ಸಿಒಪಿಡಿಗೂ ಅಸ್ತಮಾಗೂ ಏನು ವ್ಯತ್ಯಾಸ?; ಯಾವುದು ಹೆಚ್ಚು ಅಪಾಯಕಾರಿ?

ನಾವು ಉಸಿರಾಡುವಾಗ ಇಂಗಾಲದ ಡೈಆಕ್ಸೈಡ್ ಅನ್ನು ದೇಹದಿಂದ ಹೊರಹಾಕುತ್ತೇವೆ ಮತ್ತು ಆಮ್ಲಜನಕವನ್ನು ಒಳಗೆ ಎಳೆದುಕೊಳ್ಳುತ್ತೇವೆ. ಆದರೆ, COPD ರೋಗಿಗಳಲ್ಲಿ ಇಂಗಾಲದ ಡೈಆಕ್ಸೈಡ್ ದೇಹದಿಂದ ಹೊರಹೋಗುವುದಿಲ್ಲ.

ಸಿಒಪಿಡಿಗೂ ಅಸ್ತಮಾಗೂ ಏನು ವ್ಯತ್ಯಾಸ?; ಯಾವುದು ಹೆಚ್ಚು ಅಪಾಯಕಾರಿ?
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 16, 2023 | 3:37 PM

ಉಸಿರಾಟದ ತೊಂದರೆ ಹಲವರಿಗೆ ನಾನಾ ರೀತಿಯ ಲಕ್ಷಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಮುಖ್ಯವಾದುದೆಂದರೆ ಅಸ್ತಮಾ. ಆದರೆ, ಇದೇ ರೀತಿ ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಎಂಬ ಕಾಯಿಲೆಯೂ ಇದೆ ಎಂಬುದು ಹಲವರಿಗೆ ತಿಳಿದಿಲ್ಲ. ಇದು ದೀರ್ಘಾವಧಿಯ ಉಸಿರಾಟದ ತೊಂದರೆಯಾಗಿದ್ದು, ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಈ ಸಿಓಪಿಡಿ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ನಾವು ಉಸಿರಾಡುವಾಗ ಇಂಗಾಲದ ಡೈಆಕ್ಸೈಡ್ ಅನ್ನು ದೇಹದಿಂದ ಹೊರಹಾಕುತ್ತೇವೆ ಮತ್ತು ಆಮ್ಲಜನಕವನ್ನು ಒಳಗೆ ಎಳೆದುಕೊಳ್ಳುತ್ತೇವೆ. ಆದರೆ, COPD ರೋಗಿಗಳಲ್ಲಿ ಇಂಗಾಲದ ಡೈಆಕ್ಸೈಡ್ ದೇಹದಿಂದ ಹೊರಹೋಗುವುದಿಲ್ಲ. ಶ್ವಾಸಕೋಶದ ವಾಯುಮಾರ್ಗಗಳು ಸಂಕುಚಿತಗೊಂಡಾಗ ಉಸಿರಾಟವು ಕಷ್ಟಕರವಾಗುತ್ತದೆ. COPDಯ ಪ್ರಾಥಮಿಕ ಸೂಚನೆಗಳೆಂದರೆ ಡಿಸ್ಪ್ನಿಯಾ, ಕೆಮ್ಮು ಮತ್ತು ಅತಿಯಾದ ಕಫದ ಉತ್ಪಾದನೆ.

ದೀರ್ಘಕಾಲದ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಎಂದರೇನು?:

ಎಂಫಿಸೆಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ ಎನ್ನುವುದು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯ (COPD) ಒಂದು ಸಮಸ್ಯೆ. COPD ಸಮಸ್ಯೆ ಶುರುವಾದ ನಂತರ ಉಸಿರಾಟವು ಹೆಚ್ಚು ಕಷ್ಟಕರವಾಗುತ್ತದೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ಜೀವನಶೈಲಿ ಮತ್ತು ಪ್ರಿಸ್ಕ್ರಿಪ್ಷನ್ ಬದಲಾವಣೆಯೊಂದಿಗೆ ಅದರ ರೋಗಲಕ್ಷಣಗಳನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ಅಸ್ತಮಾವನ್ನು ನಿಯಂತ್ರಣದಲ್ಲಿಡಲು ಇಲ್ಲಿವೆ ಸಲಹೆಗಳು

ಶ್ವಾಸಕೋಶದ ಅಲ್ವಿಯೋಲಿಗೆ ಗಾಳಿಯನ್ನು ಸಾಗಿಸುವ ಶ್ವಾಸನಾಳದ ಕೊಳವೆಗಳ ಒಳಪದರದ ಉರಿಯೂತವನ್ನು ದೀರ್ಘಕಾಲದ ಬ್ರಾಂಕೈಟಿಸ್ ಎಂದು ಕರೆಯಲಾಗುತ್ತದೆ. ಕಫದ ಹೆಚ್ಚಳ ಮತ್ತು ಅತಿಯಾದ ಕೆಮ್ಮು ಅದರ ವಿಶಿಷ್ಟ ಲಕ್ಷಣಗಳಾಗಿವೆ. ಎಂಫಿಸೆಮಾ ಎಂದು ಕರೆಯಲ್ಪಡುವ ರೋಗವು ಸಿಗರೇಟ್ ಹೊಗೆ, ಇತರ ಕೆರಳಿಸುವ ರಾಸಾಯನಿಕಗಳು ಮತ್ತು ಕಣಗಳಿಗೆ ಹಾನಿಕಾರಕವಾಗಿ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಸಮಸ್ಯೆ ತೀವ್ರವಾಗುತ್ತದೆ.

COPDಯ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ:

ಉಸಿರಾಟದ ತೊಂದರೆ

ಎದೆಯ ಸೆಳೆತ

ದೀರ್ಘವಾಗಿ ಉಸಿರಾಡಲು ತೊಂದರೆ

ಉಸಿರಾಡುವಾಗ ಉಬ್ಬಸದ ರೀತಿ ಸೌಂಡ್ ಮಾಡುವುದು

ದೇಹ ದುರ್ಬಲವಾಗುವುದು

ದೇಹದ ತೂಕ ಕಡಿಮೆಯಾಗುವುದು

ಇದನ್ನೂ ಓದಿ: ಅಸ್ತಮಾಕ್ಕೆ ಯೋಗ ಪರಿಹಾರ; ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವ 3 ಯೋಗಾಸನಗಳಿವು

COPDಗೂ ಅಸ್ತಮಾಕ್ಕೂ ಏನು ವ್ಯತ್ಯಾಸ?:

ಉಸಿರಾಟದ ತೊಂದರೆಗಳು ಮತ್ತು ನಿರ್ಬಂಧಿತ ವಾಯುಮಾರ್ಗಗಳು ಸೇರಿದಂತೆ ರೋಗಲಕ್ಷಣಗಳು COPD ಮತ್ತು ಅಸ್ತಮಾ ರೋಗದ ನಡುವೆ ಅನೇಕ ಸಾಮ್ಯತೆಗಳಿವೆ. COPD ನಿರಂತರವಾಗಿರುತ್ತದೆ. ಆದರೆ, ಅಸ್ತಮಾವನ್ನು ಕೆಲವು ಅಲರ್ಜಿಗಳು ಉಲ್ಬಣಗೊಳಿಸುತ್ತವೆ. COPDಯ ಪ್ರಮುಖ ಕಾರಣವೆಂದರೆ ಧೂಮಪಾನ. ಅಸ್ತಮಾ ಹೊಂದಿರುವ ಜನರು COPD ಹೊಂದಿರುತ್ತಾರೆ ಎಂದು ಹೇಳಲಾಗದು. COPD ಇರುವವರಲ್ಲಿ ಸಾಮಾನ್ಯವಾಗಿ ಅಸ್ತಮಾ ಇರುವುದಿಲ್ಲ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ