತಾರೆ ತಜ್ಞರು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: